ಕಲಬುರಗಿ: ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕೃತಿ, ಸಂಸ್ಕಾರ ಮತ್ತು ಮಾನವಿಯ ಮೌಲ್ಯಗಳನ್ನು ಬೆಳೆಸಬೇಕೆಂದು ಗದಗಿನ ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಗಾನಯೋಗಿ ಶ್ರೀ ಕಲ್ಲಯ್ಯಜ್ಜ ಹೇಳಿದರು.
ಕಲಬುರಗಿ ನಗರದ ಶ್ರೀ ಅಂಬಾರಾಯ ಅ?ಗಿ ಅವರ ಮನೆಯಲ್ಲಿ ಆಯೋಜಿಸಿದ್ದ ಶ್ರೀಗಳ ಸತ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ನಾಡಿನ ಅಂಧ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತಂದಿರುವ ಪಂಡಿತ್ ಪುಟ್ಟರಾಜ ಗವಾಯಿಗಳು ಲಕ್ಷಾಂತರ ಮಕ್ಕಳಿಗೆ ಬದುಕು ಹಾಗೂ ಬೆಳಕು ನೀಡಿದ್ದಾರೆ. ಇವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕಿದೆ. ಮಕ್ಕಳಿಗೆ ಕೇವಲ ಪಠ್ಯದ ಶಿಕ್ಷಣ ಕೊಡಿಸಿದರೆ ಸಾಲದು ಗುರು-ಹಿರಿಯರ ಜತೆ ನಡೆದುಕೊಳ್ಳುವ ರೀತಿ, ಮನೆಗೆ ಬಂದವರನ್ನು ಸತ್ಕರಿಸುವ ಪದ್ದತಿಗಳನ್ನು ತಿಳಿಹೇಳುವುದರ ಜೊತೆಗೆ ಮಾನವಿಯ ಮೌಲ್ಯಗಳನ್ನು ಬೆಳೆಸಬೇಕೆಂದು ಹೇಳಿದರು.
ಗದಗಿನ ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜನವರಿಂದ ಸುಶ್ರಾವ್ಯವಾಗಿ ವಚನ ಗಾಯನ ಮೂಡಿಬಂತು. ನಂತರ ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಂಬಾರಾಯ ಅ?ಗಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳು ಹಾಗೂ ಪಂಚಾಕ್ಷರಿ ಗವಾಯಿಗಳಿಗೆ ಕಣ್ಣಿರದಿದ್ದರೂ ಸಂಗೀತನಾದದಿಂದ ಎಲ್ಲರ ಮನಸನ್ನು ತೃಪ್ತಿಪಡಿಸಿದರು.
ತಮ್ಮ ಸಂಗೀತದಿಂದ ಜ್ಞಾನಸುಧೆ ಹರಡಿಸಿದ್ದುಈಗ ಇತಿಹಾಸ,ಅದರಂತೆಯೆ ಹಿರಿಯ ಶ್ರೀ ಗಳ ಪರಂಪರೆಯನ್ನು ಗಾನಯೋಗಿ ಶ್ರೀ ಕಲ್ಲಯ್ಯಜ್ಜ ನವರು ನಾಡಿನ ಅಂಧ ಹಾಗೂ ಬಡ ಮಕ್ಕಳ ಬದುಕಿಗೆ ದಾರಿದೀಪವಾಗುತ್ತಿರುವುದು ನಾಡಿನ ಜನತೆಯ ಸೌಭಾಗ್ಯ ಎಂದು ಬಣ್ಣಿಸಿದರು. ನಂತರ ಅಂಬಾರಾಯ ಅ?ಗಿ ಕುಟುಂಬದ ವತಿಯಿಂದ ಹಾಗೂ ಸ್ನೇಹಿತರ ಬಳಗದಿಂದ ಶ್ರೀ ಗಳಿಗೆ ಸತ್ಕರಿಸಲಾಯಿತು.
ಅಂಬಾರಾಯ ಅ?ಗಿ ಅವರ ಮನೆಯಲ್ಲಿ ಆಯೋಜಿಸಿದ್ದ ಗದುಗಿನ ವೀರೇಶ್ವರ್ ಪುಣ್ಯಾಶ್ರಮ ದ ಪೀಠಾಧ್ಯಕ್ಷರಾದ ಶ್ರೀ ಗಾನಯೋಗಿ ಕಲ್ಲಯ್ಯಜ್ಜ ನವರಿಗೆ ಪಾದ ಪೂಜೆ ಮಾಡಿ ಶ್ರೀ ಅಂಬಾರಾಯ ಅ?ಗಿ ಯವರ ಕುಟುಂಬದ ವತಿಯಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರು ಹಾಗೂ ಬಿಜೆಪಿ ಜಿಲ್ಲಾ ಅಧ್ಯಕ್ಷ ದೊಡ್ಡಫ್ಫ ಗೌಡ ಪಾಟೀಲ್ ನರಿಬೋಳ, ಮಾಜಿ ಶಾಸಕ ಅಮರನಾಥ ಪಾಟೀಲ್ ಮಹಾಗಾಂವ, ಬಿಜೆಪಿ ನಾಯಕಿ ಜಯಶ್ರೀ ಬಸವರಾಜ ಮತ್ತಿಮೂಡ, ರವಿ ಬಿರಾದಾರ್, ಸಂಗಮೇಶ ನಾಗನಳ್ಳಿ, ಶರಣಬಸಪ್ಪಾ ಪಾಟೀಲ್ ಅ?ಗಿ, ರಾಜಕುಮಾರ್ ಕೋಟೆ, ಶಿವಕುಮಾರ್ ಪಸಾರ,ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ,ಡಾ ಕೆ. ಗಿರಿಮಲ್ಲ, ಮಂಜುರೆಡ್ಡಿ ಪಾಟೀಲ್,ಸಂಗಮೇಶ ವಾಲಿ, ವಾಸ್ತು ಹಾಗೂ ಭೂಜಲ ತಜ್ಞ ಎ ಬಿ ಪಾಟೀಲ್,ಬಸವರಾಜ ವಾಲಿ ಶಿವರಾಜ ಅಂಡಗಿ, ಸತೀಶ್ ಸೋರಡೆ, ಕೆ ಸಿ ಪಾಟೀಲ್, ,ಶಾಂತಕುಮಾರ ಪಾಟೀಲ್, ತಾಲೂಕು ಪಂಚಾಯತ್ಸು ಮಾಜಿ ಅಧ್ಯಕ್ಷೆ ಸುಜಾತಾ ಅ?ಗಿ, ವನೀತಾ ಅ?ಗಿ ಯಶವಂತರಾಯ ಅ?ಗಿ, ಜಗದೀಶ್ ಪಾಟೀಲ್ ರವಿ ಮದನಕರ್, ಸುನಿಲ್ ಕೋಟ್ರೆ, ಜಗದೀಶ್ ಪಾಟೀಲ್ ಸಣ್ಣುರ್,ವಿನೋದ ಪಾಟೀಲ್ ಸರಡಗಿ,ವಿಶ್ವನಾಥ ಪಾಟೀಲ್ ಶಿವಾ ಅ?ಗಿ, ಗುರು ಚಳಕೆ ವಿನೋದ ಬೋಮ್ಮಾ ಸೇರಿದಂತೆ ಶ್ರೀ ಗಳ ಭಕ್ತರು ಪಾಲ್ಗೊಂಡಿದ್ದರು