ಕಲಬುರಗಿ: ಎಲ್.ಟಿ.ಟಿ, ಎಕ್ಸ್‌ಪ್ರೇಸ್ ಶಹಬಾದ, ಚಿತ್ತಾಪೂರ, ಸೇಡಂ ಸ್ಟೇಷನ್‌ಗಳಿಗೆ ತಡೆ ನೀಡಿ, ಕಲಬುರಗಿಯಿಂದ ಬೆಂಗಳೂರಿಗೆ ಸಾಯಂಕಾಲ, ಹೊಸ ರೈಲು ಆರಂಭಿಸಿ ಮುಂಜಾನೆ ಜಾವ ಬೆಂಗಳೂರಿಗೆ ತಲಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಜನಪರ ಸಂಘರ್ಷ ಸಮಿತಿಹ ಹಾಗೂ ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ತಂಡ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಸೋಲಾಪೂರ ರೈಲ್ವೆ ವಿಭಾಗದ ವಿಭಾಗೀಯ ವ್ಯವಸ್ಥಾಪಕರಾದ ಶೈಲೇಶ ಗುಪ್ತಾ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಅವರು ಇತ್ತೀಚಿಗೆ ರೈಲ್ವೆ ನಿಲ್ದಾಣಕ್ಕೆ ರೈಲ್ವೆ ಕ್ಷೇತ್ರದ ಪರಿಶೀಲನೆಗೆ ಭೇಟಿ ನೀಡಿರುವ ಸಂದರ್ಭದಲ್ಲಿ ಮಾತನಾಡಿ ಕಲ್ಯಾಣ ಕರ್ನಾಟಕ ಪ್ರದೇಶದ ವಿಭಾಗೀಯ ಕೇಂದ್ರ ಕಲಬುರಗಿಯಿಂದ ದಿನಾಲು ಸಹಸ್ರಾರು, ಜನರು ಬೆಂಗಳೂರಿಗೆ ಪ್ರವಾಸ ಮಾಡುತ್ತಿದ್ದು, ಕೋಲಾಪೂರ ದಿಂದ ಸೋಲಾಪೂರ ರೈಲ್ವೆ ಕಲಬುರಗಿ ವರೆಗೆ ವಿಸ್ತರಿಸಿ ಒತ್ತಾಯಿಸಿದರು.
ಅದರಂತೆ ಕಲಬುರಗಿ ರೈಲ್ವೆ ನಿಲ್ದಾಣದ ಸುವ್ಯವಸ್ಥೆ ಪಾರ್ಕಿಂಗ್ ವ್ಯವಸ್ಥೆ ಮತ್ತು ಇತರೆ ವ್ಯವಸ್ಥೆಗಳ ಬಗ್ಗೆ ವಿಶೇಷ ಆದ್ಯತೆ ನೀಡಲು ಆಗ್ರಹಿಸಲಾಯಿತು. ಮಾನ್ಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಸಮಿತಿಯ ಬೇಡಿಕೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸುವದಾಗಿ ಭರವಸೆ ನೀಡಿದ್ದರು.
ಇದೇ ಸಂದರ್ಭದಲ್ಲಿ ಕಲಬುರಗಿ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಪ್ರಸಾದ ಮತ್ತು ಸಮಿತಿಯ ಮುಖಂಡರಾದ ಮಹಮ್ಮದ ಮಿರಾಜೋದ್ದೀನ, ಜ್ಞಾನಮಿತ್ರ ಶ್ಯಾಮವೆಲ್, ಮನಿಷ ಜಾಜು, ಡಾ. ವಾಜೀದ ದಾಗಿ, ಅಬ್ದುಲ್ ರಹೀಮ, ಮಲ್ಲಿನಾಥ ಸಂಘಶೆಟ್ಟಿ, ಬಾಬಾ ಫಕ್ರೋದ್ದೀನ, ಇಂದೋದರ ಜಾಧವ, ಅಸ್ಲಂ ಚೌಂಗೆ, ಬಿ.ಜೆ.ಪಿ ಮುಖಂಡರಾದ ಶರಣಪ್ಪ ಹದನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.