ಮಹಾರಾಷ್ಟ್ರ ದಲ್ಲಿ ಸರ್ಕಾರ ರಚಿಸುವ ಶಿವಸೇನೆ-ಕಾಂಗ್ರೆಸ್ ಪ್ರಯತ್ನ ಹಾಸ್ಯಾಸ್ಪದ: ಅಂಬಾರಾಯ ಅಷ್ಠಗಿ

0
96

ಕಲಬುರಗಿ: 25ನೇ ನವೆಂಬರ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡನವಿಸ ನೇತೃತ್ವದ ಭಾಜಪ ಮತ್ತು ಎನ್ ಸಿ ಪಿ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದರೂ ಕೂಡ ಶಿವಸೇನೆ ನೇತೃತ್ವದ ಕಾಂಗ್ರೆಸ್ ಮತ್ತು ಶಾಸಕರ ಬೆಂಬಲವೇ ಇಲ್ಲದ ಶರದ್ ಪವಾರ ನೇತೃತ್ವದ ಎನ್ ಸಿ ಪಿ ಪಕ್ಷವೂ ತಮಗೆ 162 ಶಾಸಕರ ಬೆಂಬಲವಿದೆ ಎಂದು ರಾಜ್ಯಪಾಲರಲ್ಲಿ ಸರ್ಕಾರ ರಚನೆಗೆ ಹಕ್ಕೋತ್ತಾಯ ಮಾಡುತ್ತಿರುವುದು ಶಿವಸೇನೆ ಮತ್ತು ಕಾಂಗ್ರೆಸ್ ಪಕ್ಷದ ಅಧಿಕಾರ ದಾಹವನ್ನು ತೋರಿಸುತ್ತದೆ ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಅಂಬಾರಾಯ ಅಷ್ಠಗಿ ಹೇಳಿದರು.

ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡನ್ವಿಸ್ ನೇತೃತ್ವದ ಭಾರತೀಯ ಜನತಾ ಪಕ್ಷಕ್ಕೆ ಅತಿದೊಡ್ಡ ಪಕ್ಷವಾಗಿದೆ.ಎನ್ ಸಿ ಪಿ ಪಕ್ಷದ ಅಜೀತ ಪವಾರ ನೇತೃತ್ವದ ಸುಮಾರು 50 ಕ್ಕೂ ಹೆಚ್ಚು ಶಾಸಕರು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲಸಿ ಸರ್ಕಾರ ನಡೆಸುತ್ತಿರುವಾಗ ಮತ್ತೊಂದು ಸರ್ಕಾರ ರಚನೆಗೆ ಹಕ್ಕೋತ್ತಾಯ ಮಾಡುತ್ತಿರುವುದು ಶಿವಸೇನೆಯೊಂದಿಗೆ ಸರ್ಕಾರ ರಚಿಸಲು ಮುಂದಾಗಿರುವದು ಕಾಂಗ್ರೆಸ್ ಪಕ್ಷದ ಅಧಿಕಾರದ ದಾಹವನ್ನು ತೋರಿಸುವ ಜೊತೆಗೆ ಆ ಪಕ್ಷದ ಬುಟಾಟಿಕೆ ಮತ್ತು ಪೊಳ್ಳು ಜಾತ್ಯತೀತ ಮೌಲ್ಯಗಳನ್ನು ದೇಶಕ್ಕೆ ಪರಿಚಯಿಸಿದೆ ಎಂದರು.

Contact Your\'s Advertisement; 9902492681

ನಾಳೆ ಬೆಳಿಗ್ಗೆ ಸುಪ್ರೀಂಕೋರ್ಟ್ ತೀರ್ಪನ್ನು ನೀಡಿದ ನಂತರ, ಭಾರತೀಯ ಜನತಾ ಪಕ್ಷದ ನೇತೃತ್ವದ ಸಮ್ಮಿಶ್ರ ಸರಕಾರ ಸದನದಲ್ಲಿ ವಿಶ್ವಾಸ ಮತಯಾಚನೆವರೆಗೂ ಕಾಯದಿರುವ ಕ್ರಮವನ್ನು ಅಂಬಾರಾಯ ಅಷ್ಠಗಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here