ಶಹಾಪುರ: ಆಂಬ್ಯುಲೆನ್ಸ್ನಲ್ಲೇ ಹೆರಿಗೆ

0
82

ಶಹಾಪುರ: ಸರಕಾರಿ ಅಂಬುಲೆನ್ಸ್ ನಲ್ಲಿ ಹೆರಿಗೆಯಾಗಿರುವ ಘಟನೆ ಶಹಾಪುರ ತಾಲೂಕಿನ ಶಿರವಾಳ ಗ್ರಾಮದ ಹತ್ತಿರ ಜರುಗಿದೆ.

ಶಹಾಪುರ ತಾಲ್ಲೂಕಿನ ಚಟ್ನಳ್ಳಿ ಗ್ರಾಮದ ರಾಜೇಶ್ವರಿ ಗಂಡ ಶ್ರೀಮಂತ್ (೨೬) ಹೆರಿಗೆ ನೋವಿನಿಂದ ಬಳಲುತ್ತಿದ್ದಾಗ ಕೂಡಲೇ ಅಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

Contact Your\'s Advertisement; 9902492681

ಅಲ್ಲಿ ವೈದ್ಯರು ಸರಳ ಹೆರಿಗೆ ಆಗುವುದಿಲ್ಲ ಇದು ಸಿಜರಿನ್ ಮಾಡಬೇಕಾಗುತ್ತದೆ ಎಂದು ತಾಲ್ಲೂಕು ಆಸ್ಪತ್ರೆಗೆ ಕರೆತರುವಾಗ ಅಂಬುಲೆನ್ಸ್ನಲ್ಲಿ ಸರಳ ಹೆರಿಗೆಯಾಗಿ ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ.

ಸ್ಟಾಫ್ ನರ್ಸ್ ಸುರೇಶ್ ಹಾಗೂ ಪೈಲಟ್ ಅಬ್ದುಲ್ ವಾಹಿದ್ ಹೆರಿಗೆ ಸಮಯದಲ್ಲಿ ಸಹಾಯ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here