ಪುಸ್ತಕದಿಂದ ಬಂದ ಹಣ ನೆರೆ ಸಂತ್ರಸ್ತ ಮಕ್ಕಳ ಶಿಕ್ಷಣಕ್ಕೆ ಕೊಡುವೆ-ಅಲ್ಲಾಗಿರಿರಾಜ್

0
75

ಸುರಪುರ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಎಂಟು ಶಾಲೆಗಳು ನೆರೆಯಿಂದ ಸಂಪೂರ್ಣ ಹಾಳಾಗಿದ್ದು ಸರಕಾರಗಳು ಆ ಶಾಲೆಗಳ ಮಕ್ಕಳಿಗೆ ಪುಸ್ತಕಗಳನ್ನು ನೀಡುತ್ತದೆ,ಆದರೆ ನಾನು ನನ್ನ ಪುಸ್ತಕಗಳ ಮಾರಾಟದಿಂದ ಬಂದ ಎಲ್ಲಾ ಹಣವನ್ನು ಆ ಶಾಲೆಯ ಮಕ್ಕಳಿಗೆ ಬ್ಯಾಗ್ ಮತ್ತಿತರೆ ವಸ್ತುಗಳ ಕೊಡಿಸಲು ನೀಡುವುದಾಗಿ ಕನಕಗಿರಿಯ ಗಜಲ್ ಸಾಹಿತಿ ಅಲ್ಲಾಗಿರಿರಾಜ್ ಮಾತನಾಡಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ವಿವಿಧ ಗಣ್ಯರಿಗೆ ಸನ್ಮಾನ ಹಾಗು ಕವಿಗೋಷ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಗಜಲ್ ಸಾಹಿತ್ಯ ಜಗತ್ತಿನಲ್ಲಿಯೆ ವಿಶಿಷ್ಟ ಪ್ರಕಾರದ ಸಾಹಿತ್ಯವಾಗಿದೆ.ಸಾಹಿತಿಗಳಾದವರು ಜನರಿಗೆ,ಸಮಾಜಕ್ಕೆ ಮತ್ತು ದೇಶದ ಪರಿವರ್ತನೆಗೆ ಸಾಕ್ಷಿಯಾಗುವಂತ ಸಾಹಿತ್ಯ ಬರೆಯಬೇಕು ಅಂತ ಸಾಹಿತ್ಯ ಗಟ್ಟಿಯಾಗಿ ಉಳಿಯಬಲ್ಲದು ಮತ್ತು ಪರಿವರ್ತನೆ ಮಾಡಬಲ್ಲದು ಎಂದರು.ಅಲ್ಲದೆ ಕಸಾಪ ಕೇವಲ ವರ್ಷದ ವ್ಯಕ್ತಿ ಎಂದು ಪ್ರಶಸ್ತಿ ಮಾತ್ರ ನೀಡದೆ ಅವರ ಕುರಿತು ಕರತಿಗಳನ್ನು ಬರೆಯಿಸಬೇಕು ಆಗ ಅವರ ಸಾಧನೆಯ ನೆನಪು ನೂರಾರು ವರ್ಷ ಉಳಿಯಲಿದೆ ಎಂದು ಸಲಹೆ ನೀಡಿದರು.

Contact Your\'s Advertisement; 9902492681

ನಂತರ ನಡೆದ ಕವಿಗೋಷ್ಟಿಯಲ್ಲಿ ಹಿರಿಯ ಸಾಹಿತಿಗಳಾದ ನಬಿಲಾಲ ಮಕಾಂದಾರ,ಕೆ.ವೀರಪ್ಪ,ಬೀರಣ್ಣ ಆಲ್ದಾಳ,ಹೆಚ್.ರಾಠೋಡ,ಗೋಪಣ್ಣ ಯಾದವ್,ಕುತುಬುದ್ದೀನ್ ಅಮ್ಮಾಪುರ, ರಾಜು ಕುಂಬಾರ,ಕನಕಪ್ಪ ವಾಗಣಗೇರಾ,ಶರಣಗೌಡ ಪಾಟೀಲ, ಸಿದ್ದಯ್ಯ ಪಾಟೀಲ,ನೀಲಮ್ಮ ನಾಗರಬೆಟ್ಟ,ವೀರಣ್ಣ ಕಲಕೇರಿ,ದೇವಿಂದ್ರಪ್ಪ ಕರಡಕಲ್,ಪ್ರಕಾಶ ಅಲಬನೂರ,ಮಲ್ಲಿಕಾರ್ಜುನ ಹುದ್ದಾರ,ಈರಯ್ಯ ಕೊಳ್ಳಿಮಠ,ಕೃಷ್ಣಮೂರ್ತಿ ಎ.ಎನ್.ನಾಗರಾಜ ಜಮದ್ರಖಾನಿ,ವೆಂಕಟೇಶಗೌಡ ಪಾಟೀಲ ಸೇರಿದಂತೆ ಅನೇಕರು ತಮ್ಮ ಕವನ ವಾಚನ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ನಾಟಕಕಾರ ಎಲ್.ಬಿ.ಕೆ.ಆಲ್ದಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ,ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ,ಚಂದ್ರಕಾಂತ ಕರದಳ್ಳಿ,ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ,ರಾಜೇಖರ ದೇಸಾಯಿ ಉಪಸ್ಥಿತರಿದ್ದರು.ದೇವು ಹೆಬ್ಬಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here