ಕಲಬುರಗಿ: ಹಿಸ್ಟರಿ ಬಿಗ್ಗೆಷ್ಟ ನ್ಯಾಷನಲ್ ಎಜುಕೇಶನ್ ಅವಾರ್ಡ್-೨೦೧೯ ರ ’ಬೆಸ್ಟ್ ನ್ಯಾಷನಲ್ ಕನ್ನಡ ಲೆಕ್ಚರ್ ಆಪ್ ದಿ ಇಯರ್’ ಪ್ರಶಸ್ತಿಯನ್ನು ಗುಜರಾತನ ಅಹಮದಬಾದನ ಓಂ ಎಜುಕೇಶನ್ ರಿಸರ್ಚ್‌ನವರು ರವಿವಾರ ಶರಣಬಸವ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಾನಾಸಾಹೇಬ ಹಚ್ಚಡದ ಅವರಿಗೆ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಗುಜರಾತಿನ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಪಂಡಿತ್ ವಿಷ್ಣು ಪಾಂಡ್ಯ, ಓಂ ಎಜುಕೇಶನ್ ರಿಸರ್ಚ್‌ನ ಅಧ್ಯಕ್ಷ ಡಾ.ಉಮೇಶ ಗುಜ್ಜಾರ, ಹಿಂದಿ ಚಿತ್ರರಂಗದ ಖ್ಯಾತ ನಟಿ ಉರ್ಮಿಳಾ ಮಾತೊಂಡ್ಕರ, ಕರ್ನಾಟಕದ ಬೆಂಗಳೂರು ನಗರ ವ್ಯವಹಾರ ಅಭಿವೃದ್ಧಿ ಮುಖ್ಯಸ್ಥ ಕೃಷ್ಣ ಗೋಡೆಕರ ಮತ್ತು ಅನೇಕ ಗೌರವಾನ್ವಿತರು ಉಪಸ್ಥಿತರಿದ್ದರು.