ನಾಳೆಯಿಂದ ಸೇಡಂನಲ್ಲಿ ಸದ್ಭಾವನಾ ಮೂರ್ತಿ ಸಪ್ಪಣಾರ್ಯ ಶಿವಯೋಗಿಗಳು ನಾಟಕ ಪ್ರದರ್ಶನ

0
83

ಕಲಬುರಗಿ: ಜಿಲ್ಲೆಯ ಸಾಂಸ್ಕೃತಿಕ ನಗರಿ ಎಂದೆ ಕರೆಯಲ್ಪಡುವ ಸೇಡಂ ಪಟ್ಟಣದಲ್ಲಿ ನಾಳೆಯಿಂದ ಮೂರು ದಿನಗಳ ವರೆಗೆ (ಮೇ. 01,02,03) ಲಿಂಗೈಕ್ಯ ಪರಮ ಪೂಜ್ಯ ಸಪ್ಪಣಾರ್ಯ ಶಿವಯೋಗಿಗಳ ಜೀವನಾಧಾರಿತ ನಾಟಕ ಸದ್ಭಾವನಾ ಮೂರ್ತಿ ಸಪ್ಪಣಾರ್ಯ ಶಿವಯೋಗಿಗಳು ಎಂಬ ಧಾರ್ಮಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಶ್ರಿ ಕೊತ್ತಲ ಬಸವೇಶ್ವರ ಜಾತ್ರಾಮಹೊತ್ಸವದ ನಿಮಿತ್ತ ಈ ವರ್ಷ ಮತ್ತೆ ಈ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಕಳೆದ ವರ್ಷ ನಡೆದ ಈ ನಾಟಕ ಪ್ರದರ್ಶನ ಭರ್ಜರಿಯಾಗಿ ನಡೆದಿತ್ತು. ಅಂದಂತೆ ಈ ಬಾರಿ ಮತ್ತೆ ಈ ನಾಟಕವನ್ನು ಓನ್ಸಮೋರ್ ಪ್ರದರ್ಶಿಲಾಗುತ್ತಿದೆ.

Contact Your\'s Advertisement; 9902492681

ಸೇಡಂ ಪಟ್ಟಣದ ಮಡಿವಾಳೇಶ್ವರ ನವ ತರುಣ ನಾಟ್ಯ ಸಂಘ ಹಾಗೂ ಸಮಸ್ತ ವ್ಯವಸ್ಥಾಪಕ ಮಂಡಳಿ ಆಯೋಜಿಸಿರುವ ಈ ನಾಟಕವು ಪ್ರತಿದಿನ ರಾತ್ರಿ 10 ಗಂಟೆಗೆ ಪ್ರದರ್ಶನಗೊಳ್ಳಲಿದೆ. ಕುರ್ಚಿ-300, 200, ನೆಲ-100 ರೂ. ದರವಿದ್ದು, ಮಹಿಳೆಯರಿಗೆ ವಿಶೇಷ ಆಸನಗಳ ವ್ಯೆವಸ್ಥೆ ಮಾಡಲಾಗಿದೆ.

ಪತ್ರಕರ್ತರಾದ ಮಹಿಪಾಲ್ ರೆಡ್ಡಿ ಮುನ್ನೂರ, ಪ್ರಭಾಕರ ಜೋಶಿ, ಶಿವಕುಮಾರ ನಿಡಗುಂದಾ ಹಾಗೂ ಗ್ರಾಮದ ಹಿರಿಯ ಕಲಾವಿದರು ಈ ನಾಟಕದಲ್ಲಿ ವಿವಿಧ ಪಾತ್ರಧಾರಿಗಳಾಗಿ ಮಿಂಚಲಿದ್ದಾರೆ. ಬನ್ನಿ ನಾಟಕ ನೋಡಿ! ಮಿಸ್ ಮಾಡ್ಕೊಳ್ಳಬೇಡಿ!!

ಸಪ್ಪಣಾರ್ಯ ಶಿವಯೋಗಿಗಳು ಪಾಳು ಬಿದ್ದ ಭೂಮಿಯಲ್ಲಿ ಭಕ್ತಿಯ ಬೀಜ ಬಿತ್ತಿದ್ದರು. ಅವರ ಸೇವೆಯ ಫಲವಾಗಿ ಇಂದು ಇಡೀ ನಾಡು ಮೆಚ್ಚುವಂತಹ ಧಾರ್ಮಿಕ ಕ್ಷೇತ್ರವಾಗಿ ಶ್ರಿ ಕೊತ್ತಲ ಬಸವೇಶ್ವರ ಸಂಸ್ಥಾನ ಬೆಳೆದಿದೆ. ಅವರ ಜೀವನಾಧಾರಿತ ಸದ್ಭಾವನಾ ಮೂರ್ತಿ ಸಪ್ಪಣಾರ್ಯ ಶಿವಯೋಗಿಗಳು ಎಂಬ ಧಾರ್ಮಿಕ ನಾಟಕ ಭಕ್ತರ ಆಶಯದ ಮೇರೆಗೆ ಮತ್ತೊಮ್ಮೆ ಪ್ರದರ್ಶನ ಕಾಣುತ್ತಿದೆ. ಬಾರಿಯೂ ಸಹ ಈ ನಾಟಕ ಪ್ರದರ್ಶನಗೊಳ್ಳಲಿದೆ.

-ಶ್ರಿ ಸದಾಶಿವ ಸ್ವಾಮೀಜಿ

 

 

ಕಳೆದ ವರ್ಷ ಪ್ರದರ್ಶನ ಕಂಡ ಸದ್ಭಾವನಾ ಮೂರ್ತಿ ಸಪ್ಪಣಾರ್ಯ ಶಿವಯೋಗಿಗಳು ನಾಟಕಕ್ಕೆ ಅಭೂತಪೂರ್ವ ಯಶಸ್ವು ದೊರಕಿತ್ತು. ಹಿಗಾಗಿ ಮತ್ತೊಮ್ಮೆ ಈ ನಾಟಕವನ್ನು ಮತ್ತೆ ನಿಮ್ಮೇದುರಿಗೆ ಪ್ರದರ್ಶಿಸಲಾಗುತ್ತಿದೆ.

ಶಿವಯ್ಯಸ್ವಾಮಿ ಬಿಬ್ಬಳ್ಳಿ

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here