ಕಲಬುರಗಿ ಏರ್ ಪೋರ್ಟ್ ಮಂದಿರ ಧ್ವಂಸ ಪ್ರಕರಣ: ಡಿ.5ರಂದು ಬೃಹತ್ ಪ್ರತಿಭಟನೆ

0
298

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸಂತ ಸೇವಾಲಾಲ ಮಹಾರಾಜರ ಮತ್ತು ಮರಿಯಮ್ಮದೇವಿಯ ದೇವಸ್ಥಾನ ಧ್ವಂಸ ಗೊಳ್ಳಿಸಿ ಲಕ್ಷಾಂತರ ಜನತೆಯ ಭಾವನೆಗಳಿಗೆ ಧಕ್ಕೆಯಾಗಿ ಅನೇಕ ಹೋರಾಟಗಳು ನಡೆದರೂ ಸಹ ಜಿಲ್ಲಾಡಳಿತ ಮತ್ತು ಪೊಲೀಸ ಇಲಾಖೆ ಸಮಗ್ರವಾಗಿ ತನಿಖೆ ನಡೆಸುವುದು ಬಿಟ್ಟು ಗಾಢ ನಿದ್ರೆಯಲ್ಲಿರುವುದು ಖಂಡನೀಯವಾಗಿದ್ದು, ಕೂಡಲೇ ಅಪರಾಧಿಗಳನ್ನು ಬಂಧಿಸಿ, ಆ ಸ್ಥಳದಲ್ಲಿ ಮಂದಿರ ನಿರ್ಮಿಸುವಂತೆ ಒತ್ತಾಯಿಸಿ ಶ್ರೀನಿವಾಸ ಸರಡಗಿಯ ಕ್ರಾಸ್ ಹತ್ತಿರ ಡಿ. 5 ರಂದು ಬೆಳಿಗ್ಗೆ 11.00 ಗಂಟೆಗೆ ಬೃಹತ್ ರಸ್ತೆ ತಡೆ ಹಮ್ಮಿಕೊಳ್ಳಲಾಗಿದೆ ಎಂದು ಎಂದು ಶ್ರೀ ಗುರು ಚಿಕ್ಕ ವಿರೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ. ರೇವಣಸಿದ್ಧ ಶಿವಾಚಾರ್ಯರರು ತಿಳಿಸಿದರು.

ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಶ್ರೀನಿವಾಸ ಸರಡಗಿಯ ಸೀಮೆಯ ಪರಿಸರದಲ್ಲಿ ನಿರ್ಮಾಣವಾಗಿರುವ ಕಲಬುರಗಿ ವಿಮಾನ ನಿಲ್ದಾಣದ ಆವರಣದಲ್ಲಿದ್ದ ಪೂಜ್ಯ ಶ್ರೀ ಸಂತ ಸೇವಾಲಾಲ ಮಹಾರಾಜರ ಮತ್ತು ಮರಿಯಮ್ಮ ದೇವಿ ದೇವಸ್ಥಾನ ಕಟ್ಟಡ ಹಾಗೂ ದೇವರ ಮೂರ್ತಿಗಳನ್ನು ಧ್ವಂಸಗೊಳಿಸುವುದರ ಮೂಲಕ ನಾಡಿನ ಮತ್ತು ರಾಷ್ಟ್ರದ ಕೋಟ್ಯಾಂತರ ಮುಗ್ಧ ಮತ್ತು ಅಮಾಯಕ ಬಂಜಾರಾ ಸಮುದಾಯದ ಭಾವನೆಗಳನ್ನು ಛಿದ್ರಗೊಳಿಸಿರುವುದು ಅತ್ಯಂತ ಘೋರ ಮತ್ತು ಖಂಡನೀಯವಾಗಿದೆ ಎಂದು ಕಳವಳ ವ್ಯಕ್ತ ಪಡಿಸಿದರು.

Contact Your\'s Advertisement; 9902492681

ಈಗಾಗಲೇ ಇದರ ಕುರಿತು ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿ ಒಂದು ವಾರ ಕಳೆಯುತ್ತ ಬಂದರೂ ಸಹ ಇಲ್ಲಿಯವರೆಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಬಂಧಿಸುವುದು ಬಿಟ್ಟು ಪೊಲೀಸ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ನಾಗಲಿಂಗಯ್ಯ ಮಠಪತಿ .ಹಣಮಂತರಾಯ ಅಟ್ಟೂರ.ರವಿ ಶಹಾಪೂರಕರ್. ಸಂಗಯ್ಯ ಹಿರೇಮಠ.ಲಿಂಗನಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here