ಗೃಹರಕ್ಷಕರ ಸೇವೆ ಅತ್ಯಂತ ಶ್ಲಾಘನೀಯ: ನ್ಯಾ. ತಯ್ಯೂಬಾ ಸುಲ್ತಾನ ಅಭಿಮತ

0
66

ಸುರಪುರ: ಪೊಲೀಸರೊಂದಿಗೆ ಹೆಗಲುಕೊಟ್ಟು ಸದಾಕಾಲ ಸೇವೆ ಮಾಡುವ ಗೃಹರಕ್ಷಕರ ಸೇವೆ ಅತ್ಯಂತ ಶ್ಲಾಘನೀಯವಾದುದಾಗಿದೆ ಎಂದು ಸ್ಥಳಿಯ ನ್ಯಾಯಾಲಯದ ಹಿರಿಯಶ್ರೇಣಿ ಸಿವಿಲ್ ನ್ಯಾಯಾಧೀಶೆ ಶ್ರೀಮತಿ ತಯ್ಯೂಬಾ ಸುಲ್ತಾನ ಮಾತನಾಡಿದರು.

ನಗರದ ಗೃಹರಕ್ಷಕ ದಳದ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಗೃಹರಕ್ಷಕರ ದಿನಾಚರಣೆ ಹಾಗು ಹುತಾತ್ಮ ಗೃಹರಕ್ಷಕರ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಹಾಗು ಪಥಸಂಚಲನಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿ,ಯಾವುದೇ ಸಂದರ್ಭದಲ್ಲೂ ಸೇವೆಗೆ ಮುಂದಾಗುವ ಗೃಹರಕ್ಷಕರು ಅನೇಕಬಾರಿ ತಮ್ಮ ಪ್ರಾಣದ ಹಂಗು ತೊರೆದು ಸೇವೆಗೆ ಮುಂದಾಗುತ್ತಾರೆ ಇದು ಎಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಅಮರನಾಥ ಬಿ.ಎನ್ ಮಾತನಾಡಿ,ಗೃಹರಕ್ಷಕರು ಯಾವುದೆ ಫಲಾಪೇಕ್ಷೆಗಳಿಲ್ಲದೆ ಸಮಾಜಮುಖಿ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲ್ಲರಿಗೂ ಮಾದರಿ ಹಾಗು ಹೆಮ್ಮೆಯ ಸಂಗತಿಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಂಪನಿ ಕಮಾಂಡರ್ ಯಲ್ಲಪ್ಪ ಹುಲಿಕಲ್ ಮಾತನಾಡಿ,ಅನೇಕ ಸಂದರ್ಭಗಳಲ್ಲಿ ನಮ್ಮ ಗೃಹರಕ್ಷಕರು ಸಿಶ್ತಿನ ಸಿಪಾಯಿಗಳಾಗಿದ್ದಾರೆ.ಯಾವುದೇ ಸಂದರ್ಭದಲ್ಲಿ ಕರೆ ಬಂದರೂ ಸೇವೆಗೆ ಮುಂದಾಗುತ್ತಾರೆ.ನಮ್ಮ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಗೂ ಹೋಗಿ ಸೇವೆ ಸಲ್ಲಿಸುತ್ತಾರೆ.ನಮ್ಮಲ್ಲಿ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುವವರು ಮತ್ತು ಉನ್ನತ ಪದವಿಧರರಿದ್ದು ಅವರೆಲ್ಲರೊಂದಿಗೆ ಈ ಸೇವೆಯಲ್ಲಿ ತೊಡಗಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ ಎಂದರು.

ನಂತರ ನಗರದ ಪ್ರಮುಖ ಬೀದಿಗಳಲ್ಲಿ ಗೃಹರಕ್ಷಕರ ಪಥಸಂಚಲನ ನಡೆಸಲಾಯಿತು. ನಂತರ ಹತ್ತು ಗಂಟೆಗೆ ಆರಂಭಗೊಂಡ ರಕ್ತದಾನ ಶಿಬಿರಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಚಾಲನೆ ನೀಡಿದರು.ನಂತರ ಯಾದಗಿರಿ ರೆಡ್ ಕ್ರಾಸ್ ಸಂಸ್ಥೆಗೆ ಸುಮಾರು ನಲವತ್ತಕ್ಕು ಹೆಚ್ಚು ಜನ ಗೃಹರಕ್ಷಕರು ಹಾಗು ಸಾರ್ವಜನಿಕರಿಂದ ರಕ್ತದಾನ ಮಾಡಲಾಯಿತು.

ವೇದಿಕೆ ಮೇಲೆ ಸುರಪುರ ಸಿನಿಯರ್ ಡಿ.ಎಸ್.ವೆಂಕಟೇಶ ಹಾಗು ಪ್ಲಾಟೂನ್ ಕಮಾಂಡರ್ ರಮೇಶ ಅಂಬುರೆ ಇದ್ದರು.ನಾಗರಾಜ ದೇಸಾಯಿ ಸ್ವಾಗತಿಸಿದರು,ಹೆಮಲ್ಯಾ ರಾಠೋಡ ನಿರೂಪಿಸಿದರು,ಬುಡ್ಡೆಪ್ಪ ಚವಲ್ಕರ್ ವಂದಿಸಿದರು.ತಾಲೂಕಿನ ಎಲ್ಲಾ ಗೃಹರಕ್ಷಕ ಸಿಬ್ಬಂದಿ ಕಾರ್ಯಕ್ರಮದಲ್ಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here