ನಿರಂತರ ಪ್ರಯತ್ನದಿಂದ ಉನ್ನತ ಸಾಧನೆ ಸಾಧ್ಯ: ಎ.ಬೆಣ್ಣೂರ

0
36

ಕಲಬುರಗಿ: ವಿದ್ಯಾರ್ಥಿಗಳು ಅಂಕದ ದೃಷ್ಟಿಯಿಂದ ಮಾತ್ರ ಅಧ್ಯಯನ ಮಾಡದೆ, ಶ್ರೇಷ್ಠ ಜ್ಞಾನಿಗಳಾಗಿ, ಸದೃಢ ಮಾನವ ಸಂಪನ್ಮೂಲವಾಗಿ ದೇಶದ ದೊಡ್ಡ ಆಸ್ತಿಯಾಗಲು ಅಧ್ಯಯನ ಮಾಡಬೇಕು. ನಿಮ್ಮ ಜೀವನದ ಶಿಲ್ಪಿಗಳು ನೀವಾಗಿರುವುದರಿಂದ ಬಾಲ್ಯದಿಂದಲೇ ಜ್ಞಾನ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂದು ನಿಗದಿತ ಗುರಿಯೊಂದಿಗೆ ನಿರಂತರವಾದ ಪ್ರಯ್ನ ಮಾಡಿದರೆ ಉನ್ನತವಾದ ಸಾಧನೆ ಮಾಡಲು ಸಾಧ್ಯವಾಗುತ್ತದೆಯೆಂದು ಕಾಡಾ ಭೂ ಅಭಿವೃದ್ಧಿ ಅಧಿಕಾರಿ ಶರಣಬಸಪ್ಪ ಎ.ಬೆಣ್ಣೂರ ವಿದ್ಯಾಥಿಗಳಿಗೆ ಕಿವಿಮಾತು ಹೇಳಿದರು.

ಅವರು ನಗರದ ಆಳಂದ ರಸ್ತೆಯ, ವಿಜಯನಗರ ಕಾಲನಿಯಲ್ಲಿರುವ ’ಸರ್ಕಾರಿ ಪ್ರೌಢಶಾಲೆಯಲ್ಲಿ’, ಇಲ್ಲಿನ ’ಜ್ಞಾನಾಮೃತ್ ಶೈಕ್ಷಣಿಕ ವೃತ್ತಿ ಕೇಂದ್ರ’ದ ದ್ವಿತೀಯ ವಾರ್ಷಿಕೋತ್ಸವ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ’ಹತ್ತರ ಏಣಿ-ಅಗ್ರ ಶ್ರೇಣಿ’ ಎಂಬ ವಿಶೇಷ ಉಪನ್ಯಾಸ, ಗಣಿತ ಮತ್ತು ಇಂಗ್ಲೀಷ್ ವಿಷಯಗಳ ಉಚಿತ ಕಾರ್ಯಾಗಾರಕ್ಕೆ ಭಾನುವಾರ ಜರುಗಿದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಪ್ರತಿಭೆಯಿರುತ್ತದೆ. ಶಿಕ್ಷಕರು ಅದನ್ನು ಗುರ್ತಿಸಿ ಪ್ರೋತ್ಸಾಹಿಸಿ, ಬೆಳೆಸಬೇಕು. ಒಳ್ಳೆಯ ಕೆಲಸವನ್ನು ಮುಂದೂಡುವ ಪ್ರವೃತ್ತಿ ಬೇಡ. ಸರ್ಕಾರಿ ಶಾಲೆಯೆಂದ ಕೀಳರಿಮೆ ಕಿತ್ತೊಗೆಯಿರಿ. ನಿಮ್ಮ ಅರಿವೇ ಗುರುವಾಗಬೇಕು. ಜೀವನದಲ್ಲಿ ಉನ್ನತವಾದ ಕನಸುಗಳನ್ನು ಕಂಡು, ಅವುಗಳನ್ನು ನನಸಾಗಿಸಲು ಪ್ರಯತ್ನಿಸಿ. ಗುರು-ಹಿರಿಯರ ಮಾರ್ಗದರ್ಸನ ಪಡೆದು ನಿಮ್ಮ ಜೀವನವನ್ನು ಸುಂದರವನ್ನಾಗಿಸಿಕೊಳ್ಳಿಯೆಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗುವಿಕ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್.ಮಾಲಿಪಾಟೀಲ ಮಾತನಾಡಿ, ನಮ್ಮ ಭಾಗದ ಎಸ್ಸೆಸ್ಸೆಲ್ಸಿ ಪಲಿತಾಂಶ ಸುಧಾರಣೆಗೆ ಜ್ಞಾನಾಮೃತ ಕೇಂದ್ರ ಜಿಲ್ಲೆಯಾದ್ಯಂತ ಪ್ರೌಢಶಾಲೆಗಳಿಗೆ ತೆರಳಿ ಉಚಿತ ಕಾರ್ಯಾಗಾರವನ್ನು ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಮಾನಸಿಕ ಸ್ಥೈರ್ಯವನ್ನು ನೀಡುತ್ತಿರುವುದು ಶ್ಲಾಘನೀಯ, ಮಾದರಿಯ ಕಾರ್ಯವಾಗಿದೆಯೆಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಕಟ್ಟಿಮನಿ, ಜ್ಞಾನಾಮೃತ ಕೇಂದ್ರ ಅಧ್ಯಕ್ಷ ಕೆ.ಬಸವರಾಜ ಮಾತನಾಡಿದರು. ಸಮಾರಂಭದಲ್ಲಿ ಮಹಾನಗರ ಪಾಲಿಕೆ ಮಾಜಿ ಮಹಾಪೌರ ಅಮೃತರಾವ ಪಾಟೀಲ, ಉಪನ್ಯಾಸಕ ಎಚ್.ಬಿ.ಪಾಟೀಲ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ, ಉತ್ತರ ವಲಯ ಇಸಿಓ ಅರ್ಜುನ ಹತ್ತಿ, ಮುಖ್ಯ ಶಿಕ್ಷಕ ಅಶೋಕ ಸ್ವಾಮಿ, ದೈಹಿಕ ಶಿಕ್ಷಕ ಜಯಪ್ರಕಾಶ, ಸಹ ಶಿಕ್ಷಕರಾದ ರವಿ ಹೂಗಾರ, ರವಿ ಬಿರಾಜಾದಾರ, ಸಂಪನ್ಮೂಲ ವ್ಯಕ್ತಿಗಳಾದ ಶಿವಲಿಂಗಪ್ಪ ಕೋಡ್ಲಿ, ದಿಲೀಪಕುಮಾರ ಚವ್ಹಾಣ ಸೇರಿದಂತೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿದ್ಯಾರ್ಥಿನಿಯರಾದ ಸಹನಾ, ವೈಷ್ಣವಿ ಪ್ರಾರ್ಥಿಸಿದರು. ಕೇಂದ್ರದ ಉಪಾಧ್ಯಕ್ಷ ಚಂದ್ರಕಾಂತ ಬಿರಾದಾರ ಸ್ವಾಗತಿಸಿದರು. ಸಹ ಶಿಕ್ಷಕ ಸಂಜೀವಕುಮಾರ ಪಾಟೀಲ ನಿರೂಪಣೆ ಮಾಡಿದರು. ಮುಖ್ಯ ಶಿಕ್ಷಕ ಪ್ರಭುಲಿಂಗ ಮೂಲಗೆ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here