ದೆಹಲಿ/ಕಲಬುರಗಿ: ಕವಿ, ವಿಮರ್ಶಕ, ಸಂಶೋಧಕ, ಪ್ರಾಧ್ಯಾಪಕರೂ ಆಗಿದ್ದ ಹಿರಿಯ ಸಾಹಿತಿ ಡಾ. ಚೆನ್ನಣ್ಣ ವಾಲೀಕಾರ ಅವರು ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಶೋಕ ವ್ಯಕಪಡಿಸಿದ್ದಾರೆ.
ಸದ್ಯ ದಹೆಲಿಯಲ್ಲಿರು ಶಾಸಕ ಸಾಮಾಜಿಕ ಜಾಲತಾಣದಲ್ಲಿ ದಿವಂಗತ ಸಾಹಿತಿ ವಾಲಿಕಾರ ಅವರ ಭಾವಚಿತ್ರ ಪೋಸ್ಟ್ ಮಾಡಿ ದುಃಖ ವ್ಯಕ್ತಪಡಿಸಿ, ಬಂಡಾಯ ಸಾಹಿತ್ಯದ ಮೇಲುದನಿಯಾಗಿದ್ದ ಇವರು, ಮೊದಲಿನಿಂದ ಕೊನೆಯ ಪುಟದವೆರಗೂ ಎಲ್ಲೂ ಪೂರ್ಣವಿರಾಮ, ಅಲ್ಪವಿರಾಮ, ಪ್ರಶ್ನಾರ್ಥಕ ಇತ್ಯಾದಿ ಯಾವುದೇ ಚಿಹ್ನೆಗಳನ್ನು ಬಳಸದೇ ಒಂದೇ ವಾಕ್ಯದಲ್ಲಿ ಬರೆದ “ವ್ಯೋಮಾವ್ಯೋಮಾ” ಎಂಬ 1,030 ಪುಟಗಳ ಬೃಹತ್ ಪ್ರಾಯೋಗಿಕ ಕಾವ್ಯ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟ ಪ್ರಯತ್ನವಾಗಿತ್ತು.
ಕಲ್ಯಾಣ ಕರ್ನಾಟಕದ ಗ್ರಾಮದೇವತೆಗಳ ಬಗ್ಗೆ ಪ್ರಬಂಧ ಮಂಡಿಸಿದ್ದ ಇವರು, ಬಂಡಾಯ ಸಂಘಟನೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ಶೋಷಿತ ಸಮುದಾಯಗಳ ಧ್ವನಿಯಾಗಿದ್ದರು.
ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.