ಸುರಪುರ: ಎಲ್ಲಾ ಧರ್ಮಗಳಲ್ಲೂ ಪವಿತ್ರ ಸ್ಥಳಗಳಿರುತ್ತವೆ,ಅದರಂತೆ ಮುಸ್ಲೀಂ ಬಂಧುಗಳಿಗೆ ಮೆಕ್ಕಾ ಮದಿನಾ ಎಂಬುವುದು ಪವಿತ್ರ ಸ್ಥಳವಾಗಿದೆ.ಇಂತಹ ಪವಿತ್ರ ಸ್ಥಳಕ್ಕೆ ಮಾದ್ಯಮ ಮಿತ್ರರೊಬ್ಬರು ತೆರಳುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಸುರಪುರ ತಾಲೂಕು ಅಧ್ಯಕ್ಷ ರಾಜು ಕುಂಬಾರ ಮಾತನಾಡಿದರು.
ಮೆಕ್ಕಾ ಯಾತ್ರೆ(ಉಮ್ರಾ)ಗೆ ಹೊರಟಿರುವ ಕೆಬಿಎನ್ ಟೈಮ್ಸ್ ಪತ್ರಿಕೆಯ ತಾಲೂಕು ವರದಿಗಾರ ಕಲೀಂ ಫರೀದಿಯವರಿಗೆ ನಗರದ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಕಚೇರಿಯಲ್ಲಿ ಸನ್ಮಾನಿಸಿ ಯಾತ್ರೆಗೆ ಶುಭ ಹಾರೈಸಿ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,ಉಮ್ರಾಗೆ ಹೋಗುವುದು ಪ್ರತಿ ಮುಸಲ್ಮಾನರ ಬದುಕಿನ ಬಹುದೊಡ್ಡ ಸಂಗತಿಯಾಗಿದ್ದು,ನಮ್ಮ ಮಾದ್ಯಮ ಮಿತ್ರರೊಬ್ಬರು ಯಾತ್ರೆಗೆ ದಂಪತಿಗಳು ಹೋಗುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಸನ್ಮಾನ ಸ್ವೀಕರಿಸಿದ ಕಲೀಂ ಫರೀದಿ ಮಾತನಾಡಿ,ಯಾತ್ರೆಗೆ ಹೊರಟ ನನ್ನನ್ನು ನಮ್ಮ ಎಲ್ಲಾ ಮಾದ್ಯಮ ಬಂಧುಗಳು ಸನ್ಮಾನಿಸಿ ಯಾತ್ರೆಗೆ ಹರಸಿದ್ದು ತುಂಬಾ ಸಂತೋಷ ತಂದಿದೆ ಅಲ್ಲಾ ಎಲ್ಲರಿಗು ಒಳ್ಳೆಯದನ್ನು ಮಾಡುವಂತೆ ಪ್ರಾರ್ಥಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವರದಿಗಾರರಾದ ಕೆಜೆಯು ಉಪಾಧ್ಯಕ್ಷ ಮಲ್ಲು ಗುಳಗಿ,ಕಾರ್ಯದರ್ಶಿ ಮಲ್ಲಿಕಾರ್ಜುನ ತಳ್ಳಳ್ಳಿ,ಸಂಘಟನಾ ಕಾರ್ಯದರ್ಶಿ ಸೋಮಶೇಖರ ನರಬೋಳಿ,ಖಜಾಂಚಿ ಮಹಾದೇವಪ್ಪ ಬೊಮ್ಮನಹಳ್ಳಿ,ಸಹ ಖಜಾಂಚಿ ಪುರುಷೋತ್ತಮ ದೇವತ್ಕಲ್,ಹೊನ್ನಪ್ಪ ತೇಲ್ಕರ್,ರಾಘವೇಂದ್ರ ಮಾಸ್ತರ್,ಮುರಳಿಧರ ಅಂಬುರೆ ಇದ್ದರು.ಪ್ರಧಾನ ಕಾರ್ಯದರ್ಶಿ ಪರಶುರಾಮ ಮಲ್ಲಿಬಾವಿ ನಿರೂಪಿಸಿ ಸ್ವಾಗತಿಸಿದರು,ಮಲ್ಲಿಕಾರ್ಜುನ ತಳ್ಳಳ್ಳಿ ವಂದಿಸಿದರು.