ಬಿ ಎಸ್ ವೈ ನೇತೃತ್ವದಲ್ಲಿ ಇನ್ಮುಂದೆ ಸುಭದ್ರ ಹಾಗೂ ಅಭಿವೃದ್ಧಿ ಪರ ಸರ್ಕಾರ: ಅಂಬಾರಾಯ ಅಷ್ಠಗಿ

0
76

ಕಲಬುರಗಿ: ಸುಸ್ಥಿರ, ಹಾಗೂ ಸುಭದ್ರ ಸರ್ಕಾರಕ್ಕಾಗಿ ಮತ್ತು ರಾಜ್ಯದ ಸರ್ವಾಂಗಿಣ ಅಭಿವೃದ್ಧಿಗಾಗಿ ಈ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಅಭೂತಪೂರ್ವವಾಗಿ ಬೆಂಬಲಿಸಿ, ಗೆಲ್ಲಿಸಿದ ರಾಜ್ಯದ ಪ್ರಜ್ಞಾವಂತ ಮತದಾರರಿಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರೂ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಂಬಾರಾಯ ಅಷ್ಠಗಿ ಕೃತಜ್ಞತೆ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ರಾಜ್ಯದ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಕೈ ಬಲಪಡಿಸಲು ಪಕ್ಷದ 12 ಅಭ್ಯರ್ಥಿಗಳ ಗೆಲುವು ಸಹಕಾರಿ ಯಾಗಲಿದ್ದೂ, ಈ ಉಪ ಚುನಾವಣೆಯ ಐತಿಹಾಸಿಕ ಗೆಲುವು ಬಿಜೆಪಿ ಸರ್ಕಾರಕ್ಕೆ ಆನೆಬಲ ತಂದಿದೆ.

Contact Your\'s Advertisement; 9902492681

ಬಿ ಎಸ್ ಯಡಿಯುರಪ್ಪನವರ ನೇತೃತ್ವದಲ್ಲಿ ರಾಜ್ಯ ಇನ್ಮುಂದೆ ಇನ್ನಷ್ಟು ಅಭಿವೃದ್ಧಿಯ ಪರ್ವ ಕಾಣಲಿದ್ದೂ,ನೆನೆಗೂದಿಗೆ ಬಿದ್ದಿರುವ ಯೋಜನೆಗಳಿಗೆ ಶರವೇಗ ಸಿಗಲಿ ಎಂಬುದು ರಾಜ್ಯದ ಜನರ ಹಾರೈಕೆಯಾಗಿದೆ. ಕೇಂದ್ರ ಸರ್ಕಾರದ ಅನುವಾದವನ್ನು ಸಮರ್ಥವಾಗಿ ಬಳಸಿಕೊಂಡು ರಾಜ್ಯ ಹಿಂದೆಂದೂ ಕಂಡಿರದ ಪ್ರಗತಿಯನ್ನು ಬಿ ಎಸ್ ಯಡಿಯುರಪ್ಪನವರ ಸರ್ಕಾರದಿಂದ ದೋರೆಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಉಪ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಹಗಲಿರುಳು ಶ್ರಮಿಸಿದ ನಮ್ಮ ಪಕ್ಷದ ರಾಜ್ಯ ಅಧ್ಯಕ್ಷರಾದ ಶ್ರೀ ನಳಿನ ಕುಮಾರ್ ಕಟೀಲ್ ಹಾಗೂ ಬಿ ವೈ ವಿಜಯೇಂದ್ರ ಸೇರಿದಂತೆ ರಾಜ್ಯದ ಪದಾಧಿಕಾರಿಗಳಿಗೆ, ವಿವಿಧ ಮೋರ್ಚಾಗಳ ಮುಖಂಡರಿಗೆ, ಕಾರ್ಯಕರ್ತರಿಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಅಂಬಾರಾಯ ಅಷ್ಠಗಿ ಯವರು ಅಭಿನಂದನೆ ಸಲ್ಲಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here