ಶಹಾಪುರದಲ್ಲಿ ಆಧಾರ್ ಕಾರ್ಡ್ ಗಾಗಿ ಸಾರ್ವಜನಿಕರ ಹರಸಾಹಸ

0
109
  • ಬಸವರಾಜ ಸಿನ್ನೂರ

ಶಹಾಪುರ: ಶಹಾಪುರ ನಗರದ ಎಸ್.ಬಿ.ಐ ಬ್ಯಾಂಕಿನ ಮುಂದುಗಡೆ ಸಾರ್ವಜನಿಕರು ಮಧ್ಯರಾತ್ರಿ ಹನ್ನೆರಡು ಗಂಟೆಯಿಂದಲೇ ಆಧಾರ್ ಕಾರ್ಡಿಗಾಗಿ ಸರತಿ ಸಾಲಿನಲ್ಲಿರುವ ನಿ೦ತಿರುವ ಜನರು ತುಂಬಾ ತೊಂದರೆ ಅನುಭವಿಸುವ೦ತಾಗಿದೆ.

ಶಹಾಪುರ ಪಟ್ಟಣದಲ್ಲಿ ಕೇವಲ ಮೂರು ಆಧಾರ್ ಕೇಂದ್ರಗಳು ಮಾತ್ರ ಇದ್ದು ಜನರಿಗೆ ತುಂಬಾ ತೊಂದರೆಯಾಗುತ್ತಿದೆ ಇನ್ನಷ್ಟು ಹೆಚ್ಚು ಆಧಾರ್ ಕೇಂದ್ರಗಳನ್ನು ತೆರೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

Contact Your\'s Advertisement; 9902492681

ಗ್ರಾಮೀಣ ಭಾಗದಿಂದ ಬರುವ ಬಡ ಕೂಲಿ ಕಾರ್ಮಿಕರು ಎಲ್ಲ ಕೆಲಸವನ್ನು ಬದಿಗೊತ್ತಿ ಮಧ್ಯ ರಾತ್ರಿ ಹನ್ನೆರಡು ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಆಧಾರ್ ಕಾರ್ಡ್ ತೆಗೆಯಬೇಕಾದರೆ ಹರಸಾಹಸ ಪಟ್ಟ೦ತಾಗುತ್ತದೆ.  ಆಧಾರ್ ಕಾರ್ಡ್ ತೆಗೆಸಲು ನಗರಕ್ಕೆ ಬರಬೇಕಾದರೆ ನಾಲ್ಕು ನೂರರಿಂದ ಐದು ನೂರು ರೂಪಾಯಿ ಖರ್ಚಾಗುತ್ತದೆ ಮಧ್ಯದಲ್ಲಿ ವಿದ್ಯುತ್ ಕೈಕೊಡುತ್ತದೆ ಒಂದೊಂದು ದಿನ ಕಂಪ್ಯೂಟರ್ ಕೆಟ್ಟು ಹೋಗುತ್ತದೆ ನೆಟ್ವರ್ಕ್ ಸಿಗುವುದಿಲ್ಲ ಇಂಥ ಅನೇಕ ತೊಂದರೆಗಳು ಸಾರ್ವಜನಿಕರು ಅನುಭವಿಸುವಂತಾಗಿದೆ.

ಚಿಕ್ಕ ಚಿಕ್ಕ ಮಕ್ಕಳಿಗೂ ಆಧಾರ್ ಕಾರ್ಡ್ ಬೆರಕಾದರೆ ಮಧ್ಯರಾತ್ರಿಯಲ್ಲಿ ಮಕ್ಕಳು ಮಲಗಿರುತ್ತಾರೆ ಮಕ್ಕಳನ್ನು ಎತ್ತಿಕೊಂಡು ಆಧಾರ್ ಕೇಂದ್ರಕ್ಕೆ ಬರಬೇಕಾದರೆ ಸಾಕಷ್ಟು ತೊಂದರೆಗಳು ಎದುರಾಗುತ್ತವೆ ಎನ್ನುತ್ತಾರೆ ಗೌಡೂರು ಶಿವರಾಜ್. ಈ ಆಧಾರ್ ಕೇಂದ್ರಕ್ಕೆ ದಿನಾಲು ನೂರರಿಂದ ಇನ್ನೂರು ಜನರು ಬರುತ್ತಾರೆ ಆದರೆ ಕೇವಲ ಮೂವತ್ತು ಜನರಿಗೆ ಮಾತ್ರ ಆಧಾರ್ ಕಾರ್ಡ್ ಮಾಡಿಸಿಕೊಳುವ ಅವಕಾಶವಿರುವುದರಿಂದ ಇನ್ನುಳಿದ ಜನ ಮರಳಿ ಗ್ರಾಮಕ್ಕೆ ಹೋಗುತ್ತಾರೆ.

ಶಹಾಪುರ ತಾಲ್ಲೂಕಿನ ಹಲವಾರು ದೊಡ್ಡ ಗ್ರಾಮಗಳಲ್ಲಿ ಆಧಾರ್ ಕಾರ್ಡ್ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here