ಕಲಬುರಗಿ: ನೆರೆ ರಾಜ್ಯ ಕೇರಳದಲ್ಲಿ ಚಂಡ ಮಾರುತ ಬೀಸುತ್ತಿರುವ ಪರಿಣಾಮ ರಾಜ್ಯದ ಬೆಂಗಳೂರು ಸೇರಿದಂತೆ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಕಳೆದ ಎರಡು ದಿನಗಳ ಹಿಂದೆ ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಕಲಬುರಗಿ ಜಿಲ್ಲೆಯಲ್ಲೂ ಜೋರಾಗಿ ಗಾಳಿ ಬೀಸುತ್ತಿದೆ. ವಿಪರೀತ ಶಕೆ, ಧಗೆ ಕೂಡ ಉಂಟಾಗಿದೆ.
ಜಿಲ್ಲೆಯ ಹಲವು ಕಡೆಗಳಲ್ಲಿ ಹನಿ, ಹನಿ ಮಳೆಯಾಗಿರುವ ವರದಿಯಾಗಿದೆ. ಅದರಂತೆ ಜಿಲ್ಲೆಯ ಸೇಡಂ ತಾಲ್ಲೂಕಿನ ಗಂಗಾರಾವಪಲ್ಲಿಯಲ್ಲಿ ಸಿಡಿಲಿಗೆ ಎರಡು ಎತ್ತುಗಳು ಬಲಿಯಾಗಿರುಗ ಘಟನೆ ನಡೆದಿದೆ.
ಖಾಸೀಂ ಅಲಿ ಮೊಗಲನ್ ಸಾಬ ಪಿಂಜಾರ ಅವರಿಗೆ ಸೇರಿದ ಅಂದಾಜು ಒಂದೂವರೆ ಲಕ್ಷ ಮೌಲ್ಯದ ಎತ್ತುಗಳು ಸಿಡಿಲಾಘಾತಕ್ಕೆ ಬಲಿಯಾಗಿವೆ