ಕೃಷಿ-ಋಷಿ ಸಂಸ್ಕೃತಿಯಿಂದ ಸದೃಢ ರಾಷ್ಟ್ರ ನಿರ್ಮಾಣ

0
62

ಕಲಬುರಗಿ: ಕೃಷಿ ಮತ್ತು ರೈತ ದೇಶದ ಬೆನ್ನೆಲುಬು. ಜಗತ್ತಿಗೆ ಅನ್ನವನ್ನು ನೀಡುವ ಮಹಾನ ಶಕ್ತಿ ಇದರಲ್ಲಿದೆ. ಆಧುನೀಕರಣಕ್ಕೆ ಸಿಲುಕಿ ಕೃಷಿಯಿಂದ ವಿಮುಖರಾದರೆ ಆಪತ್ತು ತಪ್ಪಿದ್ದಲ್ಲ. ಆಹಾರವನ್ನು ಉತ್ಪಾದಿಸಿ, ಸಮಾಜದೊಂದಿಗೆ ಹಂಚುತ್ತಾ ಕಾಯಕ ಮಾಡುವದು ಕೃಷಿ ಸಂಸ್ಕೃತಿಯಾಗಿದೆ. ಸಮಾಜ ದಾರಿತಪ್ಪಿದಾಗ ಸೂಕ್ತ ಮಾರ್ಗದರ್ಶನ ಮಾಡಿ ಸರಿದಾರಿಗೆ ತರುವಲ್ಲಿ ಗುರುಗಳ ಪಾತ್ರ ಪ್ರಮುಖ. ಕೃಷಿ-ಋಷಿ ಸಂಸ್ಕೃತಿ ಇವೆರಡು ಕೂಡಿದಾಗ ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾಧ್ಯವಿದೆಯೆಂದು ಮಕ್ತಂಪೂರ ಗುರುಬಸವ ಮಠದ ಪೂಜ್ಯ ಶಿವಾನಂದ ಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದರು.

ಅವರು ನಗರದ ಸಮೀಪದ ಹಾಗರಗಾ ಗ್ರಾಮದ ಪ್ರಗತಿಪರ ರೈತ ಮಹೇಶ ಮಠಪತಿ ಅವರ ತೋಟದಲ್ಲಿ ’ಕನ್ನಡ ಜಾನಪದ ಪರಿಷತ್’ ಜಿಲ್ಲಾ ಘಟಕ ಮತ್ತು ’ಬಸವೇಶ್ವರ ಸಮಾಜ ಸೇವಾ ಬಳಗ’ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ರೈತ ದಿನಾಚರಣೆಯ ಪ್ರಯುಕ್ತ ಪ್ರಗತಿಪರ ರೈತರಿಗೆ ಸತ್ಕಾರ, ಕೃಷಿ ವಿಜ್ಞಾನಿಗಳೊಂದಿಗೆ ಸಂವಾದ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿಶೇಷ ಉಪನ್ಯಾಸ ನೀಡಿದ ಕೃಷಿ ವಿಜ್ಞಾನಿ ಮಹೇಶ ಪಾಟೀಲ, ಕೃಷಿ ಅಭಿವೃದ್ಧಿಗೆ ಸರ್ಕಾರ ಅನೇಕ ಕಾರ್ಯಕ್ರಮಗಳು, ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಅವುಗಳ ಪರಿಣಾಮಕಾರಿ ಅನುಷ್ಠಾನದ ಕೊರತೆಯಿಂದ ಸೂಕ್ತ ರೈತರಿಗೆ ಅದರ ಪ್ರಯೋಜನೆ ದೊರೆಯುತ್ತಿಲ್ಲ. ರೈತರು ಕೃಷಿ ವಿಜ್ಞಾನಿಗಳಿಂದ ಮಾಹಿತಿಯನ್ನು ಪಡೆದು ಕೃಷಿ ಚಟುವಟಿಕೆ ಮಾಡುವುದು ಉತ್ತಮ. ಮಳೆ ನೀರಿನ ಕೊಯ್ಲು, ವ್ಶೆಜ್ಞಾನಿಕ ಬೆಳೆ ಪದ್ದತಿ, ಬೆಳೆ ನಿರ್ವಹಣೆ, ಬಿತ್ತನೆ ಪದ್ದತಿ, ರೋಗಗಳ ನಿಯಂತ್ರಣ ಸೇರಿದಂತೆ ಕೃಷಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ರೈತರಿಗೆ ತಿಳಿಸಿಕೊಟ್ಟರು.

Contact Your\'s Advertisement; 9902492681

ಕಜಾಪ ಅಧ್ಯಕ್ಷ ಎಂ.ಬಿ.ನಿಂಗಪ್ಪ, ಬಳಗದ ಸಂಸ್ಥಾಪಕ ಅಧ್ಯಕ್ಷ ಪ್ರೊ.ಎಚ್.ಬಿ.ಪಾಟೀಲ ಮಾತನಾಡಿ, ಚೌಧರಿ ಚರಣಸಿಂಗ ಅವರು ರೈತ ವರ್ಗ ನೀಡಿರುವ ಕೊಡುಗೆ ನಾವೆಂದಿಗೂ ಮರೆಯುವಂತಿಲ್ಲ. ಅವರ ಜನ್ಮದಿನವನ್ನು ’ರಾಷ್ಟ್ರೀಯ ರೈತ ದಿನ’ವನ್ನಾಗಿ ಆಚರಿಸಲಾಗುತ್ತದೆ. ರೈತ ದೇಶದ ಬೆನ್ನೆಲಬು.ರಾಷ್ಟ್ರದ ಅಭಿವೃದ್ಧಿಯ ಚೇತನಾ ಶಕ್ತಿ.ಆತನ ಬದುಕು ಹಸನಾದರೇ ಮಾತ್ರ, ಸಮಾಜ ಸಮತೋಲನವಾಗಿರಲು ಸಾಧ್ಯವಿದೆ. ಕಾರಣಾಂತರಗಳಿಂದ ರೈತ ಇಂದು ಸಮಸ್ಯೆಗಳನ್ನು ಏದುರಿಸುತ್ತಿದ್ದಾನೆ. ಆತನಿಗೆ ಮಾನಸಿಕ ಸ್ಥೈರ್ಯ, ಧೈರ್ಯವನ್ನು ನೀಡಿ, ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಜವಾಬ್ದಾರಿಯುತ ಸಮಾಜದ ಆದ್ಯ ಕರ್ತವ್ಯವಾಗಿದೆಯೆಂದರು.

ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಮಹೇಶ ಮಠಪತಿ, ಸಿದ್ದಪ್ಪ ಪೂಜಾರಿ, ಜಾವೇದ್ ಅಕ್ತರ್, ನಾಗರಾಜ ರಾಜಾಪುರ, ಸಿದ್ದು ಭಂಕಲಗಿ, ಸಂತೋಷ ಪೂಜಾರಿ ಅವರಿಗೆ ಸತ್ಕರಿಸಿ ಗೌರವಿಸಲಾಯಿತು. ಜಾನಪದ ಕಲಾವಿದ ಎಂ.ಎನ್.ಸುಗಂಧಿ ಅವರಿಂದ ಜರುಗಿದ ರೈತ ಗೀತೆಗಳು ಮತ್ತು ಜನಪದ ಹಾಡುಗಳು ಮನಸೂರೆಗೊಳಿಸಿತು.
ಕಾರ್ಯಕ್ರಮದಲ್ಲಿ ಮಹಾದೇವಯ್ಯ ಹಿರೇಮಠ, ವೀರೇಶ ಬೋಳಶೆಟಿ, ದೇವಿಂದ್ರಪ್ಪ ವಿಶ್ವಕರ್ಮ, ಅಮರ ಬಂಗರಗಿ, ಬಸವರಾಜ ಪುರಾಣೆ, ಪ್ರದೀಪ ಕುಂಬಾರ, ಸುಗಲಾಬಾಯಿ ಆರ್.ಮಠಪತಿ ಸೇರಿದಂತೆ ಬಳಗ, ಪರಿಷತ್ ಸದಸ್ಯರು, ರೈತರು, ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here