ಡಾ:ಬಿ.ಆರ್.ಅಂಬೇಡ್ಕರರ ೬೩ನೇ ಮಹಾ ಪರಿನಿರ್ವಾಣ ದಿನಾಚರಣೆ

0
71

ಸುರಪುರ: ನಗರದ ವಿವಿಧೆಡೆಗಳಲ್ಲಿ ಡಾ:ಬಿ.ಆರ್.ಅಂಬೇಡ್ಕರರ ೬೩ನೇ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ೧೨೮ನೇ ಜಯಂತ್ಯೋತ್ಸವ ಸಮಿತಿ ಹಾಗು ನಗರಸಭೆ ವತಿಯಿಂದ ನಗರದ ಬಸ್ ನಿಲ್ದಾಣ ಬಳಿಯಿರುವ ಡಾ:ಬಿ.ಆರ್.ಅಂಬೇಡ್ಕರರ ವೃತ್ತದಲ್ಲಿ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ ಹೊಸ್ಮನಿ,ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ,ಎಇಇ ಗುಪ್ತಾ ಸೇರಿದಂತೆ ಅನೇಕರು ಅಂಬೇಡ್ಕರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಕ್ಯಾಂಡಲ್ ಹಚ್ಚಿ ಧಮ್ಮ ಪಠಣದ ನಂತರ ಎಡರು ನಿಮಿಷಗಳ ಮೌನಾಚರಣೆ ಮಾಡಲಾಯಿತು.ನಂತರ ಕಾರ್ಯಕ್ರಮವನ್ನುದ್ದೇಶಿಸಿ ರಾಹುಲ್ ಹುಲಿಮನಿ ಮಾತನಾಡಿ,ಇಂದು ದೇಶವೆ ಶೋಕ ಸಾಗರದಲ್ಲಿ ಮುಳುಗಿದ ದಿನವಾಗಿದೆ,ಭಾರತಕ್ಕೆ ಸಂವಿಧಾನ ಕೊಟ್ಟ ನಮ್ಮೆಲ್ಲರ ಆರಾಧ್ಯ ದೈವವಾದ ಬಾಬಾ ಸಾಹೇಬ್ ಅಂಬೇಡ್ಕರರ ೧೯೫೬ರ ಡಿಸೆಂಬರ್ ೬ ರಂದು ನಮ್ಮನ್ನೆಲ್ಲ ಅಗಲಿದೆ ದಿನವಾಗಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಮಾನಪ್ಪ ಕಟ್ಟಿಮನಿ,ನಗರಸಭೆ ಸದಸ್ಯ ಶಿವಕುಮಾರ ಕಟ್ಟಿಮನಿ,ಭೀಮರಾಯ ಸಿಂಧಗೇರಿ,ಮಾಳಪ್ಪ ಕಿರದಳ್ಳಿ,ಆಕಾಶ ಕಟ್ಟಿಮನಿ,ರಾಜು ಕಟ್ಟಿಮನಿ,ರಮೇಶ ಬಾಚಿಮಟ್ಟಿ,ನಿಂಗಣ್ಣ ಗೋನಾಲ,ಯಲ್ಲಪ್ಪ ಚಿನ್ನಾಕಾರ,ನಾಗರಾಜ ಗೋಗಿಕೇರಾ,ಹುಸೇನಪ್ಪ ಜೀವಣಗಿ,ಧರ್ಮರಾಜ ಬಡಿಗೇರ ಹಾಗು ನಗರಸಭೆ ಅಧಿಕಾರಿಗಳಾದ ಸುನೀಲ ನಾಯಕ,ಲಕ್ಷ್ಮಣ ಕಟ್ಟಿಮನಿ,ಸಿದ್ದರಾಮ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here