ಯಾದಗಿರಿ: ಟೋಕ್ರೆ ಕೋಲಿ ಸಮಾಜದಿಂದ ಯುವಕರಿಗೆ ಮೋಟಾರು ವಾಹನ ಕಾನೂನು ಜಾಗೃತಿ ಮೂಡಿಸುವ ವಿನೂತನ ಕಾರ್ಯಕ್ರಮ ಸಂಘದ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ. ಮುದ್ನಾಳ, ವಾಹನ ಇರುವುದು ನಮ್ಮ ಅನುಕೂಲ ಮತ್ತು ಅವಸರಕ್ಕೆ ಹೊರತು ಪ್ರಾಣ ಕಳೆದುಕೊಳ್ಳಲು ಅಲ್ಲ. ಆದ್ದರಿಂದ ಮೋಟಾರು ವಾಹನ ಕಾನೂನುಗಳನ್ನು ಸರಿಯಾಗಿ ತಿಳಿದುಕೊಂಡು ಸಮರ್ಪಕವಾಗಿ ಆಚರಿಸಿದಲ್ಲಿ ಸಂಚಾರಿ ಸಂಬಂಧಿ ಅಪಘಾತಗಳು, ಸಮಸ್ಯೆಗಳು ದೂರವಾಗಿ ಸುಗಮ ಸಂಚಾರಕ್ಕೆ ಕೊಡುಗೆ ನೀಡಿದಂತೆ ಆಗುತ್ತದೆ ಎಂದು ತಿಳಿಸಿದರು.
ಮೊದಲು ವಾಹನ ಚಾಲನೆಯ ಪರವಾನಿಗೆ ಪಡೆದು ನಂತರ ವಾಹನ ಖರೀದಿಸಿ , ಜೊತೆಗೆ ಆರ್.ಸಿ. ಬುಕ್, ಇನ್ಸುರೆನ್ಸ್, ಚಾಲನಾ ಪರವಾನಿಗೆ ಪತ್ರದ ಪ್ರತಿಗಳನ್ನು ಇಟ್ಟುಕೊಂಡು ಹೆಲ್ಮೆಟ್ ಕಡ್ಡಯವಾಗಿ ಧರಿಸಿಕೊಂಡು ಸಂಚರಿಸಬೇಕೆಂದು ಕಿವಿಮಾತು ಹೇಳಿದರು.
ಇತ್ತಿಚೆಗೆ ಪತ್ರಿಕೆ ಟಿವಿಯಲ್ಲಿ ನೋಡುತ್ತಿರುವುದು ಬರಿ ರಸ್ತೆ ಅಪಘಾತಗಳಲ್ಲಿ ಬೈಕ್ ಸವಾರರ ಸಾವು ಸಂಭವಿಸುತ್ತಿರುವುದು ಸಾಮಾನ್ಯವಾಗಿದೆ. ಇದಕ್ಕೆ ಕಾರಣ ಕಾನೂನು ಪಾಲನೆ ಮಾಡದೇ ಇರುವುದೇ ಆಗಿದೆ ಆದ್ದರಿಂದ ಸರ್ಕಾರ ರೂಪಿಸಿದ ಕಾನೂನು ಜನ ಹಿತಕ್ಕಾಗಿಯೇ ಇರುತ್ತದೆ ಎಂಬುದನ್ನು ಅರಿತು ಕಾನೂನು ಪಾಲಿಸಬೇಕು. ಮುರಿಯಬಾರದು ಎಂದು ಹೇಳಿದರು.
ಸಂಚಾರಿ ನಿಯಂತ್ರಕ ದೀಪಗಳ ಕುರಿತು ಸರಿಯಾಗಿ ಅರಿತುಕೊಳ್ಳಬೇಕು. ಟ್ರಾಫಿಕ್ ಸಿಗ್ನಲ್ ಗಳನ್ನು ಉಲ್ಲಂಘಿಸದೇ ಸರಿಯಾಗಿ ಪಾಲನೆ ಮಾಡಿದಲ್ಲಿ ಸುಗಮ ಸಂಚಾರ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ದಾಖಲೆಗಳು ಇರದೇ ಸಂಚರಿಸಿದರೆ ಸಂಚಾರಿ ಪೋಲೀಸರಿಗೆ ಸಿಕ್ಕು ದಂಡ ಕಟ್ಟಬೇಕಾಗುತ್ತದೆ ದಾಖಲೆಗಳು ಇಟ್ಟುಕೊಂಡು ಸಂಚರಿಸಿದಲ್ಲಿ ದಂಡದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಇದರಿಂದ ನಮಗೂ ಸರ್ಕಾರಕ್ಕೂ ಉತ್ತಮ ಎಂದು ಅವರು ತಿಳಿಹೇಳಿದರು.
ಈ ಸಂದರ್ಭದಲ್ಲಿ ಸಿದ್ದಪ್ಪ, ಮಹಾದೇವ, ದೇವಿಂದ್ರಪ್ಪ, ಮಲ್ಲಪ್ಪ, ಬಸವರಾಜ, ಸಿದ್ರಾಮಪ್ಪ,ಶರನಪ್ಪ, ಈರಪ್ಪ, ಸಾಬರಡ್ಡಿ,ರವಿ, ಶಂಕ್ರಪ್ಪ,ಮಲ್ಲಲಾರಡ್ಡಿ,ಸೌರಪ್ಪ,ಸುರೇಶ ಕೃಷ್,ವೆಂಕಟೇಶ, ಕಾಶಿನಾಥ, ಹೋನಪ್ಪ, ಮಲ್ಲು,ದೇವಿಂದ್ರಪ್ಪ,ನಾಗೆಮದ್ರ,ರಾಘವೇಂದ್ರ,ಚಂದ್ರು, ಜಗದೀಶ, ಆನಂದ,ಮಹೇಶ, ಮಹಾದೇವಪ್ಪ, ಸಾಯಬಣ್ಣ, ಅಡಿವೇಪ್ಪ ನಿಜಶರಣ ಅಂಬಿಗರ ಚೌಡಯ್ಯನ ಯುವಕ ಸಂಘ ಹಾಗೂ ವಿಠಲ್ ಹೇರೂರು ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಇದ್ದರು.