ವಿಮಾನ ನಿಲ್ದಾಣದಲ್ಲಿ ಮೂರ್ತಿಗಳು ಧ್ವಂಸ: ಸುಭಾಷ್ ರಾಠೋಡ್ ಆರೋಪ: ಪ್ರಕರಣ ದಾಖಲು

0
265

ಕಲಬುರಗಿ: ಇತ್ತೀಚಿಗಷ್ಟೆ ಉದ್ಘಾಟನೆಗೊಂಡಿರುವ ಕಲಬುರಗಿ ವಿಮಾನ ನಿಲ್ದಾಣದ ಆವರಣದಲ್ಲಿದ್ದ ಸಂತ ಸೇವಾಲಾಲ ಮತ್ತು ಮರಿಯಮ್ಮದೇವಿ ದೇವಾಲಯಗಳನ್ನು ತೆರವುಗೊಳಿಸಿ, ಮೂರ್ತಿಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಎಐಬಿಎಸ್‌ಎಸ್ ರಾಜ್ಯಾಧ್ಯಕ್ಷ ಸುಭಾಷ ರಾಠೋಡ ಇಲ್ಲಿನ ವಿವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

ಇಂದು ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಮಾನ ನಿಲ್ದಾಣ ಕಾಮಗಾರಿಕೆ ಸಮಯದಲ್ಲಿ ಮೂರ್ತಿಗಳನ್ನು ಧ್ವಂಸಗೈಯಲಾಗಿದ್ದು, ಇದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಇಂತಹ ಕೃತ್ಯ ವೆಸಗಿದ ತಪ್ಪಿತಸ್ಥ ಅಧಿಕಾರಿಗಳು ಮತ್ತಿತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು  ಎಂದು ಅವರು ಆಗ್ರಹಿಸಿ ಮೊದಲಿದ್ದ ಸ್ಥಳದಲ್ಲೇ ದೇವಾಲಯ ಮರು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ನಿಲ್ದಾಣ ನಿರ್ಮಾಣಕ್ಕೆ ಶೇ 90 ರಷ್ಟು ಜಮೀನು ನೀಡಿದ ಮದಿಹಾಳಮೋಕಿ ತಾಂಡಾಗಳ ಜನರ ಬೇಡಿಕೆಯಂತೆ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ ಅವರ ಹೆಸರು ಇಡಬೇಕು. ಪುನರ್ ವಸತಿ ಕೇಂದ್ರದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ ಜಮೀನು ನೀಡಿದ ರೈತರ ಕುಟುಂಬಗಳಿಗೆ ಉದ್ಯೋಗ ನೀಡಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಗೊಲ್ಲೂರವಾಡಿ ಸೇವಾಲಾಲ ಪುಣ್ಯಾಶ್ರಮದ ಬಳಿರಾಮ ಮಹಾರಾಜ, ಸಂತೋಷ ಆಡೆ, ಅರವಿಂದ ಚವ್ಹಾಣ, , ರಾಜು ಜಾಧವ, ಜಗನ್ನಾಥ ಮಾಸ್ಟರ್ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here