ಕಲಬುರಗಿ: ಅಖಿಲ ಭಾರತ ಯುವಜನ ಒಕ್ಕೂಟದ ವತಿಯಿಂದ ನಗರದ ಸರಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿಂದು ಏರ್ಪಡಿಸಿದ್ದ ‘ದೇಶದ ಚಿತ್ತ ಯುವಜನರತ್ತ’ ಎಂಬ ಯುವ ಜಾಗೃತಿ ಕಾರ್ಯಕ್ರಮ ನಾಡಿನ ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ ಸಸಿಗೆ ನೀರೂಣಿಸುವ ಮೂಲಕ ಉದ್ಘಾಟಿಸಿದರು.
ಕರ್ನಾಟಕ ಹೈಕೋರ್ಟಿನ ವಿಶ್ರಾಂತ ನ್ಯಾಯಾಧೀಶ ಅರಳಿ ನಾಗರಾಜ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಕಾಲೇಜಿನ ಪ್ರಾಚಾರ್ಯ ಬಸವರಾಜ ಘಾಣೂರೆ, ಜನಪರ ಹೋರಾಟಗಾರ ಪ್ರಭುದೇವ ಯಳಸಂಗಿ, ಪತ್ರಕರ್ತ ಡಾ.ಶಿವರಾಮ ಅಸುಂಡಿ, ಒಕ್ಕೂಟದ ಅಧ್ಯಕ್ಷರೂ ಆದ ಕಾರ್ಯಕ್ರಮದ ಸಂಘಟಕ ಹಣಮಂತರಾಯ ಅಟ್ಟೂರ ಸೇರಿ ಅನೇಕರು ಉಪಸ್ಥಿತರಿದ್ದರು.