ಬೆಂಗಳೂರು: ಇಂದು ಬೆಂಗಳೂರಿನ ಹಮೀದ್ ಶಾ ಕಾಂಪ್ಲೆಕ್ಸ್ ನಲ್ಲಿ ಕರ್ನಾಟಕ ರಾಜ್ಯದ ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ನ ಸಭೆ ಜರುಗಿತು. ಸಭೆಯಲ್ಲಿ ಯೂನಿಯನ್ ನ ರಾಜ್ಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಕಲಬುರಗಿಯ ಅಬ್ದುಲ್ ರಹೀಂ, ರಾಜ್ಯಾಧ್ಯಕ್ಷ, ಕೋರ್ಗ್ ಮಹ್ಮದ್ ಫೈಜಲುಲಾ ರಾಜ್ಯ ಉಪಾಧ್ಯಕ್ಷ, ಮಂಗಳೂರಿನ ಅಬ್ದುಲ್ ಜಮೀಲ್ ಕಾರ್ಯದರ್ಶಿ, ನ್ಯಾಯವಾದಿ ಮಾಜಿದ್ ಖಾನ್, ಅಬ್ದುಲ್ ಜಾಬೀರ್, ಸಯದ್ ದಸ್ತೆಗೀರ್ ಗುಲಬರ್ಗಾ, ಉಬೇದುಲ್ಲಾ ಶರೀಫ್ ಅವರಿಗೆ ಯೂನಿಯನ್ ನ ಸದಸ್ಯರಾಗಿ ಕೇಂದ್ರಕಾರ್ಯದರ್ಶಿ ಅಲ್ಫಾನಸೊ ಫರ್ನಕೋ ಅವರು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಎಸ್.ಡಿ.ಪಿ.ಐ ಪಕ್ಷದ ರಾಜ್ಯಧ್ಯಕ್ಷ ಇಲಿಯಾಜ್ ಥಮಬ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕರಾದ ಡಾ. ಮಹೇಬೂಬ್ ಶರೀಫ್ ಅವರು ಮುಖ್ಯ ಅತಿಥಿಯಾಗಿದ್ದರು, ಈ ಸಂದರ್ಭದಲ್ಲಿ ಪುಟ್ಟನಂಜಾ ಸೇರಿದಂತೆ ಪಕ್ಷದ ಮುಖಂಡರು ಇದ್ದರು.