ರಾಜು ಹದನೂರಗೆ ಭಾರತ ಜ್ಯೋತಿ-ಸಮಾಜ ಸೇವೆ ಪ್ರಶಸ್ತಿ

0
33

ಕಲಬುರಗಿ: ವಿದ್ಯಾರ್ಥಿ ದೆಶೆಯಿಂದ ಸತತವಾಗಿ ಅನ್ಯಾಯದ ವಿರುದ್ಧ ಮತ್ತು ದೀನ, ದಲಿತ, ಬಡವರ ಸಲುವಾಗಿ ಒಂದು ದಶಕ ಮೀರಿ ಕೆಲಸ ಮಾಡುತ್ತಾ ಬಂದಿರುವ ರಾಜು ಯಲ್ಲಪ್ಪ ಹದನೂರ ಅವರನ್ನು ನ್ಯೂ ಡೆಲ್ಲಿಯ ಇಂಡಾ ಇಂಟರ್‌ನ್ಯಾಷನಲ್ ಪ್ರೇಂಡಶೀಪ್ ಸೋಸೈಟಿಯು ಇವರನ್ನು ಗುರುತಿಸಿ ನವೆಂಬರ ೨೭ ರಂದು ಭಾರತ ಜ್ಯೋತಿ ಸಮಾಜ ಸೇವೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೆರಿಸಿಕೊಂಡಿರುವ ರಾಜು ಅವರು ಕನ್ನಡ ಪರ, ದಲಿತ ಪರ, ಪೌರ ಕಾರ್ಮಿಕರ ಬೇಡಿಕೆಗಳ ಸಲುವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಜನಶಕ್ತಿ ಹೋರಾಟ ವೇದಿಕೆ (ರಿ) ೨೦೧೧ ರಿಂದ ಸಂಸ್ಥಾಪಕನಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ವೇದಿಕೆಯಲ್ಲಿ ಸಾವಿರಾರು ಸದಸ್ಯರು ಪದಾಧಿಕಾರಿಗಳಾಗಿದ್ದಾರೆ. ಈ ವೇದಿಕೆಯ ಉದ್ದೇಶ ಅನ್ಯಾಯ ಮತ್ತು ದೌರ್ಜನ್ಯದ ವಿರುದ್ದ ಹೋರಾಟ ಮಾಡುವುದು. ಹಾಗೂ ಈ ಭಾಗದ ಜನರ ಸಲುವಾಗಿ ಗ್ರಾಮೀಣ ಅಭಿವೃದ್ದಿ ಮತ್ತು ಕೌಶಲ್ಯ ಅಭಿವೃದ್ದಿ ಹೊಂದಲು ಮದರ್ ತೆರೆಸಾ ಸೇವಾ ಸಂಸ್ಥೆಯನ್ನು ೨೦೧೦ ರಲ್ಲಿ ಸ್ಥಾಪಿಸಿದ್ದಾರೆ. ಈ ಸಂಸ್ಥೆಯ ಸೌಲಭ್ಯವನ್ನು ಈ ಭಾಗದ ಜನರು ಪಡೆದುಕೊಳ್ಳುತ್ತಿದ್ದಾರೆಂದು ರಾಜು ಹದನೂರ ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ರಾಜು ಹದನೂರ ಅವರು ರಾಜಕೀಯವಾಗಿ ೨೦೧೩ ರಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ವಾರ್ಡ್ ನಂ. ೪೫ ರಲ್ಲಿ ಕೆ.ಜೆ.ಪಿ. ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದರು. ನಂತರ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಾ ಮಾದಿಗ ದಂಡೋರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಸಿದ್ದರಾಮಯ್ಯನವರು ೨೦೧೭ ಮೇ ೨೮ ರಂದು ಕಲಬುರಗಿಗೆ ಆಗಮಿಸಿದ್ದಾಗ ಬಾಬು ಜಗಜೀವನರಾಮ ಪುತ್ಥಳಿ ಉದ್ಘಾಟನೆ ಸಂದರ್ಭದಲ್ಲಿ ರಾಜು ಹದನೂರ ಹಾಗೂ ಅವರ ಸಂಗಡಿಗರು ಕಪ್ಪು ಬಾವುಟ ತೋರಿಸಿ ಆರು ದಿನಗಳ ಕಾಲ ಜೈಲುವಾಸ ಅನುಭವಿಸಿದ್ದೇವೆ ಹಾಗೂ ಮಾದಿಗ ಸಮುದಾಯದ ಬಹು ಬೇಡಿಕೆಯಾದ ಎ.ಜೆ. ಸದಾಶಿವ ಆಯೋಗ ವರದಿಯನ್ನು ಅನುಷ್ಠಾನ ಮಾಡಲು ವಿಳಂಭ ಧೋರಣೆಯನ್ನು ಪ್ರತಿಭಟಿಸಿದ್ದೇವೆ ಎಂದು ರಾಜು ಹದನೂರ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here