ಕಲಬುರಗಿ: ಆಟೋಚಾಲಕನ ಹತ್ಯೆ

0
91

ಕಲಬುರಗಿ: ನಗರದ ಪೀರ್ ಬಂಗಾಲಿ ಮೈದಾನದಲ್ಲಿ ನಿನ್ನೆ ರಾತ್ರಿ ಆಟೋಚಾಲಕ ಓರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಖಾಜಾ ಕಾಲೋನಿ ಬಡವಾಣೆಯ ನಿವಾಸಿಯಾಗಿದ ಹನೀಫ್ ಖೂರೈಶಿ (26) ಕೊಲೆಯಾದ ದುರ್ದೈವಿ, ನಿನ್ನೆ ರಾತ್ರಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದ್ದು, ಕೊಲೆಯ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ.

Contact Your\'s Advertisement; 9902492681

ಪ್ರತಿ ದಿನದಂತೆ ನಿನ್ನೆಯೂ ಆಟೋ ಓಡಿಸಲು ತೆರಳಿದ ಹನೀಫ್ ಇಂದು ಬೆಳಿಗ್ಗೆ ರಿಂಗ್ ರೋಡ್ ರಸ್ತೆಯಲ್ಲಿರುವ ಪೀರ್ ಬಂಗಾಲಿ ಗ್ರೌಂಡ್ ಹತ್ತಿರ ಮೃತ ದೇಹ ಪತ್ತೆಯಾಗಿದೆ ಎನ್ನಲಾಗಿದೆ.

ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here