ಕಲಬುರಗಿ: ಡಿಸಿಸಿ ಬ್ಯಾಂಕ್ ಮಿಸ್ ಮ್ಯಾನೇಜ್ ಮೆಂಟ್ ನಿಂದಾಗಿ ಈ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ. ಈ ಹಿಂದೆ ಸರಕಾರಕ್ಕೆ ರೂ 200 ಕೋಟಿ ಸಹಾಯ ಕೇಳಲಾಗಿತ್ತು. ಹಾಗಾಗಿ ಈ ಕೂಡಲೇ ಸೂಪಡ್ ಸೀಡ್ ಮಾಡಲೇಬೇಕು. ಜೊತೆಗೆ ಚಿತ್ತಾಪುರ ಪಿ ಎಲ್‌ಡಿ ಬ್ಯಾಂಕ್ ನ ಮಿಸ್ ಮ್ಯಾನೆಂಜ್ ಮೆಂಟ್ ಕುರಿತು ವರದಿ ತರಿಸಿಕೊಂಡು, ಸೂಪರ್ ಸೀಡ್ ಮಾಡಲಿ ಎಂದು ಆಗ್ರಹಿಸಿದರು. ಕೂಡಲೇ ಪ್ರತಿಕ್ರಿಯಿಸಿದ ಸಚಿವ ಈ ಕುರಿತು ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಚಿತ್ತಾಪುರ ತಾಲೂಕಿನಲ್ಲಿ ಒಟ್ಟು 9 ಜನ ಡೆಂಗ್ಯೂ, ಡಿಫ್ಥೇರಿಯಾ ( ಗಂಟಲು ಮಾರಿ) ಹಾಗೂ ಇತರೆ ಸಾಂಕ್ರಾಮಿಕ ರೋಗಗಳಿಂದ ತೀರಿಕೊಂಡಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಕೇವಲ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಸಂಖ್ಯೆ ನಮೂದಿಸಿ ವರದಿ ಕಳಿಸುತ್ತಿದ್ದಾರೆ ಆದರೆ ಡೆಂಗ್ಯೂ, ಡೆಪ್ತೇರಿಯಾ ರೋಗಕ್ಕೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಯಲ್ಲಿಯೂ ಸುಮಾರು ರೋಗಿಗಳು ದಾಖಲಾಗಿದ್ದಾರೆ.
ಜಿಲ್ಲೆಯಲ್ಲಿ ಆರ್ ಓ ಪಿ ಗಳು ( ಶುದ್ದ ಕುಡಿಯುವ ನೀರಿನ ಘಟಕಗಳು) ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ನಿನ್ನೆ ಚಿಂಚೋಳಿಯಲ್ಲಿ ಶಾಸಕರ ಸಭೆಯಲ್ಲಿ ತಾಲೂಕಿನಲ್ಲಿ 90 ಆರ್ ಓ ಪಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ ಆದರೆ ಇಡೀ ಜಿಲ್ಲೆಯಲ್ಲಿ 133 ಆರ್ ಓ ಪಿ ಕೆಲಸ ಮಾಡುತ್ತಿಲ್ಲ ಎಂದು ಇಂದು ಮಾನ್ಯ ಡಿಸಿ ಎಂ ಸಾಹೇಬರಿಗೆ ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಇದರಲ್ಲಿ ಯಾವುದು ಸರಿ ? ಅಂಕಿ ಸಂಖ್ಯೆಗಳು ತಾಳೆಯಾಗುತ್ತಿಲ್ಲ. ಅಧಿಕಾರಿಗಳು ಶಾಸಕರಿಗೆ ದಾರಿ ತಪ್ಪಿಸುತ್ತಿದ್ದರಾ? ಅಥವಾ ಡಿಸಿಎಂ ಸಾಹೇಬರಿಗೆ ದಾರಿ ತಪ್ಪಿಸುತ್ತಿದ್ದರಾ? ಈ ಕುರಿತು ವಾಸ್ತವಿಕ ವರದಿ ತರಿಸಿಕೊಂಡು ಅಧಿಕಾರಿಗಳ ವಿರುದ್ದ ಕ್ರಮ ಕೈ ಗೊಳ್ಳಬೇಕೆಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಅವರ ಕುರಿತು ವರದಿಗಳಲ್ಲಿ ದಾಖಲು ಮಾಡಿಲ್ಲ ಇದರಿಂದ ಸಾವಿಗೀಡಾದವರ ಸರಿಯಾದ ಸಂಖ್ಯೆ ಸಿಕ್ಕಿಲ್ಲ. ಆರೋಗ್ಯ ಇಲಾಖೆ, ನಗರಸಭೆ ಸೇರಿದಂತೆ ಇತರೆ ಸರಕಾರಿ ನಾಗರಿಕ ಸೇವಾ ಸಂಸ್ಥೆಗಳೊಂದಿಗೆ ಸಹಕಾರ ಹೊಂದದೆ ಸ್ವಚ್ಛತೆಯ ಅರಿವು ಮೂಡಿಸುತ್ತಿಲ್ಲ ಹಾಗಾಗಿ ಡೆಂಗ್ಯೂ, ಡೆಪ್ತೇರಿಯಾ ರೋಗದಿಂದ ಸಾವುಗಳು ಸಂಭವಿಸುತ್ತಿವೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಅವರುಆರೋಗ್ಯ ಇಲಾಖೆಯ ವೈಫಲ್ಯತೆಯನ್ನು ವಿವರವಾಗಿ ಹೇಳಿದರು.
ಇತ್ತೀಚಿಗೆ ವಾಡಿ ಪಟ್ಟಣದಲ್ಲಿ ಬಾಲಕಿಯೊಬ್ಬಳು ಹಾವು ಕಚ್ಚಿ ಸಮಯಕ್ಕೆ ಸರಿಯಾಗಿ ಅಲ್ಲಿನ ಪಿಎಚ್ ಸಿಯಲ್ಲಿ ಆ್ಯಂಟಿ ವೇನಮ್ ( ಹಾವು ಕಚ್ಚಿದಾಗ ಕೊಡುವ ಜೌಷಧಿ) ಇಲ್ಲದ್ದರಿಂದ ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾಳೆ ಆ ಬಾಲಕಿಯ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ದೊರಕಿಸಿಕೊಡಬೇಕು ಎಂದು ಡಿಸಿಎಂ ಅವರ ಗಮನಕ್ಕೆ ತಂದರು. ಆಗ ಪ್ರತಿಕ್ರಿಯಿಸಿದ ಡಿಸಿಎಂ ಅವರು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸುವುದಾಗಿ ಹೇಳಿ, ಪರಿಹಾರ ಕೊಡಿಸುವ ಕುರಿತು ನೋಡುವುದಾಗಿ ಭರವಸೆ ನೀಡಿದರು.
ಕಲಬುರಗಿ ನಗರದಲ್ಲಿ ಖಾಸಗಿ ಶಾಲೆಗೆ ಹೋಗುವ ಮಕ್ಕಳನ್ನು ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಟೋದಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದಾರೆ ಇದು ಅತ್ಯಂತ ಅಪಾಯಕಾರಿ. ನಾನು ಉಸ್ತುವಾರಿ ಸಚಿವನಾಗಿದ್ದಾಗ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಿದ್ದೆ. ನಂತರ ಅದು ನಿಂತುಹೋಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಖಾಸಗಿ ಶಾಲೆಗಳಿಗೆ ನೋಟೀಸ್ ಜಾರಿ ಮಾಡಿ ಅವರಿಂದ ಆಟೋ ಅಥವಾ ಇನ್ನಿತರೆ ವಾಹನಗಳ ಸಂಬಂಧಿಸಿದವರಿಗೆ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ನೀಡಿದರೆ ಇದನ್ನು ತಡೆಗಟ್ಟಬಹುದು. ಈ ಕುರಿತು ಎಸ್ ಪಿ ಹಾಗೂ ನಗರ ಪೊಲೀಸ್ ಕಮೀಷನರ್ ಅವರು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದರು.