ಒಡೆದ ಪೈಪ್‌ಗಳ ದುರಸ್ಥಿ ಇಲ್ಲದೆ ಅಪಾರ ಪ್ರಮಾಣದ ನೀರು ಪೋಲು

0
101
  • ರಾಜು ಕುಂಬಾರ

ಸುರಪುರ: ನಗರದ ಜನತೆಗೆ ಸದಾಕಾಲ ಕಾಡುವ ಸಮಸ್ಯೆಗಳಲ್ಲಿ ಮೂಲವಾದುದು ಕುಡಿಯುವ ನೀರಿನ ಸಮಸ್ಯೆ.ಇದರ ನಿವಾರಣಗೆ ಜನರು ನಿತ್ಯವೂ ಹೋರಾಟ ಮಾಡುತ್ತಾರೆ.ಆದರೆ ಶಾಸ್ವತ ಪರಿಹಾರಮಾತ್ರ ಮರೀಚಿಕೆಯಾಗಿದೆ.

ಇದರ ಮದ್ಯೆ ಆಗಾಗ ಒಂದಿಷ್ಟು ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆಯಾದರೂ ನದಿಯಿಂದ ನಗರದಲ್ಲಿರುವ ಟ್ಯಾಂಕ್‌ಗಳಿಗೆ ನೀರು ತುಂಬಿಸುವ ಮುನ್ನವೇ ಅಪಾರ ಪ್ರಮಾಣದ ನೀರು ಪೈಪ್ ಒಡೆದು ವ್ಯರ್ಥ ಹರಿದು ಹೋಗುತ್ತಿದೆ. ನಗರಸಭೆ ದುರಸ್ಥಿಗೆ ಮುಂದಾಗದೆ ತಮಗು ಅದಕ್ಕೂ ಸಂಬಂಧವೆ ಇಲ್ಲ ಎನ್ನುವಂತೆ ಇರುವುದು ಜನರಲ್ಲಿ ಬೇಸರ ಮೂಡಿಸಿದೆ.

Contact Your\'s Advertisement; 9902492681

ಸುಮಾರು ೨೨ ವಾರ್ಡುಗಳಿಗೆ ನೀರು ಸರಬರಾಜಾಗುವ ಹುಲಕಲ್ ಟ್ಯಾಂಕ್‌ನ ಪೈಪ್‌ಗಳು ಒಡೆದು ಅನೇಕ ವರ್ಷಗಳಾದರು ದುರಸ್ಥಿ ಮಾಡದೆ ನಗರಸಭೆ ನಿರ್ಲಕ್ಷ್ಯ ತೋರುತ್ತಿದೆ, ಕೂಡಲೆ ಹೊಸ ಪೈಪ್ ಹಾಕದಿದ್ದಲ್ಲಿ ನಗರಸಭೆಗೆ ಮುತ್ತಿಗೆ ಹಾಕಲಾಗುವುದು                                            – ದಾವೂದ್ ಪಠಾಣ್ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ

ಕೃಷ್ಣಾ ನದಿಯಿಂದ ನಗರದಲ್ಲಿರುವ ಹುಲಕಲ್ ಗುಡ್ಡದಲ್ಲಿನ ಟ್ಯಾಂಕರ್‌ಗೆ ನೀರು ತುಂಬಿಸಲಾಗುತ್ತದೆ,ಈ ಟ್ಯಾಂಕರಿನಿಂದ ನಗರದ ಅನೇಕ ವಾರ್ಡುಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.ಆದರೆ ಟ್ಯಾಂಕರಿಗೆ ಜೋಡಿಸಿದ ಪೈಪ್‌ಗಳು ಒಡೆದು ಅನೇಕ ತಿಂಗಳುಗಳಾದರೂ ಅವುಗಳ ದುರಸ್ಥಿ ಇಲ್ಲ.ಇದರಿಂದ ಕುಡಿಯುವ ನೀರಿನ ಸಮಸ್ಯೆ ಮತ್ತಿಷ್ಟು ಹೆಚ್ಚಾಗುತ್ತಿದೆ.ಇದರ ಕುರಿತು ಸಾರ್ವಜನಿಕರು ಅನೇಕ ಬಾರಿ ನಗರಸಭೆಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ಮನವಿ ಮಾಡಿದರು ಕ್ರಮಕ್ಕೆ ಮುಂದಾಗುತ್ತಿಲ್ಲವೆಂದು ಸಂಘ ಸಂಸ್ಥೆಗಳು ಮತ್ತು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಷಯದ ಕುರಿತು ಸಗರಸಭೆಯ ಅಧಿಕಾರಿಗಳಿಗೆ ಕೇಳಿದರೆ ಅವರುಗಳು ಎಂದಿನಂತೆ ಸಬೂಬುಗಳನ್ನು ಹೇಳುತ್ತಾರೆ.ಈಗಾಗಲೆ ಪೈಪ್‌ಗಳ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ.ಟೆಂಡರ್ ಮುಗಿದಿದ್ದು ಕೆಲವು ದಿನಗಳಲ್ಲಿ ಹೊಸ ಪೈಪ್‌ಗಳನ್ನು ಹಾಕಲಾಗುತ್ತಿದೆ.ಅಲ್ಲಿವರೆಗೂ ನೀರು ಪೋಲಾಗುವುದನ್ನು ತಡೆಯಲು ಆಗದು.ಕೆಲವು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎನ್ನುತ್ತಾರೆ ನಗರಸಭೆ ಪೌರಾಯುಕ್ತರು.

ಒಡೆದ ಪೈಪ್‌ಗಳ ಸಮಸ್ಯೆಯ ಕುರಿತು ಮೇದಾಗಲ್ಲಿ, ಗುಡಾಳಕೇರಾ, ಗಾಂಧಿ ನಗರ, ಬೋವಿಗಲ್ಲಿ ಸೇರಿದಂತೆ ಹುಲಕಲ್ ಗುಡ್ಡದ ಟ್ಯಾಂಕ್ ನೀರು ಉಪಯೋಗಿಸುವ ಅನೇಕ ವಾರ್ಡುಗಳ ಜನತೆ ನಗರಸಭೆ ವಿರುಧ್ಧ ತಮ್ಮ ಬೇಸರ ಹೊರಹಾಕುತ್ತಿದ್ದಾರಲ್ಲದೆ. ಕೂಡಲೆ ಈ ಪೈಪಗಳ ದುರಸ್ಥಿಯಾಗಲಿ ಅಥವಾ ಹೊಸ ಪೈಪ್‌ಗಳ ಹಾಕುವುದಾಗಲಿ ಮಾಡದಿದ್ದಲ್ಲಿ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಸಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದಾರೆ.

ಸುರಪುರ ನಗರದ ವಿವಿಧ ವಾರ್ಡಗಳಿಗೆ ಸರಬರಾಜಾಗುವ ನೀರಿನ ಪೈಪ್‌ಗಳು ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದು. ಕೆಲಸ ಆರಂಭವಾಗಲಿದೆ ಸಾರ್ವಜನಿಕರು ಸಹಕರಿಸಬೇಕು                                    – ಜೀವನ್ ಕುಮಾರ ಕಟ್ಟಿಮನಿ ಪೌರಾಯುಕ್ತರು ಸುರಪುರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here