ಕಲಬುರಗಿ: ನಗರದ ಮಕ್ತಂಪುರದ ಶ್ರೀ ಜಡೆಶಂಕರಲಿಂಗ ದೇವಸ್ಥಾನದಲ್ಲಿ ಜಿಲ್ಲಾ ಬಣಗಾರ ಸಮಾಜದ ಆಶ್ರಯದಲ್ಲಿ ಮಂಗಳವಾರ ಸಂಜೆ ಕಾರ್ತಿಕ ಮಾಸದ ಅಂಗವಾಗಿ ‘ದೀಪೋತ್ಸವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಮಾಜದ ಹಿರಿಯ ದಂಪತಿಗಳಾದ ಶ್ರದ್ಧಾನಂದ ಕಾಳಗಿ, ವಿಜಯಕುಮಾರ ಕಮರಡಗಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜದ ಅಧ್ಯಕ್ಷ ಅಶೋಕ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಮಾಜದ ಇಬ್ಬರು ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ತಲಾ ೫೦ ಸಾವಿರ ರೂ.ಗಳ ಚೆಕ್‌ಗಳನ್ನು ವಿತರಿಸಲಾಯಿತು.
ದೀಪೋತ್ಸವ ಕಾರ್ಯಕ್ರಮದ ನೇತೃತ್ವವನ್ನು ದೀಪಾ ದಂಡೋತಿ ವಹಿಸಿದ್ದರು.
ಪೂಜಾ ಧನಶೆಟ್ಟಿ, ಸರಸ್ವತಿ ಕಾಳಗಿ, ಮಹಾದೇವಿ ಕಮರಡಗಿ, ಶಕುಂತಲಾ ದೊಡ್ಡಮನಿ, ವೈಶಾಲಿ ದಂಡೋತಿ, ಮಹಾನಂದ ಘೂಳಿ, ಶೋಭಾ ಹಂಪಾಗೋಳ್, ಶಾಂತಾ ಉಡಚಣ್, ಅಲ್ಲದೆ ಆನಂದ ದಂಡೋತಿ, ಚಂದ್ರಶೇಖರ ಧನಶೆಟ್ಟಿ,ಬಸವರಾಜ ಕಮರಡಗಿ, ಪ್ರವೀಣ ನಂದಿ, ರವೀಂದ್ರ ಕುಮಾರ್ ಕಾಳಗಿ, ಅಶೋಕ ಕಾಳಗಿ, ವಿನೋದ ಬಾಬು ಮೇಲಕೇರಿ, ನಾಗಪ್ಪ ರೋಣದ, ಶಾಂತಪ್ಪ ಘೂಳಿ, ಬಸವಲಿಂಗಪ್ಪಾ ದೇವಾಪುರ, ಸುರೇಶ ಉಡಚಣ್, ರವೀಂದ್ರ ದಂಡೋತಿ, ಸಿದ್ದಣ್ಣ ಕಮರಡಗಿ, ವೀರಪ್ಪ ಉಡಚಣ್ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.