ಬೈಕ್ ಮತ್ತು ಲಾರಿ ಡಿಕ್ಕಿ ಬೈಕ್ ಸವಾರ ಗಂಭೀರ ಗಾಯ

0
70

ಕಲಬುರಗಿ: ಇಲ್ಲಿನ ಆಜಾದಪೂರ ಗ್ರಾಮದಿಂದ ಬರುತ್ತಿದ್ದ ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಬೈಕ್‌ಸವಾರನೊಬ್ಬ ಗಂಭೀರ ಗಾಯಗೊಂಡ ಘಟನೆ ಮಹಾನಗರದ ರಿಂಗ್ ರಸ್ತೆ ಕೆಎನ್‌ಝಡ್ ಫಂಕ್ಷನಹಾಲ್ ಬಳಿಯಿಂದು ನಡೆದಿದೆ.

ಆಜಾದಪೂರ ಗ್ರಾಮದ ಶ್ರೀಕಾಂತ ಬಸವರಾಜ ಕೊರೆ ಎಂಬ ವ್ಯಕ್ತಿ ತನ್ನ ಬೈಕ್‌ನಲ್ಲಿ ಹೂ ಗಳ ಮಾರಾಟದ ಮೊಟ್ಟೆಯನ್ನು ಸಾಗಿಸಿಕೊಂಡು ಬರುತ್ತಿರುವಾಗ ನಗರದ ರಿಂಗ್ ರಸ್ತೆ ಬಳಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

Contact Your\'s Advertisement; 9902492681

ತೀವ್ರವಾಗಿ ಗಾಯಗೊಂಡ ಈತನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು. ಈ ಕುರಿತು ಸಂಚಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here