ಕಲಬುರಗಿ: ಜ್ಞಾನದ ದಾಹ ತೀರಿಸಿಕೊಳ್ಳುವ ತಾಣ ಅದು ಗ್ರಂಥಾಲಯ. ಇಂತಹ ವಿದೇಶ ಗ್ರಂಥಾಲಯಲ್ಲಿ ದಿನದ 18 ಗಂಟೆಗಳ ಕಾಲ ಸತತವಾಗಿ ಅಧ್ಯಯನ ಮಾಡಿ ವಿಶ್ವರತ್ನ ಅನಿಸಿಕೊಂಡವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯ ಮುಖ್ಯ ಗ್ರಂಥಪಾಲಕ ಡಾ. ಜಗನ್ನಾಥ ಸಿಂಧೆ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಇಂದು ಡಾ. ಬಾಬಾಸಾಹೇಬ್ ಭೀಮರಾವ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದ ನಿಮಿತ್ಯವಾಗಿ ಡಿಸೆಂಬರ್ 6 ರಿಂದ 9 ವರಗೆ ಗ್ರಂಥಾಲಯಲ್ಲಿ ಪುಸ್ತಕ ಪ್ರದರ್ಶನ ಕಾರ್ಯಕ್ರಮ ಕುರಿತು ಮಾತನಾಡಿದರು.
ವಿದ್ಯಾರ್ಥಿಗಳು ದಿನನಿತ್ಯ ಪ್ರತಿಯೊಬ್ಬರೂ ತಪ್ಪದೇ ಗ್ರಂಥಾಲಯಕ್ಕೆ ಬಂದು ಒಳ್ಳೆಯೊಳ್ಳೆ ಪುಸ್ತಕಗಳನ್ನು ಓದಿ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ನೀವು ಪುಸ್ತಕಗಳನ್ನು ಓದುವುದರಿಂದ ಜಾಗತಿಕ ಮಟ್ಟದಲ್ಲಿ ನಿಮಗೆ ಚಿಂತನೆಗಳನ್ನು ತಿಳಿಯುತ್ತವೆ. ಡಾ. ಬಾಬಾಸಾಹೇಬ್ ಭೀಮರಾವ ಅಂಬೇಡ್ಕರ್ ಅವರು ಇಡೀ ವಿಶ್ವಕ್ಕೆ ಮಾದರಿ ಆಗಿದ್ದಾರೆ. ನಾವು ಅವರು ಹಾಕಿ ಕೊಟ್ಟಿರುವ ಮಾರ್ಗದಲ್ಲಿ ನಡೆಯುವುದು ಬಹಳ ಮುಖ್ಯ ಇದೆ ಎಂದು ಅವರು ಹೇಳಿದರು.
ಸಹಾಯಕ ಗ್ರಂಥಪಾಲಕರಾದ ಡಾ. ಪ್ರವೀಣ್ ಕುಮಾರ್ ಕುಂಬಾರ, ಡಾ. ಸುರೇಶ್ ಜಂಗೆ, ಶ್ರೀಮತಿ ಮಮತಾ ಮೇಸ್ತ್ರಿ, ಖೇಮಣ್ಣ ಅಲ್ದಿ, ಡಾ. ರಾಜಕುಮಾರ ಎಂ ದಣ್ಣೂರ, ಪ್ರವೀಣ್ ಕುಮಾರ್ ಪಟ್ಟಣಕರ್, ಶರಣಪ್ಪ ಮಾರಕುಂಡೆ ಇತರರು ಇದ್ದರು