ಅಜಾತ ಶತ್ರು ಎನ್. ಧರ್ಮಸಿಂಗ್: ಎನ್.ಎಸ್. ಭೋಸ್ ರಾಜ್

0
113

ಕಲಬುರಗಿ: ಮಾಜಿ ಮುಖ್ಯಮಂತ್ರಿ ಎನ್.‌ಧರ್ಮ ಸಿಂಗ್ ಅವರು ಈ ಭಾಗದ ಏಳಿಗೆಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎನ್. ಬೋಸ್ ರಾಜ್ ಅಭಿಪ್ರಾಯಪಟ್ಟರು.

ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ಮಂಗಳವಾರ ಬೆಳಗ್ಗೆ ನಗರದ ದಿ ಐಡಿಯಲ್ ಫೈನ್ ಆರ್ಟ್ ಕಾಲೇಜು ಸಭಾಂಗಣದಲ್ಲಿ ಜರುಗಿದ ಎನ್. ಧರ್ಮಸಿಂಗ್ ಅವರ 83ನೇ ಜನುಮ ದಿನದ ಅಂಗವಾಗಿ ಆಯೋಜಿಸಿದ್ದ ಧರ್ಮಪ್ರಜೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಸ್ಥಾಪಿಸಲಾಗಿರುವ ಹೈಕೋರ್ಟ್, ಸಂವಿಧಾನದ ಆರ್ಟಿಕಲ್ 371 ತಿದ್ದುಪಡಿ, ಹಲವು ನೀರಾವರಿ ಯೋಜನೆ, ರಾಷ್ಟ್ರೀಯ ಹೆದ್ದಾರಿ ಮುಂತಾದ ಕಾರ್ಯಗಳಲ್ಲದೆ ಹಲವು ಜನರಿಗೆ ಮಾಡಿದ ಉಪಕಾರ ಇಂದಿಗೂ ಸ್ಮರಣೀಯ ಎಂದು ಹೇಳಿದರು.

Contact Your\'s Advertisement; 9902492681

ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಕಾಂಗ್ರೆಸ್ ಮುಖಂಡ ಸಿ.ಬಿ. ಪಾಟೀಲ ಓಕಳಿ ಮಾತನಾಡಿ, ಖರ್ಗೆ ಮತ್ತು ಧರ್ಮಸಿಂಗ್ ಅವರು ಈ ಭಾಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಸವಿತಾ ಸಜ್ಜನ್, ಹಣಮಂತ ಭೂಸನೂರ, ಬಿ.ಎಂ. ಪಾಟೀಲ ಕಲ್ಲೂರ ಇತರರು ಇದ್ದರು. ಡಾ. ಕೆ. ಗಿರಿಮಲ್ಲ ವಂದಿಸಿದರು.
ಕಾಂಗ್ರೆಸ್ ಪಕ್ಷಕ್ಕಾಗಿ ಸಾಕಷ್ಟು ಜನ ತ್ಯಾಗ, ಬಲಿದಾನ ಮಾಡಿದ್ದಾರೆ.‌ ಆದರೆ ಇತ್ತೀಚಿಗೆ ಪಕ್ಷದಲ್ಲಿ ಸಂಘಟನೆಯ ಕೊರತೆ ಎದ್ದು ಕಾಣುತ್ತದೆ. ದೇಶದಲ್ಲಿ ಏಕತೆ, ರಾಷ್ಟ್ರೀಯತೆ ಹೆಸರಿನಲ್ಲಿ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸ ಆಡಳಿತ ಪಕ್ಷದಿಂದ ನಡಡಯುತ್ತಿದೆ. ಇದಕ್ಕೆ ಕಾಂಗ್ರೆಸ್ ಪಕ್ಷದಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿಲ್ಲ.                          -ಸಿ.ಬಿ. ಪಾಟೀಲ ಓಕಳಿ

ಪ್ರಶಸ್ತಿ ಪುರಸ್ಕೃತರು: ಧರ್ಮರಾಜ ಗುಜಗುಂಡ, ಶೈಲಜಾ ಪಾಟೀಲ, ಚಂದ್ರಶೇಖರ ಪುರಾಣಿಕ, ಖಾಸಿಂ ಪಟೇಲ್, ಶರಣಪ್ಪಗೌಡ ಪಾಟೀಲ ಇವರಿಗೆ ಧರ್ಮ ಪ್ರಜೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಿರಿಯ ಕಲಾವಿದ ವಿ.ಜಿ. ಅಂದಾನಿ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಪಕ್ಷದ ಮುಖಂಡರಾದ ಚಂದ್ರಿಕಾ ಪರಮೇಶ್ವರ ವೇದಿಕೆಯಲ್ಲಿದ್ದರು. ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಮೇಶ್ವರ ಶೆಟಕಾರ ಅವರು ಶಾಹಿರಿ ಹೇಳಿ ಧರ್ಮಸಿಂಗ್ ಅವರನ್ನು ನೆನಪಿಸಿಕೊಂಡರು. ಭುವನೇಶ್ವರಿ ಗಂಗಶೆಟ್ಟಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here