ಹಾಸ್ಟಲ್ ಸಮಸ್ಯೆ ಈಡೇರಿಸುವ ಬಗ್ಗೆ ಸುಳ್ಳು ಭರವಸೆ ನೀಡಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಎಸ್.ಎಫ್.ಐ ಆಗ್ರಹ

0
415

ರಾಯಚೂರು: ಇಲ್ಲಿನ ಹಟ್ಟಿ ಪಟ್ಟಣದ ಮೆಟ್ರಿಕ್-ನಂತರದ ಹಾಸ್ಟೆಲ್ ಗೆ ಮೂಲಭೂತ ಸೌಕರ್ಯ ಒದಗಿಸುವುದಾಗಿ ಸುಳ್ಳು ಭರವಸೆ ನೀಡಿದ  ವಾರ್ಡನ್ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು‌ ಎಂದು ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ವೀರಾಪುರ್ ಆಗ್ರಹಿಸಿದ್ದಾರೆ.

ಜಿಲ್ಲೆಯ ಹಟ್ಟಿ ಪಟ್ಟಣದ ಮೆಟ್ರಿಕ್ ನಂತರ ಹಾಸ್ಟೆಲ್‌ಗೆ ಮೂಲಭೂತ ಸೌಕರ್ಯ ನೀಡಲು ಎಸ್ಎಫ್ಐನಿಂದ ಅಕ್ಟೋಬರ್ 9 ರಂದು ಪ್ರತಿಭಟನೆ ನಡೆಸಲಾಗಿತ್ತು. ಅಂದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಸುಬ್ರಮಣ್ಯ, ತಾಲೂಕ ಸಮಾಜ ಕಲ್ಯಾಣ ಅಧಿಕಾರಿ ಎಂ. ರವಿ ಹಾಗೂ ಮೇಲ್ವಿಚಾರಕ ಚಂದ್ರಶೇಖರ್ ಸಂಘಟನೆ ಇಟ್ಟಿದ್ದ ಬೇಡಿಕೆಗಳನ್ನು15 ದಿನಗಳ ಒಳಗಾಗಿ ಈಡೇರಿಸುವುದಾಗಿ ಭರವಸೆ ನೀಡಿ ಮನವಿ ಪತ್ರದಲ್ಲಿ ಲಿಖಿತವಾಗಿ ಬರೆದು ಕೊಟ್ಟಿದ್ದರು. 15 ದಿನಗಳಲ್ಲಿ ಎಂದು ಬರೆದುಕೊಟ್ಟ ಅಧಿಕಾರಿಗಳು ಒಂದೂವರೆ ತಿಂಗಳು ಕಳೆದರು ಕೂಡ ಹಾಸ್ಟೆಲ್ ನ ಸಮಸ್ಯೆಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ಅಸಡ್ಡೆ ತೋರಿದ್ದಾರೆ ಎಂದು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಶುದ್ಧ ಕುಡಿಯುವ ಹಾಸ್ಟೆಲ್‌ಗಳಿಗೆ ಗೇಟ್, ಸೆಕ್ಯೂರಿಟಿ.  ಲೈಟ್, ವೈರಿಂಗ್, ಕಂಪ್ಯೂಟರ್, ವೈಫೈ, ಲೈಬ್ರರಿ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಸೊಳ್ಳೆ ಪದರಿ, ಸೋಲಾರ್, ಕ್ರೀಡಾ ಸಾಮಗ್ರಿ, ಬೆಡ್‌ಶೀಟ್ ಸೇರಿದಂತೆ ಅಗತ್ಯ ಮೂಲಭೂತ ವಸ್ತುಗಳು ಇಲ್ಲದೆ ಹಾಸ್ಟೆಲ್ ಹಂದಿಗಳ ಗೂಡಿನಂಥಾಗಿದ್ದು, ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಡಿಸೆಂಬರ್ 5ರೊಳಗಾಗಿ ಇತ್ತ ಗಮನಹರಿಸದೆ ಹೋದರೆ ಹಾಸ್ಟೆಲ್ ಗೆ ಬೀಗ ಜಡಿದು ಮತ್ತೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಎಚರಿಕೆ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here