ಜನೆವರಿ 8ರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಬೆಂಬಲ

0
38

ಸುರಪುರ: ೨೦೨೦ರ ಜನೆವರಿ ೮ ರಂದು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ತಾಲೂಕಿನ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಬೆಂಬಲ ನೀಡಲಿದೆ ಹಾಗು ಅಂದಿನ ಹೋರಾಟದ ಮುಖಾಂತರ ಜಿಎಸ್ಟಿ,ನೋಟಬ್ಯಾನ್,ಪೌರತ್ವ ಕಾಯಿದೆ ವಿರೋಧಿಸಿ ಕೇಂದ್ರ ಸರಕಾರಕ್ಕೆ ಪ್ರತ್ಯೇಕವಾಗಿ ಮನವಿಯನ್ನೂ ಸಲ್ಲಿಸಲಿವೆ ಎಂದು ಅಹ್ಮದ ಪಠಾಣ ತಿಳಿಸಿದರು.

ನಗರದ ಡಾ. ಬಾಬಾ ಸಾಹೇಬ ಅಂಬೇಡ್ಕರ ವೃತ್ತದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಈಗಾಗಲೆ ಕಾರ್ಮಿಕ ಸಂಘಟನೆಗಳು ೧೪ ಪ್ರಮುಖ ಬೇಡಿಕೆಗಳನ್ನಿಟ್ಟುಕೊಂಡು ರಾಷ್ಟ್ರದ ಎರಡು ನೂರಕ್ಕು ಹೆಚ್ಚಿನ ಸಂಖ್ಯೆಯ ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಭಾಗವಹಿಸುತ್ತಿದ್ದು,ಸುರಪುರದಲ್ಲಿಯೂ ಜನೆವರಿ ೮ ರಂದು ನಡೆಯುವ ಮುಷ್ಕರಕ್ಕೆ ಒಕ್ಕೂಟ ಬೆಂಬಲಿಸಲಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಕಾರ್ಮಿಕ ಸಂಘಟನೆಗಳ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಸುರೇಖಾ ಕುಲಕರ್ಣಿ ಮಾತನಾಡಿ,ಜನೆವರಿ ೮ ರಂದು ರಾಷ್ಟ್ರಾದ್ಯಂತ ಎಲ್ಲಾ ಕಾರ್ಮಿಕ ಸಂಘಟನೆಗಳು ಇಡೀ ದಿನ ಮುಷ್ಕರ ನಡೆಸಲಿವೆ.ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಲಿವೆ ಎಂದು ತಿಳಿಸಿದರು.

ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕಾರ ಮಾತನಾಡಿ,ಇಂದು ರೈತ ಕಾರ್ಮಿಕರು ದೀನ ದಲಿತರು ಅಲ್ಪಸಂಖ್ಯಾತರು ನಿತ್ಯವು ಸರಕಾರದ ಹಲವಾರು ನಿಯಮಗಳಿಂದ ಸಂಕಷ್ಟ ಹೆದರಿಸುವಂತಾಗಿದೆ.ಇದನ್ನು ಖಂಡಿಸದಿದ್ದರೆ ಮುಂದೆ ದೇಶಕ್ಕೆ ಗಂಡಾಂತರ ಎದುರಾಗಲಿದೆ.ಆದ್ದರಿಂದ ಎಲ್ಲರೂ ಸೇರಿ ಮುಷ್ಕರದ ಮೂಲಕ ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರ ಅನೇಕ ಬೇಡಿಕೆಗಳು ಒಳಗೊಂಡಂತೆ ನಡೆಯುವ ಮುಷ್ಕರಕ್ಕೆ ಬೆಂಬಲಿಸಿ ನಗರದಲ್ಲಿ ವ್ಯಾಪರ ವಹಿವಾಟು ಬಂದ್‌ಗೊಳಿಸಿ ಮುಷ್ಕರಕ್ಕೆ ಬೆಂಬಲಿಸಲು ತಿಳಿಸೋಣ ಎಂದರು.

ಸಭೆಯಲ್ಲಿ ಸಭೆಯಲ್ಲಿ ಅಂಬೇಡ್ಕರ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ ಹೊಸ್ಮನಿ, ವೆಂಕಟೇಶ ಬೇಟೆಗಾರ,ಭೀಮರಾಯ ಸಿಂಧಗೇರಿ,ಮಾಳಪ್ಪ ಕಿರದಳ್ಳಿ,ರಾಹುಲ ಹುಲಿಮನಿ, ಸಿದ್ದಯ್ಯ ಸ್ಥಾವರಮಠ,ರಾಮಚಂದ್ರ ವಾಗಣಗೇರಾ,ಮೂರ್ತಿ ಬೊಮ್ಮನಹಳ್ಳಿ,ಖಾಜಾ ಖಲೀಲಹ್ಮದ ಅರಕೇರಿ,ನಸೀಮಾ ಮುದ್ನೂರ,ರಾಧಾ ಲಕ್ಷ್ಮೀಪುರ,ಬಸಮ್ಮ ಆಲ್ಹಾಳ,ಪ್ರಕಾಶ ಆಲ್ಹಾಳ,ಚಂದಪ್ಪ ಪಂಚಮ್,ಹುಸೇನಿ ಜೀವಣಗಿ,ರಾಜು ಬೋನಾಳ,ದುರ್ಗಪ್ಪ ಬೋನಾಳ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here