ಆರ್ಥಿಕ ಬಿಕ್ಕಟ್ಟು ಮುಂದಿನ ಸವಾಲುಗಳ ಕುರಿತು ಎಐಡಿವೈಓ ಸಂವಾದ

0
112

ಕಲಬುರಗಿ: ಬಂಡವಾಳ ಶಾಹಿ ಪರ ಸರಕಾರ ನೀತಿಗಳಿಂದ ಭಾರತದ ಆರ್ಥಿಕ ಕುಸಿತ ಕಂಡಿದೆ ಎಂದು ಎಐಡಿವೈಓ ರಾಜ್ಯ ಅಧ್ಯಕ್ಷೆರಾದ ಕಾ. ಎಮ್ ಉಮಾದೇವಿ ಹೇಳಿದರು

ಅವರು ಇಂದು ನಗರದ ಕನ್ನಡ ಭವನದಲ್ಲಿ ಎಐಡಿವೈಓ ಕಲಬುರಗಿ ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡಿದ್ದ ಆರ್ಥಿಕ ಬಿಕ್ಕಟ್ಟು ಕುರಿತು ಸಂವಾದ ಕಾರ್ಯಕ್ರಮದಲ್ಲಿ ಸಂವಾದಕರಾಗಿ ಮಾತನಾಡಿದರು.

Contact Your\'s Advertisement; 9902492681

ಇಂದು ಜಗತ್ತಿನಾದ್ಯಂತ ಬಹುತೇಕ ದೇಶಗಳ ಆರ್ಥಿಕತೆ ಕುಸಿಯುತ್ತಿದೆ. ಆದರೆ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಭಾರತದಲ್ಲಿ ಗಾಢವಾಗಿದೆ. ಎಂದು Iಒಈನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಹೇಳಿದ್ದಾರೆ. ವಿಶ್ವದ ೯೦% ದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟು ಇದೆ. ಆದರೆ ಭಾರತ ಮತ್ತು ಬ್ರೆಜಿಲ್‌ನಂತಹ ಬೃಹತ್ ಮಾರುಕಟ್ಟೆಗಳಲ್ಲಿ ಇದರ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಗೋಚರಿಸುತ್ತಿದೆ. ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತವು ೧೦ ಸ್ಥಾನಗಳ ಕುಸಿತ ಕಂಡು ೬೮ನೇ ಸ್ಥಾನದಲ್ಲಿದೆ. ಹಾಗೂ ಆರ್ಥಿಕತೆ ೧೦ ವರ್ಷಗಳ ಹಿಂದಕ್ಕೆ ಹೋಗುವ ಭೀತಿ ಎದುರಾಗಿದೆ ಎಂದು ಹೇಳಿದರು.

ದೇಶದಲ್ಲಿ ಸುಮಾರು ೬೦% ವಹಿವಾಟು ಕುಸಿತ ಕಂಡಿದೆ. ಅಟೋಮೋಬೈಲ್ಸ್, ಗಾರ್ಮೆಂಟ್ಸ್, ಮತ್ಸೋದ್ಯಮಗಳು ಹಾಗೂ ವಾಹನ ಮಾರಾಟ ಕ್ಷೇತ್ರಗಳು ನೋಟು ರದ್ದತಿ ಮತ್ತು ಅಧಿಕ ಉSಖಿ ಹೇರಿಕೆಯಿಂದಾಗಿ ನೆಲಕಚ್ಚಿವೆ. ಇದರಿಂದಾಗಿ ಜಿಡಿಪಿ ಶೇ. ೫ಕ್ಕೆ ಕುಸಿದಿದೆ. ಗ್ರಾಮೀಣ ಆರ್ಥಿಕತೆಯಲ್ಲಿ ಸಂಕಷ್ಟ ಉಂಟಾಗಿದೆ. ೯೦ಲಕ್ಷ ಉದ್ಯೋಗ ನಷ್ಟವಾಗಿದ್ದು, ನಿರುದ್ಯೋಗದ ಪ್ರಮಾಣ ೪೫ ವರ್ಷಗಳಲ್ಲಿಯೇ ಅತ್ಯಧಿಕ (೮.೫%) ಏರಿಕೆಯಾಗಿದೆ.

ಆದರೆ ಇನ್ನೊಂದೆಡೆ ನಮ್ಮ ಪ್ರಧಾನಮಂತ್ರಿಗಳಾದ ಶ್ರೀಮಾನ್ ಮೋದಿಯವರು ದೇಶವನ್ನು ೫ ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಏರಿಸುವ ಮಾತನಾಡುತ್ತಿದ್ದಾರೆ. ಒಳ್ಳೆಯದು ಆದರೆ ಈಗಿನ ೨.೭ ಟ್ರಿಲಿಯನ್ ಡಾಲರ್‌ನಿಂದ ೫ ಟ್ರಿಲಿಯನ್‌ಗೆ ತಲುಪಲು ಶೇ ೧೧-೧೨ರ ಜಿಡಿಪಿ ಅಗತ್ಯವಿದೆ. ಆದರೆ ದಶಕದ ಹಿಂದೆ ೮% ಇದ್ದ ಜಿಡಿಪಿ ಈಗ ೫% ಗೆ ಕುಸಿದಿದೆ ಎಂದರು.

ಅಥಿತಿಗಳಾಗಿ ಆಗಮಿಸಿದ ರೈತ ಕೃಷಿ ಕಾರ್ಮಿಕರ ಸಂಘಟನೆ (ಆರ್.ಕೆ.ಎಸ್) ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಎಮ್. ಶಶಿಧರ ಮಾತನಾಡಿ ಸ್ವಾತಂತ್ರ್ಯಾನಂತರ ೭೦ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷವೂ ಬಂಡವಾಳಶಾಹಿಗಳ ಪರವಾದ ಆರ್ಥಿಕ ನೀತಿಗಳನ್ನೇ ಜಾರಿಗೊಳಿಸಿತು. ಹಾಗೂ ಈಗಿನ ಬಿಜೆಪಿ ಸರ್ಕಾರವೂ ಆ ನೀತಿಗಳನ್ನೇ ಇನ್ನಷ್ಟು ತೀವ್ರವಾಗಿ ಜಾರಿಗೊಳಿಸುತ್ತಿದೆ. ಅದರಿಂದಾಗಿಯೇ ಈ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ’ಸಬ್ ಕಾ ಸಾಥ್, ಸಬ್ ಕಾ ವಿಕಾಸ್’, ’ಅಚ್ಚೇ ದಿನ್ ಆಯೇಗಾ’ ಎಂಬ ಕನಸುಗಳ ಮಾರಿ ಮತ ಪಡೆದ ಮೋದಿ ಸರ್ಕಾರ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವನ್ನು ೧೦೨ನೇ ಸ್ಥಾನಕ್ಕೆ ತಳ್ಳಿದೆ ಎಂದರು.

ಆದರೆ ಭಾರತದ ಇಂತಹ ಪರಿಸ್ಥಿತಿಯನ್ನು ಸುಧಾರಿಸಲು ಜನಪರ ಆರ್ಥಿಕ ನೀತಿಗಳನ್ನು ಜಾರಿಗೊಳಿಸಬೇಕಾದ ಸರ್ಕಾರ, ಆರ್ಥಿಕ ಹಿಂಜರಿತ ತಡೆಗಟ್ಟಲು ಮಾರಕ ಎಫ್‌ಡಿಐ ಮೊರೆಹೋಗುತ್ತಿದೆ. ರಾಷ್ಟ್ರಪ್ರೇಮದ ಹೆಸರಲ್ಲಿ ವಿದೇಶಿ ವಸ್ತುಗಳ ವಿರುದ್ದ ಪ್ರಚಾರ ಮಾಡುವ ಬಿಜೆಪಿ, ಆರ್‌ಎಸ್‌ಎಸ್‌ಗಳ ಸರ್ಕಾರವು ಏಕಬ್ರ್ಯಾಂಡ್ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಶೇ. ೩೦ರಷ್ಟು ಭಾರತೀಯ ಸರಕುಗಳು ಇರಬೇಕೆಂಬ ನಿಯಮವನ್ನು ಸಡಿಲ ಮಾಡಿದೆ. ಹಾಗೂ ಮಳಿಗೆಗಳನ್ನು ಸ್ಥಾಪಿಸುವ ಮುನ್ನವೇ ಆನ್‌ಲೈನ್ ಮಾರಾಟಕ್ಕೆ ಅವಕಾಶ ಕೊಡಲಾಗಿದೆ ಎಂದು ಹೇಳಿದರು.

ಇದರಿಂದ ಉದ್ಯೋಗ ಸೃಷ್ಟಿಸಲು ಸಾಧ್ಯವೇ? ಇಲ್ಲ. ಹಾಗೆಯೇ ಕಾರ್ಪೊರೇಟ್ ತೆರಿಗೆ ಕಡಿತ ಮಾಡಿ ಜನರನ್ನು ಇನ್ನಷ್ಟು ನಿರ್ಲಕ್ಷಿಸಲಾಗುತ್ತಿದೆ. ಒಟ್ಟಾರೆ ಲಾಭವೇ ಪರಮ ಗುರಿಯಾಗಿ ಹೊಂದಿರುವ ಬಂಡವಾಳಶಾಹಿ ವ್ಯವಸ್ಥೆಯು ಹೀಗೆ ಮೇಲಿಂದ ಮೇಲೆ ಬಿಕ್ಕಟ್ಟಿಗೆ ಸಿಲುಕುತ್ತದೆ. ಹಾಗೂ ಶೇ. ಒಂದರಷ್ಟು ಜನರನ್ನು ಅಗಾಧ ಸಂಪತ್ತಿನ ಒಡೆಯರನ್ನಾಗಿಸಿ, ಶೇ. ೯೯ ರಷ್ಟಿರುವ ನಮ್ಮನ್ನು ನಿರ್ಗತಿಕರನ್ನಾಗಿಸುತ್ತದೆ ಸರ್ಕಾರವನ್ನು ಟೀಕಿಸಿದರು.

ಪ್ರಸ್ತಾವಿಕವಾಗಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್ ಎಚ್ ಮಾತನಾಡಿ ಜನರ ಕೈಗೆ ಹೆಚ್ಚಿನ ಆದಾಯ ಹರಿಯುವಂತೆ ಮಾಡಲು ಆದಾಯ ತೆರಿಗೆಯನ್ನು ಕಡಿತಗೊಳಿಸಬೇಕು. ಬ್ಯಾಂಕುಗಳ ಸಾಲದ ಮೇಲಿನ ಬಡ್ಡಿದರಗಳನ್ನು ಇಳಿಸಬೇಕು ಮತ್ತು ಬ್ಯಾಂಕುಗಳು ನೀಡುವ ಬಡ್ಡಿದರ ಏರಿಸಬೇಕು ಜಿ.ಎಸ್.ಟಿ ದರಗಳನ್ನು ಕೂಡಲೇ ಇಳಿಸಬೇಕು. ಶೇ.೨೮ ತೆರಿಗೆ ಪ್ರಮಾಣವನ್ನು ಸಂಪೂರ್ಣ ವಾಪಸ್ ಪಡೆಯಬೇಕು. ಕಾರ್ಪೋರೇಟ್ ತೆರಿಗೆ ದರವನ್ನು ಏರಿಸಬೇಕು. ರೇಲ್ವೆ ಆರೋಗ್ಯ ಶಿಕ್ಷಣ ಇನ್ನಿತರ ಕ್ಷೇತ್ರಗಳಲ್ಲಿ ನೇಮಕಾತಿಯನ್ನು ತ್ವರಿತಗೊಳಿಸಬೇಕು. ಇದರಿಂದಾಗಿ ಆರ್ಥಿಕ ಕುಸಿತದಿಂದ ಪಾರಾಗಲು ಸಾಧ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ಜಿಲ್ಲಾ ಅಧ್ಯಕ್ಷರಾದ ನಿಂಗಣ್ಣ ಎಸ್ ಜಂಬಗಿ ವಹಿಸಿದ್ದು, ಈ ಸಂಧರ್ಬದಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ ಪಾಣೇಗಾಂವ, ಪ್ರಮುಖರಾದ ಮಲ್ಲಿನಾಥ ಹುಂಡೇಕಲ್, ಸಿದ್ದು ಚೌಧರಿ, ಶರಣು ವಿ.ಕೆ, ಈಶ್ವರ ಇ.ಕೆ, ಪುಟ್ಟರಾಜ್ ಲಿಂಗಶೇಟ್ಟಿ, ಶರಣಮ್ಮ ಮೋಘಾ, ಅಂಬೀಕಾ ಗುತ್ತೇದಾರ, ಸಿದ್ದಮ್ಮ ಗುತ್ತೇದಾರ, ತಿಮ್ಮಯ್ಯ ಮಾನೆ ಸೇರಿದಂತೆ ವಿದ್ಯಾರ್ಥಿ ಯುವಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶ್ವಿಗೊಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here