ಸಾಮಾಜಿಕ ಕಳಕಳಿಯ ಚಿಂತಕ ಡಾ ಚೆನ್ನಣ್ಣ ವಾಲೀಕರ್ : ವಿಶ್ವಾರಾಧ್ಯ ಸತ್ಯಂಪೇಟೆ

0
57
ಶಹಾಪುರ: ಸಾಮಾಜಿಕ‌ ಕಾಳಜಿ ಹೊಂದಿದ್ದ ವಾಲೀಕಾರ ಅವರು ದಲಿತರ ಧ್ವನಿಯಾಗಿ ಕಾರ್ಯ ಮಾಡಿದರು ಎಂದು ಪ್ರಗತಿಪರ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.
ಶಹಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಸೋಮವಾರ ಬೆಳಗ್ಗೆ ಹಮ್ಮಿಕೊಂಡಿರುವ ಡಾ.ಚೆನ್ನಣ್ಣ ವಾಲೀಕಾರ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು ವಾಲೀಕರ್ ಅವರು ಶಿಸ್ತು ಬದ್ಧತೆಯಿಂದ ಬದುಕಿದವರು. ಅವರ ಹೋರಾಟದ ಕಿಚ್ಚು ನನ್ನನ್ನು ಹುಚ್ಚೆಬ್ಬಿಸಿತು ಎಂದು ಅವರ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು.
 ಚೆನ್ನಣ್ಣ ವಾಲೀಕಾರ ಅವರು ಸಾಮಾಜಿಕ ಕಳಕಳಿಯ ಜೊತೆಗೆ ಬಂಡಾಯ ಬರಹಗಾರರಾಗಿದ್ದರು ಎಂದು  ಹಿರಿಯ ಸಾಹಿತಿ ಸಿದ್ದರಾಮ ಹೊನ್ಕಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನೋರ್ವ ಸಾಹಿತಿ ಡಾ. ಅಬ್ದುಲ್ ಕರೀಂ ಕನ್ಯಾಕೋಳೂರ ಮಾತನಾಡುತ್ತಾ ವಾಲೀಕಾರ್ ಅವರು ಶ್ರೇಷ್ಠ ವಿಧ್ವಂಸಾಕರಾಗಿ, ಚಿಂತಕರಾಗಿ,ಸಮಾಜ ಸೇವಕರಾಗಿ ಅಪಾರ ವಿದ್ಯಾರ್ಥಿಗಳ ಬಳಗವನ್ನು ಹೊಂದಿದ್ದರು, ಸಾಯುವತನಕ ಕಷ್ಟ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ಬದುಕಿದವರು ಅವರ ಆದರ್ಶ ತತ್ವಗಳು ಇಂದಿನ ಯುವಜನಾಂಗಕ್ಕೆ ಅತ್ಯವಶ್ಯಕವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಒಂದು ನಿಮಿಷಗಳ ಕಾಲ ಡಾ. ಚೆನ್ನಣ್ಣ ವಾಲೀಕರ್ ಅವರಿಗೆ ಮೌನಾಚರಣೆ ಸಲ್ಲಿಸಲಾಯಿತು.
ನಂತರ ಜರುಗಿದ ಯಾದಗಿರಿ ಜಿಲ್ಲಾ ೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಚರ್ಚಿಸಿ ವಿಚಾರ ವಿನಿಮಯಗಳು ಹಂಚಿಕೊಳ್ಳುವುದರ ಜೊತೆಗೆ  ಸಮ್ಮೇಳನದ  ಸಭೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿದ್ದಲಿಂಗಣ್ಣ ಆನೆಗುಂದಿ ಸಮ್ಮೇಳನದ ಕುರಿತು ಹಲವಾರು ವಿಷಯ ಚರ್ಚೆಗಳನ್ನು ಮಾಡಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಿ ಕೈಜೋಡಿಸಿದರೆ ಸಮ್ಮೇಳನವನ್ನು ಶಹಾಪುರದಲ್ಲಿ ಮಾಡಬಹುದು ಎಂದು ಸಂತೋಷದ ವಿಷಯವನ್ನು ಎಲ್ಲರೆದುರಿಗೆ  ತಿಳಿಸಿದರು.
ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ದೊಡ್ಡಬಸಪ್ಪ ಬಳೂರಗಿ, ಲಿಂಗಣ್ಣ ಪಡಶೆಟ್ಟಿ, ಶಿವಣ್ಣ ಇಜೇರಿ, ಡಾ.ಮೋನಪ್ಪ  ಶಿರವಾಳ, ಮಲ್ಲನಗೌಡ ಗೋಗಿ, ಬಸವರಾಜ್ ಹಿರೇಮಠ್, ರಾಮಗೊಂಡಪ್ಪ ಹಳಗೊಂಡ, ಮಲ್ಲಣ್ಣ ಹೊಸಮನಿ,ಲಕ್ಷ್ಮಿ ಪಟ್ಟಣಶೆಟ್ಟಿ, ಭಾಗ್ಯ ದೊರೆ,ಸಮಾಜ ಸೇವಕ ದೇವಿಂದ್ರಪ್ಪ ಕನ್ಯಾಕೋಳೂರ ಹಾಗೂ ಇತರರು ಉಪಸ್ಥಿತರಿದ್ದರೂ ಮಹೇಶ್ ಪತ್ತಾರ ಪ್ರಾರ್ಥಿಸಿದರು ಗೌರವ  ಕಾರ್ಯದರ್ಶಿಗಳಾದ ಬಸವರಾಜ ಸಿನ್ನೂರ ನಿರೂಪಿಸಿದರು ಪಂಚಾಕ್ಷರಿಮಠ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here