ಓದುಗರ ವೇದಿಕೆ: ವೈದ್ಯ ಮೂಲಗಳ ಪ್ರಕಾರ ಉತ್ತರ ಕರ್ನಾಟಕದಲ್ಲಿ ಪೌಷ್ಠಿಕ ಆಹಾರ ಕೂರತೆ

1
86
ವೈದ್ಯ ಮೂಲಗಳ ಪ್ರಕಾರ ಉತ್ತರ ಕರ್ನಾಟಕದಲ್ಲಿ ಪೌಷ್ಠಿಕ ಆಹಾರ ಕೂರತೆ ಇದೆ ಅಪೌಷ್ಠಿಕ ಕಳಪೆ ಅಹಾರ ಪೂರೈಕೆಯಾಗುತ್ತೀದೆ ಎಂದು ವರದಿಯಾಗಿದೆ ಹಾಗೂ ಪತ್ರಿಕೆಯೊಂದರಲ್ಲಿ ಸಹ ಪ್ರಕಟವಾಗಿದೆ ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಅಪೌಷ್ಠಿಕ ಆಹಾರದಿಂದ ರಕ್ತಹೀನತೆ ಹೆಚ್ಚು ಕಂಡುಬರುತ್ತದೆ ಎಂದು ಮೂಲಗಳು ತಿಳಿಸಿವೆ.
ಮಕ್ಕಳಿಗೆ ಪೌಷ್ಠಿಕ ಅಹಾರದಿಂದ ಮಕ್ಕಳ ಭವಿಷ್ಯವು ಸದೃಢ ಮುಂದಿನ ಭವಿಷ್ಯದಲ್ಲಿ ಸಶಕ್ತ ಸಧೃಡವಾಗಲೇಂದು ಅಂಗನವಾಡಿ ಶಾಲೆಗಳಲ್ಲಿ ಮತ್ತು ಶಾಲೆಗಳಲ್ಲಿ ಪೌಷ್ಠಿಕ ಅಹಾರ ನೀಡಬೇಕು ಎಂದು ಸರ್ಕಾರದ ನಿಯಮವಿದೆ ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ಕಲ್ಯಾಣ ಕರ್ನಾಟಕದ ಭಾಗದ ಮಕ್ಕಳಿಗೆ ಅಪೌಷ್ಠಿಕ ಆಹಾರ ಸೇವಿಸಿ ಅವರ ಬೆಳವಣಿಗೆ ಕುಂಠಿತಗೋಳುತ್ತೀದೆ ವಿಶೇಷವಾಗಿ ವಯೋಮಿತಿಗೆ ತಕ್ಕಂತೆ ತೂಕ ಹೊಂದಿಲ್ಲದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವ ಪಟ್ಟಿಯಲ್ಲಿ ಕಲಬುರಗಿ, ಕೊಪ್ಪಳ, ಯಾದಗಿರಿ, ಬಳ್ಳಾರಿ ಹಾಗೂ ಬಾಗಲಕೋಟೆ ಜಿಲ್ಲೆಗಳು ಗುರುತಿಸಿಕೊಂಡಿದ್ದರೆ.
ಎತ್ತರಕ್ಕೆ ತಕ್ಕಂತೆ ತೂಕ ಹೊಂದಿಲ್ಲದ ಪಟ್ಟಿಯಲ್ಲಿ ರಾಯಚೂರು, ಬೀದರ, ಬೆಳಗಾವಿ, ವಿಜಯಪುರ, ಹಾಸನ ಜಿಲ್ಲೆಗಳು ಗೋಚರಿಸುತ್ತಿವೆ. ಮಕ್ಕಳ ಅಪೌಷ್ಟಿಕತೆ ಪ್ರಮಾಣ ನೋಡಿದಾಗ ಕಲ್ಯಾಣ ಕರ್ನಾಟಕದ ಜಿಲ್ಲೆಗಳೇ ಹೆಚ್ಚು ಪಾಲು ಹೊಂದಿರುವುದು ಸ್ಪಷ್ಟವಾಗುತ್ತೀದೆ ಇದಕ್ಕೆ ಮುಖ್ಯ ಕಾರಣವೇನೆಂದರೆ ಅಧಿಕಾರಿಗಳ ಬೇಜವಬ್ಧಾರಿತನ ನಿರಲಕ್ಷವೆ ಕಾರಣವಾಗಿದೆ ಕೋಡಲೆ ಅಧಿಕಾರಿಗಳು ಎಚ್ಚೇತ್ತೀಕೊಂಡು ಕಳಪೆ ಅಪೌಷ್ಠಿಕ ಅಹಾರ ಪೂರೈಕೆಯಾಗುತ್ತೀರುವುದನ್ನು ಗಮನ ಹರಿಸಿ ತನಿಖೆ ಮಾಡಿ ಕ್ರಮ ಕೈಗೋಳಬೇಕು.
ಇಲ್ಲವಾದಲ್ಲಿ ಅಪೌಷ್ಟಿಕತೆಯಿಂದ ಮಕ್ಕಳ ಭವಿಷ್ಯದ ಜನಾಂಗದ ಮೇಲೆ ಪರಿಣಾಮ ಬೀರುತದೆ ಭವಿಷ್ಯದಲ್ಲಿ ಸದೃಢ ಭಾರತ ನಿರ್ಮಾಣ ದೃಷ್ಟಿಯಿಂದ ಸರ್ಕಾರಗಳು ಅಪೌಷ್ಟಿಕತೆ ಮಹಾಮಾರಿ ವಿರುದ್ಧ ಸಮರ ಸಾರಬೇಕಿದೆ. ಅಪೌಷ್ಟಿಕತೆ ನಿವಾರಣೆ ಕೆಲಸ ಕೇವಲ ಸರ್ಕಾರಿ ಕಾರ್ಯಕ್ರಮವಾಗಿ ದಾಖಲೆಗಳಿಗೆ ಸೀಮಿತವಾಗದೆ, ಪೌಷ್ಟಿಕ ಹಾಗೂ ಪೂರಕ ಆಹಾರ ಔಷಧೋಪಚಾರ ಅಪೌಷ್ಟಿಕ ಮಕ್ಕಳಿಗೆ ಸಕಾಲಕ್ಕೆ ಸಮರ್ಪಕವಾಗಿ ತಲುಪಬೇಕಾಗಿದೆ ಇದರ ಬಳಕೆ ಜಾಗೃತಿ ಕಾಳಜಿ ಹಾಗೂ ಶಿಸ್ತಿನ ಮೇಲುಸ್ತುವಾರಿ ಅಗತ್ಯವಾಗಿದೆ

 

 

Contact Your\'s Advertisement; 9902492681
ಸಂತೋಷ ಜಾಬೀನ್ ಸುಲೇಪೇಟ
ಸಾಮಾಜಿಕ ಚಿಂತಕ ಹಾಗೂ ಹೋರಾಟಗಾರರು

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here