ವೈಚಾರಿಕ ಸಾಹಿತ್ಯ ಕುವೆಂಪು ಕೊಡುಗೆ: ಹಿಪ್ಪರಗಾ ಶ್ರೀ ಅಭಿಮತ

0
57

ಆಳಂದ: ಕನ್ನಡ ನಾಡು, ನುಡಿ ಹಾಗೂ ನಿಸರ್ಗ ಸೌಂದರ್ಯದ ಜೊತೆಗೆ ಹೊಸಗನ್ನಡಕ್ಕೆ ವೈಚಾರಿಕ ಸಾಹಿತ್ಯವನ್ನು ನೀಡುವಲ್ಲಿ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅಪಾರವಾದದು ಎಂದು ಮಾದನ ಹಿಪ್ಪರಗಾದ ಅಭಿನವ ಶಿವಲಿಂಗ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಸರ್ಕಾರಿ ಕನ್ಯಾ ಪಿಯು ಕಾಲೇಜಿನಲ್ಲಿ ಶನಿವಾರ ಕಲಬುರ್ಗಿಯ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿವತಿಯಿಂದ ವಿಶ್ವಮಾನವ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ‘ಕಳಶಪ್ರಾಯದ ಕುವೆಂಪು’ಸರಣಿ ಸಾಹಿತ್ಯ ಪರಿಚಯ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

Contact Your\'s Advertisement; 9902492681

ಯುವಕರಲ್ಲಿ ಉತ್ತಮ ಮೌಲ್ಯ ಮತ್ತು ಸಂಸ್ಕಾರಗಳು ಬೆಳೆಸಲು ಇಂತಹ ಸಾಹಿತ್ಯದ ಚಟುವಟಿಕೆಗಳು ಶಾಲಾ ಕಾಲೇಜುಗಳಲ್ಲಿ ನಡೆಯಬೇಕು.                    – ದಯಾನಂದ ಪಾಟೀಲ, ತಹಶೀಲ್ದಾರ್‌

ಕುವೆಂಪು ಅವರ ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ತತ್ವಗಳು ಆಚರಣೆಗೆ ಬರಬೇಕು. ಮನುಷ್ಯ ಸಂಬಂಧಗಳು ಉತ್ತಮಗೊಂಡಾಗ ಮಾತ್ರ ವಿಶ್ವಪಥ ನಿರ್ಮಿಸಲು ಸಾಧ್ಯವಿದೆ ಎಂದರು. ತಹಶೀಲ್ದಾರ್ ದಯಾನಂದ ಪಾಟೀಲ ಮಾತನಾಡಿ‘ಸಮಾಜದಲ್ಲಿ ಪ್ರಗತಿದಾಯಕ ಬದಲಾವಣೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು.  ಸಾಧನೆ ಮೂಲಕ ಸಮಾಜಮುಖಿ ಗುಣ ಅಳವಡಿಸಿಕೊಳ್ಳಲು ತಿಳಿಸಿದರು.

ಉಪನ್ಯಾಸಕ ಸಂಜಯ ಪಾಟೀಲ ಮಾತನಾಡಿ‘ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕುವೆಂಪು ಅವರು ಅಖಂಡ ಕರ್ನಾಟಕ ನಿರ್ಮಾಣ, ಸಮ ಸಮಾಜ ರೂಪಿಸಲು ಶ್ರಮಿಸಿದ ಚಿಂತಕರು ಎಂದು ಬಣ್ಣಿಸಿದರು.

ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ‘ಮೊಬೈಲ್‌, ಟಿವಿ ಧಾರವಾಹಿಗಳ ಮಧ್ಯದಲ್ಲಿ ಮಾನವ ಸಂಬಂಧ ಮರೆಯುತ್ತಿರುವ ಯುವ ಸಮುದಾಯಕ್ಕೆ ಸಾಹಿತ್ಯಾಭಿರುಚಿ ಅಗತ್ಯವಿದೆ ಎಂದರು.

ಪ್ರಾಚಾರ್ಯ ಅಮೃತರಾವ ಬೆಳಮಗಿ ಅಧ್ಯಕ್ಷತೆವಹಿಸಿದರು. ಬಿಜೆಪಿ ಮುಖಂಡ ಅಶೋಕ ಗುತ್ತೇದಾರ, ಪದವಿ ಕಾಲೇಜು ಪ್ರಾಚಾರ್ಯ ಡಾ.ಕಾಶಿನಾಥ ಬಿರಾದಾರ, ಸಂಗಮೇಶ ಶಾಸ್ತ್ರಿ, ಎಸ್.ವಿ.ಪೋದ್ದಾರ, ಶರಣರಾಜ ಛಪ್ಪರಬಂದಿ, ಶಿವಾನಂದ ಸಾಲಿಮಠ, ಕವಿತಾ ಪಾಟೀಲ, ಶ್ರೀಶೈಲ ಮಾಡ್ಯಾಳೆ, ಅಂಬಾದಾಸ ಜಮದಾರ ಇದ್ದರು.

ಉಪನ್ಯಾಸಕಿ ಸುಮಂಗಲಾ ನಿರೂಪಿಸಿದರೆ, ಹಣಮಂತ ಅಟ್ಟೂರು ಸ್ವಾಗತಿಸಿದರು. ಶ್ರೀಶೈಲ ಮಾಡ್ಯಾಳೆ ವಂದಿಸಿದರು. ಗಾಯಕ ಸಂಗಮೇಶ ಶಾಸ್ತ್ರಿ, ಹಣಮಂತ ಅಟ್ಟೂರು ಹಾಗೂ ವಿದ್ಯಾರ್ಥಿನಿಯರು ಕುವೆಂಪು ವಿರಚಿತ ಗೀತೆಗಳನ್ನು ಹಾಡಿ ಗಮನ ಸೆಳೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here