ವಿಶೇಷ ಲಸಿಕಾ ಅಭಿಯಾನದ ನಿಮಿತ್ತ ಶಿಕ್ಷಕರಿಗೆ ತರಬೇತಿ

0
129

ಅಫಜಲಪುರ: ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬೂರು ಬಿ ದಲ್ಲಿ ಟಿ.ಡಿ ಮತ್ತು ಡಿಪಿಟಿ ವಿಶೇಷ ಲಸಿಕಾ ಅಭಿಯಾನದ ನಿಮಿತ್ತ ಶಿಕ್ಷಕರಿಗೆ ತರಬೇತಿಯನ್ನು ಏರ್ಪಡಿಸಲಾಗಿತ್ತು ಕಲ್ಬುರ್ಗಿ ಜಿಲ್ಲೆಯಾದ್ಯಂತ ಡಿಸೆಂಬರ್ 11ರಿಂದ 31ರವರೆಗೆ ಜರುಗುತ್ತಿದ್ದು ಈ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಆಡಳಿತಾಧಿಕಾರಿಗಳಾದ ಸುಶೀಲ್ ಕುಮಾರ್ ಅಂಬೋರೆ ಕರೆನೀಡಿದರು.

ತದನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಮಾತನಾಡಿ ಶಾಲಾ ಲಸಿಕಾ ಅಭಿಯಾನದಲ್ಲಿ ಒಂದನೇ ತರಗತಿ ಮಕ್ಕಳಿಗೆ ಟಿಡಿ ಲಸಿಕೆಯನ್ನು ಹಾಗೂ ಎರಡರಿಂದ ಹತ್ತನೇ ತರಗತಿ ಮಕ್ಕಳಿಗೆ ಟಿ ಡಿ ಲಸಿಕೆಯನ್ನು ತಪ್ಪದೇ ಹಾಕಿಸುವಂತೆ ತಿಳಿಸಿದರು.

Contact Your\'s Advertisement; 9902492681

ಲಸಿಕೆ ಪಡೆಯುವುದು ಮಗುವಿನ ಜನ್ಮ ಸಿದ್ಧ ಹಕ್ಕು ಹಾಗೂ ಲಸಿಕೆಗಳನ್ನು ಕೊಡಿಸುವುದು ಪೋಷಕರ ಕರ್ತವ್ಯವಾಗಿದೆ ಎಂದರು ಈ ಹಿಂದೆ ತಾವೆಲ್ಲರೂ ಮೀಸಲ್ಸ್ ರುಬೆಲ್ಲ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿ ತಾಲೂಕಿಗೆ ಜಿಲ್ಲೆಗೆ ಕೀರ್ತಿ ತಂದದ್ದಕ್ಕಾಗಿ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು ಅದೇ ರೀತಿ ಅಭಿಯಾನದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ಸು ಗೊಳಿಸಲು ತಿಳಿಸಿದರು ನಂತರ ಹಿರಿಯ ಆರೋಗ್ಯ ಸಹಾಯಕರಾದ  ಜಿಎಂ ದೇಸಾಯಿಯವರು ಕಾರ್ಯಕ್ರಮದ ಕ್ರಿಯಾಯೋಜನೆ ದಿನಾಂಕವನ್ನು ಸಿಬ್ಬಂದಿಗಳಿಗೆ ತಿಳಿಸಿದರು.

ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಆಡಳಿತ ವೈದ್ಯಾಧಿಕಾರಿಗಳು ಕ್ಷೇತ್ರಶಿಕ್ಷಣಾಧಿಕಾರಿಗಳು ಹಿರಿಯ ಆರೋಗ್ಯ ಸಹಾಯಕರು ಆರೋಗ್ಯ ಸಿಬ್ಬಂದಿ, ಆಶಾ ಅಂಗನವಾಡಿ ಕಾರ್ಯಕರ್ತರು ಅಥವಾ 104ಕ್ಕೆ ಸಂಪರ್ಕಿಸಲು ತಿಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here