ಹವಾಮಾನ ವೈಪರೀತ್ಯ: ತೊಗರಿಯಲ್ಲಿ ಮೊಗ್ಗು ಮತ್ತು ಹೂ ಕಪ್ಪಾಗಿ ಒಣಗುವಿಕೆಯ ಹತೋಟಿ

0
106

ಕಲಬುರಗಿ: ಜಿಲ್ಲೆಯಲ್ಲಿ ಸಧ್ಯತೊಗರಿ ಮೊಗ್ಗು ಹಾಗೂ ಆರಂಭದ ಹೂವಾಡುವಿಕೆ ಹಂತದಲ್ಲಿದ್ದು, ಮಂಜಿನ ವಾತಾವರಣದ ನಂತರ ಎಲೆ, ದೇಟು ಹಾಗೂ ಹೂವಿನ ಮೇಲೆ ಸಣ್ಣಗೋಲಾಕಾರದಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುವುದರಿಂದ ಮೊಗ್ಗು ಹಾಗೂ ಹೂ ಉದುರುವಿಕೆಅಲ್ಲಲ್ಲಿಕಂಡು ಬಂದಿದೆ. ಉಷ್ಣಾಂಶ ೨೫ ಸಿ.ಕ್ಕಿಂತಕಡೆಮೆ ಹಾಗೂ ಮೊಡಕವಿದ ವಾತವರಣ ಮತ್ತುತುಂತುರು ಮಳೆ, ಮುಂಜಾನೆ ಮಂಜುಇದ್ದಾಗರೋಗದ ಬಾದೆ ಹೆಚ್ಚಾಗಿ ಕಂಡು ಬರುತ್ತದೆ ಎಂದು ಐಸಿಎಆರ್-ಕೃಷಿ ವಿಜ್ಞಾನಕೇಂದ್ರದ ವಿಜ್ಞಾನಿ ತಿಳಿಸಿದ್ದಾರೆ.

ಇದಕ್ಕಾಗಿರೈತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.ಈ ರೋಗದ ಚಿಹ್ನೆಗಳು ಕಂಡು ಬಂದಾಗ ಪ್ರತಿ ಲೀಟರ್‌ರೋಗ ನೀರಿಗೆ 1 ಗ್ರಾಂ.ಕಾರ್ಬನ್‌ಡೈಜಿಮ್ 50 ಡಬ್ಲು.ಪಿ ಬೆರೆಸಿ ಸಿಂಪಡಿಸಬೇಕು.ತೊಗರಿಯಲ್ಲಿ ಹೂ ಮತ್ತು ಕಾಯಿ ಉದಿರುವಿಕೆ ನಿಲ್ಲಿಸಲು ಮತ್ತು ಕಾಳು ದಪ್ಪಗಲು-ಪಲ್ಸ್‌ಮ್ಯಾಜಿಕ್ 2 ಕೆಜಿ 200 ಲೀಟರ ನೀರಿನ ಬ್ಯಾರಲ್ ಪ್ರತಿಎಕರೆಗೆ ಸಿಂಪಡಿಸಬೇಕು.

Contact Your\'s Advertisement; 9902492681

ಅಕ್ಟೋಬರ್‌ಕೊನೆಯ ವಾರದಲ್ಲಿ ಬೆಳೆಯ ಮೇಲೆ ಮಂಜಿನ ಹನಿಗಳು ಬಿದ್ದ ನಂತರ ಮೊಗ್ಗು ಮತ್ತು ಹೂ ಕಪ್ಪಾಗಿ ಸುಟ್ಟು ಎಲೆಗಳಲ್ಲೂ ಕೂಡ ಎಲೆಚುಕ್ಕೆ ಕಬ್ಬಿಣರೋಗಕಂಡು ಬಂದಿದೆ.ಪ್ರತಿ ವಾರಆಗುತ್ತಿರುವ ಹವಾಮಾನ ಬದಲಾವಣೆ ಹಾಗೂ ವಾತಾವರಣದ ಹಾಗೂ ಭೂಮಿಯತೇವಾಂಶರೋಗದತೀವ್ರತೆ ಮೇಲೆ ಪರಿಣಾಮ ಬೀರುತ್ತಿದೆ.ಚಳಿಯ ದಿನಗಳು ಇನ್ನೂಆರಂಭ.ಚಳಿಯ ಅಂಶ ಹೆಚ್ಚಾದಲ್ಲಿ ಮಾತ್ರ, ಹೊಸ ಮೊಗ್ಗು ಮತ್ತು ಹೂಗಳ ರಚನೆಉತ್ತಮವಾಗಬಹುದುಎಂದು ಕೃಷಿ ವಿಜ್ಞಾನಕೇಂದ್ರದ ವಿಜ್ಞಾನಿಗಳಾದ ಡಾ.ರಾಜು. ಜಿ. ತೆಗ್ಗೆಳ್ಳಿ ಹಾಗೂ ಡಾ.ಜಹೀರ್‌ಅಹಮ್ಮದ್‌ರವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here