ಮಕ್ಕಳ ಚಿತ್ರಕಲಾ ಸ್ಪರ್ಧೆ: ಪ್ರತಿಭೆ ಪ್ರೋತ್ಸಾಹಿಸಲು ಅಂದಾನಿ ಕರೆ

0
71

ಕಲಬುರಗಿ: ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಖ್ಯಾತ ಕಲಾವಿದ ಡಾ. ವಿ.ಜಿ. ಅಂದಾನಿ ಅವರು ಇಲ್ಲಿ ಕರೆ ನೀಡಿದರು.

ನಗರದ ದಿ ಐಡಿಯಲ್ ಫೈನ್ ಆರ್ಟ್ ಸಂಸ್ಥೆಯಲ್ಲಿ ಶುಕ್ರವಾರ ಕಲಬುರಗಿ ದೃಶ್ಯಕಲಾ ಸಂಸ್ಥೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಪ್ರಾರಂಭದಿಂದಲೇ ಸೃಜನಶೀಲತೆ ಬೇರೂರಿರುತ್ತದೆ. ಆದರೆ ನಾವು ಅವರಿಗೆ ಮುಕ್ತವಾಗಿ ಚಿತ್ರ ಬಿಡಿಸಲು ಪ್ರೇರೇಪಿಸುವ ಮೂಲಕ ಅವರಲ್ಲಿರುವ ಪ್ರತಿಭೆಯನ್ನು ಹೊರತರಬಹುದು ಎಂದರು.

Contact Your\'s Advertisement; 9902492681

ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಟಿ. ದೇವಿಂದ್ರ ಅವರು ಮಾತನಾಡಿ, ಸಂಸ್ಥೆ ಕಲಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಈ ಭಾಗದ ಕಲಾ ಸಂಪತ್ತನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಅಲ್ಲದೆ ವಿದ್ಯಾರ್ಥಿ ಮಟ್ಟದಲ್ಲಿಯೇ ಚಿತ್ರಕಲೆಗೆ ಪ್ರೇರೇಪಿಸುವ ಕಾರ್ಯ ಅಮೋಘವಾದುದು ಎಂದು ಹೇಳಿದರು.

ಸ್ಪರ್ಧೆಯಲ್ಲಿ ೭೨ ಶಾಲೆಗಳಿಂದ ಸುಮಾರು ೯೦೨ ವಿದ್ಯಾರ್ಥಿಗಳು ಬಾಗವಹಿಸಿದ್ದರು. ಗಾಂಧೀಜಿಯ ಕನಸು ಹಾಗೂ ನಾ ಕಂಡ ಕರ್ನಾಟಕ ಎಂಬ ವಿಷಯಗಳನ್ನು ಸ್ಪರ್ಧೆಯ ವಿಷಯಗಳಾಗಿ ನೀಡಲಾಗಿತ್ತು. ಚಿಕ್ಕ ಮಕ್ಕಳಿಗೆ ಯವುದೇ ವಿಷಯದ ನಿರ್ಬಂಧವಿರಲಿಲ್ಲ. ಹೀಗಾಗಿ ಅನೇಕ ಮಕ್ಕಳು ತಮ್ಮ ಇಷ್ಟದ ವಿಷಯದ ಮೇಲೆ ಚಿತ್ರ ಬಿಡಿಸಿ ಆನಂದಪಟ್ಟರು. ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗೆ ಆಯ್ಕೆಯಾದ ೨೫ ಮಕ್ಕಳಿಗೆ ಬಹುಮಾನವನ್ನು ಕಲಾ ಮಹೋತ್ಸವದಲ್ಲಿ ನೀಡಲಾಗುವುದು.

ಕಾರ್ಯಕ್ರಮದಲ್ಲಿ ದಿ ಐಡಿಯಲ್ ಫೈನ್ ಆರ್ಟ ಇನಸ್ಟಿಟ್ಯೂಟ್‌ನ ಪ್ರಿನ್ಸಿಪಾಲ್ ಎಸ್. ರಾಜಶೇಖರ್, ಎಂಎಂಕೆ ಕಾಲೇಜ್ ಆಫ್ ವಿಜ್ವುಲ್ ಆರ್ಟ್‌ನ ಪ್ರಿನ್ಸಿಪಾಲ್ ಶೇಷರಾವ್ ಬಿರಾದಾರ್, ಉಪನ್ಯಾಸಕರಾದ ಲೋಕಯ್ಯಾ ಮಠಪತಿ, ಪ್ರಕಾಶ್ ಗಡಕರ್, ಗೌತಮ್ ಅಂದಾನಿ, ಚಂದ್ರಹಾಸ್ ಜಾಲಿಹಾಳ್, ವೀರಭದ್ರಪ್ಪಾ, ನಾರಾಯಣ್ ಜೋಷಿ, ಮಹ್ಮದ್ ಅಯಾಜೂದ್ದೀನ್ ಪಟೇಲ್, ವಿಭಾಗ ಮಟ್ಟದ ಚಿತ್ರಕಲಾ ಶಿಕ್ಷಕರ ಸಂಘದ ಅದ್ಯಕ್ಷ ಧರ್ಮಾನಂದ್ ಕುದಂಪೂರೆ ಮತ್ತು ಜಿಲ್ಲೆಯ ಚಿತ್ರಕಲಾ ಶಿಕ್ಷಕರು ಬಾಗವಹಿಸಿದ್ದರು. ಕಾರ್ಯಕ್ರಮದ ಸಂಚಾಲಕ ಎಚ್.ವಿ. ಮಂತಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here