ಸುರಪುರ: ಬಸವಸೇವಾ ಪ್ರತಿಷ್ಠಾನವು ಪ್ರತಿ ವರ್ಷದಂತೆ ಈ ವರ್ಷವು ಬೀದರಿನ ಬಸವಗಿರಿಯಲ್ಲಿ ೧೨ನೇ ವಚನ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ತಾಲೂಕಿನ ಎಲ್ಲಾ ಬಸವಾಭಿಮಾನಿಗಳು ಆಗಮಿಸುವಂತೆ ತಿಳಿಸಿದರು.
ನಗರದ ನರಸಿಂಗಪೇಟೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಕಲ್ಯಾಣ ನಾಡಿನ ಬಸವಾದಿ ಶರಣರು ಮಾಡಿದ ಸಮಾನತೆಯ ಕ್ರಾಂತಿಯ ಹಿನ್ನೆಲೆಯಲ್ಲಿ ಪ್ರತಿವರ್ಷ ವಚನ ವಿಜಯೋತ್ಸವ ಆಚರಿಸಲಾಗುತ್ತಿದ್ದು,ಅದರಂತೆ ಈ ವರ್ಷ ಫೆಬ್ರವರಿ ೭,೮ ಮತ್ತು ೯ನೇ ತಾರೀಖು ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ ಅನುಭಾವಿಗಳು,ಸಾಹಿತಿ ಚಿಂತಕರು ಭಾಗವಹಿಸಲಿದ್ದಾರೆ.ಆದ್ದರಿಂದ ತಾಲೂಕಿನ ಎಲ್ಲಾ ಬಸವಾಭಿಮಾನಿಗಳು ಬರುವಂತೆ ಆಹ್ವಾನಿಸಿ ವಚನ ಗ್ರಂಥವನ್ನು ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಎಪಿಎಂಸಿ ಸದಸ್ಯ ಮಲ್ಲಣ್ಣ ಸಾಹು ಮುಧೋಳ ಮಾತನಾಡಿ,ಪ್ರತಿ ವರ್ಷವೂ ವಚನ ವಿಜಯೋತ್ಸವಕ್ಕೆ ತಾಲೂಕಿನ ಅನೇಕರು ಆಗಮಿಸುತ್ತಿದ್ದು ಅದರಂತೆ ಈ ವರ್ಷವು ನೂರಾರು ಸಂಖ್ಯೆಯಲ್ಲಿ ಜನರು ಬರುವುದಾಗಿ ತಿಳಿಸಿದರು.ಅಲ್ಲದೆ ಕಲ್ಯಾಣ ಕ್ರಾಂತಿ ಎಂಬುದು ಸಮಾನತೆಗಾಗಿ ನಡೆದ ಕ್ರಾಂತಿಯಾಗಿದ್ದು ಅಂತಹ ಹನ್ನೆರಡನೆ ಶತಮಾನದ ಆ ನೆನಪನ್ನು ಮರುಕಳಿಸಲು ಬಸವಸೇವಾ ಪ್ರತಿಷ್ಠಾನ ಪ್ರತಿ ವರ್ಷ ನಡೆಸುವ ಕಾರ್ಯಕ್ರಮ ನಾಡಿನ ಹೆಮ್ಮೆಯ ಕಾರ್ಯಕ್ರಮವಾಗಿದೆ.ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನಾವೆಲ್ಲರು ಭಾಗವಹಿಸುವುದಾಗಿ ತಿಳಿಸಿ ವಚನದ ಕಟ್ಟನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಅಂಬ್ರೇಶ ದೇಸಾಯಿ ದೇವಾಪುರ,ಚೆನ್ನಬಸವ ವಾಲಿ,ನಾಗಭೂಷಣ ಯಾಳಗಿ,ಸಿದ್ದಣ್ಣ ಸಾಹುಕಾರ,ಬಸವರಾಜ ಅಮ್ಮಾಪುರ,ಮಲ್ಲು ಬಾದ್ಯಾಪುರ ಸೇರಿದಂತೆ ಅನೇಕರಿದ್ದರು.