ಜಾತಿ ದೇಶದ ಕ್ರೂರವಾದ ವ್ಯವಸ್ಥೆ: ಪ್ರೊ.ಎಚ್.ಟಿ.ಪೋತೆ

0
57

ಕಲಬುರಗಿ: ಜಾತಿ ಪದ್ಧತಿಯನ್ನು ದೇಶದ ಮಹಾನ್ ವ್ಯಕ್ತಿಗಳು ತೆಗೆದು ಹಾಕಬೇಕೆಂದು ಹೋರಾಟ ಮಾಡಿದರು. ಆದರೆ ಅವರಿಂದ ಕೇವಲ ಕೆಲವು ಬದಲಾವಣೆಯಾಯಿತೇ ಹೊರತು ಕಿತ್ತೊಗೆಯಲು ಸಾಧ್ಯವಾಗಲಿಲ್ಲ. ಜಾತಿ ದೇಶದ ಬಲವಾದ, ಕ್ರೂರವಾದ ವ್ಯವಸ್ಥೆಯಾಗಿದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಅವರು ಕಳವಳ ವ್ಯಕ್ತಪಡಿಸಿದರು.

ಗುಲ್ಬರ್ಗಾ ವಿಶ್ವ ವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ್ದ ಭೀಮಾ ಕೋರೆಗಾವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

ಸಾವಿನ ದವಡೆಯಲ್ಲಿರುವ ವ್ಯಕ್ತಿಯು ಸಹ ಜಾತಿ ವ್ಯವಸ್ಥೆಯನ್ನು ಎತ್ತಿ ಹಿಡಿಯುತ್ತಾನೆ. ಒಬ್ಬ HIV ಪೀಡಿತ ವ್ಯಕ್ತಿ ತನಗೆ ಮದುವೆಯಾಗಬೇಕು. ಒಬ್ಬ HIV ಪೀಡಿತ ಹುಡುಗಿಬೇಕು ಆದರೆ ಎಸ್.ಸಿ/ ಎಸ್.ಟಿಯಾಗಿರಬಾರದು ಎಂಬ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋವನ್ನು ನೋಡಿ ನನಗೆ ಆಶ್ಚರ್ಯವಾಯಿತು. ಆತನಿಗೆ ಸಾವು ಮುಂದಿದೆ ಎಂದು ಗೊತ್ತಿದ್ದರೂ ಅಸ್ಪೃಶ್ಯತೆ, ಮೌಢ್ಯವನ್ನು ಆಚರಿಸುವನು ಎಂದು ಹೇಳಿದರು.

ದೇಶದ ಕಾನೂನು ರಚಿಸುವ ಲೋಕಸಭೆ ಸದಸ್ಯರಿಗೆ ಗೊಲ್ಲರಹಟ್ಟಿ ಎಂಬ ಗ್ರಾಮದಲ್ಲಿ ನಿರ್ಬಂಧಿಸಲಾಗಿದೆ. ಪ್ರಸ್ತುತ ಸ್ಥಿತಿಯಲ್ಲಿಯೇ ಇಂತಹ ಘಟನೆಗಳು ನಡೆಯುತ್ತಿರುವಾಗ , 19ನೆಯ ಶತಮಾನದಲ್ಲಿ ನಡೆದ ಭೀಮಾ ಕೋರೆಗಾಂವ್ ಯುದ್ಧವು ಸಹ ಸ್ವಾಭಿಮಾನದ ಪ್ರತಿಕವೇ ಆಗಿದೆ. ಪೇಶ್ವೆಯವರು ಮಹಾರ್ ಸೈನಿಕರಿಗೆ ಮಾಡಿದ ಅವಮಾನದ ಪರಿಣಾಮವೇ ಈ ಯುದ್ಧ ನಡೆದಿದೆ ಎಂದು ಜಾತಿಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನೆ ಸಂಸ್ಥೆಯ ನಿರ್ದೇಶಕ ಎಸ್.ಪಿ.ಮೇಲಕೇರಿ, ಭೀಮಾ ಕೊರೆಗಾಂವ್ ವಿಜಯೋತ್ಸವ ಆಚರಣೆ ಮಾಡುವುದು ಪ್ರತಿಯೊಬ್ಬ ದಲಿತನ ಸ್ವಾಭಿಮಾನದ ಸಂಕೇತವಾಗಿ ಆಚರಣೆ ಮಾಡಬೇಕಾಗಿದೆ. ಈ ವಿಜಯೋತ್ಸವ ನಮಗೆ ಆಗಿರುವ ಅವಮಾನ, ಅಪಮಾನದ ಕಿಚ್ಚನ ಹಿನ್ನಲೆಯನ್ನು ಪ್ರತಿರೋಧ ಪಡಿಸುವ ಮುಖಾಂತರ ನಾವು ಎಷ್ಟು ಶಕ್ತಿಶಾಲಿ ಎಂದು ಈ ಯುದ್ಧ ಯೋಧರನ್ನು ಸ್ಮರಿಸಿದರು.

ಗುಲ್ಬರ್ಗಾ ವಿ.ವಿ.ಯ ಪ್ರಬಾರಿ ಕುಲಪತಿ ಡಾ.ದೇವಿದಾಸ ಮಾಲೆ ಅಧ್ಯಕ್ಷತೆ ವಹಿಸಿದ್ದರು. ಗು.ವಿ ವಿಯ ಕುಲಸಚಿವ ಪ್ರೊ.ಕೆ.ವಿಜಯಕುಮಾರ್, ವಿತ್ತಧಿಕಾರಿ ಪ್ರೊ.ಬಿ.ವಿಜಯ, ಪ್ರೊ.ಕೆ ಸಿದ್ದಪ್ಪ, ಪ್ರೊ.ವಿ.ಟಿ.ಕಾಂಬಳೆ, ಹಂಪಿ ವಿ.ವಿಯ ಸಿಂಡಿಕೇಟ್ ಸದಸ್ಯ ಜೈ ಭೀಮ್ ಆರ್.ಕಟ್ಟಿ, ಬಾಬುರಾವ್ ಬೀಳಗಿ ಉಪಸ್ಥಿತರಿದ್ದರು.

ತಮ್ಮಣ್ಣ ಸಂವಿಧಾನದ ಪ್ರಸ್ತಾವನೆ ಯನ್ನು ಬೋಧಿಸಿದರು. ಬಾಬು ಬೀಳಗಿ ಸ್ವಾಗತಿಸಿದರು. ನಾಗೇಶ್ ನಿರೂಪಿಸಿದರು. ಲೋಕೇಶ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here