ಕವಿ ಮಧುರಚೆನ್ನ ರಾಜ್ಯಪ್ರಶಸ್ತಿಗೆ ಮಹಿಪಾಲರೆಡ್ಡಿ ಆಯ್ಕೆ

0
531

ಕಲಬುರಗಿ: ಪ್ರಸಕ್ತ ೨೦೧೯ ನೇ ಸಾಲಿನ ರಾಜ್ಯಮಟ್ಟದ ಅನುಭಾವ ಕವಿ ಮಧುರಚೆನ್ನರ ಪ್ರಶಸ್ತಿಗೆ ಲೇಖಕ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರು ಆಯ್ಕೆಯಾಗಿದ್ದಾರೆ.

ಇದೇ ತಿಂಗಳು ೨೯ ರಂದು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಜೀವನಾಡಿ ಕರ್ನಾಟಕ ಸಾಹಿತ್ಯ ವೇದಿಕೆ ಹಾಗೂ ಭಾರತ ಯುವ ವೇದಿಕೆ ವಿಜಯಪುರ ಸಂಯುಕ್ತಾಶ್ರಯದಲ್ಲಿ ಚಡಚಣ ಮೋಹನ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿರುವ ‘ರಾಜ್ಯಮಟ್ಟದ ಗಡಿನಾಡು ಕನ್ನಡ ಸಾಹಿತ್ಯೋತ್ಸವ -೨೦೧೯’ ಕಾರ್ಯಕ್ರಮದಲ್ಲಿ ಮಹಿಪಾಲರೆಡ್ಡಿ ಅವರ ಸಾಃಇತ್ಯ ಸೇವೆ ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ ಎಂದು ಕಾರ್ಯಕ್ರಮದ ಸಂಚಾಲಕ ಸಂತೋಷಕುಮಾರ ಎಸ.ಅಗಡಿ ತಿಳಿಸಿದ್ದಾರೆ.

Contact Your\'s Advertisement; 9902492681

ಕಾವ್ಯ, ಕಥೆ, ಅಂಕಣ ಸಾಹಿತ್ಯ, ನಾಟಕ, ಮಕ್ಕಳ ಸಾಹಿತ್ಯ, ಮಾಧ್ಯಮ, ಚರಿತ್ರೆ, ಸಂಕೀರ್ಣ ಸೇರಿದಂತೆ ವೈವಿಧ್ಯ ಕ್ಷೇತ್ರವನ್ನೊಳಗೊಂಡಂತೆ, ಇದೂವರೆಗೆ ೩೮ ಕೃತಿಗಳನ್ನು ಮಹಿಪಾಲರೆಡ್ಡಿ ಅವರು ಬರೆದಿದ್ದಾರೆ.

ಲೇಖಕ ಮಹಿಪಾಲರೆಡ್ಡಿ ಅವರ ಜೊತೆಗೆ ಇನ್ನೂ ನಾಲ್ವರನ್ನು ಅನುಭಾವ ಕವಿ ಮಧುರಚೆನ್ನರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಿರಿಯ ಲೇಖಕಿ ಶಶಿಕಲಾ ವೀರಯ್ಯ ಸ್ವಾಮಿ (ಹುಬ್ಬಳ್ಳಿ), ಡಾ.ಶಿವಾನಂದ ಕುಬಸದ (ಮುಧೋಳ), ಸಾಹಿತಿ ಸತ್ಯಾನಂದ ಪಾತ್ರೋಟ (ಬಾಗಲಕೋಟೆ), ಸೋಮನಾಥ ಗೀತಯೋಗಿ (ಸಾಲೋಟಗಿ) ಅವರನ್ನು ಸಹ ಅನುಭಾವ ಕವಿ ಮಧುರಚೆನ್ನ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂತೋಷಕುಮಾರ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here