ಐ.ಟಿ.ಐ ಆನ್ಲೈನ್ ಪರೀಕ್ಷಾ ಪದ್ದತಿ ಹಾಗೂ ಪರೀಕ್ಷಾ ಶುಲ್ಕ ಹೆಚ್ಚಳ ಹಿಂಪಡೆಯಲು ಆಗ್ರಹಿಸಿ ಎಐಡಿವೈಓ ವತಿಯಿಂದ ಪ್ರತಿಭಟನೆ

0
56

ಕಲಬುರಗಿ: ಡಿಜಿಇಟಿ ಜಾರಿಗೆ ತರಲು ಉದ್ದೇಶಿಸಿರುವ ಆನ್‌ಲೈನ್ ಪರೀಕ್ಷಾ ಪದ್ದತಿ ಕೈ ಬಿಡಬೇಕು ಮತ್ತು ಪರೀಕ್ಷೆಯ ಶುಲ್ಕ ಏರಿಕೆ ಹಾಗೂ ಪರೀಕ್ಷಾ ಶುಲ್ಕಕ್ಕೆ ಜಿ.ಎಸ್.ಟಿ ಹಾಕಿರುವುದನ್ನು ರದ್ದುಪಡೆಸಬೇಕೆಂದು ಆಗ್ರಹಿಸಿ ಇಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಜಿಲ್ಲಾಧ್ಯಕ್ಷ ನಿಂಗಣ್ಣ ಜಂಬಗಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಆಗ್ರಹಿಸಿದರು.

ನಗರದ ಸರಕಾರಿ ಐ.ಟಿ.ಐ ಕಾಲೇಜಿನ ಆವರಣದಿಂದ ವಿವಿದ ಕಾಲೇಜಿನ ವಿದ್ಯಾರ್ಥಿಗಳು ಸೇರಿಕೊಂಡು ಬೃಹತ್ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಛೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಮೂಖಾಂತರ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಪ್ರತಿಭಟನೆಯಲ್ಲಿ ಜಂಬಗಿ ಮಾತನಾಡಿ, ಲಕ್ಷಾಂತರ ಐಟಿಐ ತರಬೇತಿ ಪಡೆಯುತ್ತಿರುವವರು ಮತ್ತು ತರಬೇತಿದಾರರನ್ನು ಗೊಂದಲಕ್ಕೆ ತಳ್ಳಿದ್ದು, 2019ರ ವರ್ಷದ ಪರೀಕ್ಷಾ ಫಲಿತಾಂಶವು ಇನ್ನೂ ಹೊರಬಿದ್ದಿಲ್ಲ, ಸಪ್ಲಿಮೆಂಟರಿ ಪರೀಕ್ಷೆಗೆ ಕೊನೆಯ ದಿನಾಂಕವೂ ಮುಗಿದುಹೋಗಿದೆ, ಆದರೆ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.  ಮೊದಲ ಬಾರಿಗೆ ಐಟಿಐ ಪರೀಕ್ಷಾ ಶುಲ್ಕಕ್ಕೆ ಜಿಎಸ್‌ಟಿ ಹಾಕುವ ಪದ್ಧತಿ ಜಾರಿಗೆ ಬಂದಿದೆ ಅತ್ಯಂತ ಖಂಡನೀಯ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಸಂಘಟನೆಯ ಎಐಡಿವೈಓ ಜಿಲ್ಲಾ ಕಾರ್ಯದರ್ಶಿ  ಜಗನ್ನಾಥ ಎಸ್. ಎಚ್,  ಜಿಲ್ಲಾ ಉಪಾಧ್ಯಕ್ಷರಾಗಿ ಭೀಮಾಶಂಕರ ಪಾಣೆಗಾಂವ, ಈಶ್ವರ ಇ ಕೆ, ಶರಣು ವಚ್ಚಾ, ರಾಜಶೇಖರ ಮಾತೋಳಿ, ಅವಿನಾಶ, ಫಿರೋಜ್, ಸಮೀರ, ಪ್ರೇಮಕುಮಾರ, ಸಾಗರ, ಸುನಿಲಕುಮಾರ, ಸಚಿನ, ಶ್ರೀನಿವಾಸ, ವಿಶಾಲ ಪೇಠಶಿರೂರ ಸೇರಿದಂತೆ ವಿವಿದ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here