ಪಿಕ್ ನಿಕ್ ಗೆ ಬಂದ ಮೂವರು ಮಕ್ಕಳು ಕರೆಯಲ್ಲಿ ಮುಳುಗಿ ಸಾವು

0
36

ಕಲಬುರಗಿ: ಕಮಲಾಪುರ ಸಮೀಪದ ಬೆಳಕೋಟಾ ಕೆರೆಯಲ್ಲಿ ಮೂವರು ವಿದ್ಯಾರ್ಥಿಗಳು ಈಜಾಡಲು ಹೋಗಿ ಕರೆಯಲ್ಲಿ ಮುಳುಗಿ ಮೃತಪಟ್ಟಿರುವ ಧಾರುಣ ಘಟನೆ ಮಹಾಗಾಂವ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಲಕ್ಮಣ ಭೀಮರಾಯ್ಯ ದೊಣ್ಣೂರ್ (14), ಮಂಜುನಾಥ್ ಚನ್ನೂಯಾದವಾಡ್ (15) ಹಾಗೂ ಶೂಭಂ ಶಶೂರ್ ಹುಸುರ್ (15) ಮೃತಪಟ್ಟ ದುರ್ದೈವಿಗಳು, ಮೂವರು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ನಿವಾಸಿಗಳು ಎಂದು ತಿಳಿದುಬಂದಿದ್ದು, ಸಮೀಪದ  ಪ್ರತಿಷ್ಠಿತ  ಸತ್ಯಸಾಯಿ ಪ್ರೌಢ ಶಾಲೆಯ ಶಾಲೆಯ ಮಕ್ಕಳು ಎನ್ನಲಾಗುತ್ತಿದೆ.

Contact Your\'s Advertisement; 9902492681

ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಪ್ರೌಢ ಶಾಲೆಯಿಂದ ಪಿಕ್ ನಿಕ್ ಎಂದು ಕಲಬುರಗಿಗೆ ಬಂದಿದ್ದು,  ಒಟ್ಟು 96 ಮಕ್ಕಳು ಪ್ರವಾಸದ ಮೇಲೆ ಬಂದಿದ್ದಾರೆ ಎನ್ನಾಲಾಗಿದೆ.

ಇಂದು ಮಧ್ಯಾಹ್ನ ಗಂಡೋರಿ ನಾಲಾ ಸಮೀಪದ ಬೆಳಕೋಟಾ ಕೆರೆ ವೀಕ್ಷಣೆಗೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಘಟನೆ ಕುರಿತು ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here