ದೇವೇಂದ್ರ ಹನುಮಂತ ರಾಷ್ಟ್ರೀಯ ಸಮಾಜ ಪಕ್ಷದ ಜಿಲ್ಲಾಧ್ಯಕ್ಷರಾಗಿ ನೇಮಕ

0
53

ಜೇವರ್ಗಿ: ರಾಷ್ಟ್ರೀಯ ಸಮಾಜ ಪಕ್ಷದ ಕಲಬುರಗಿ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ದೇವೇಂದ್ರ ಹಣಮಂತ ಕ್ಯಾಸಪಳಿ ಅವರಿಗೆ ನೇಮಕ ಮಾಡಿ ಪಕ್ಷದ ರಾಜ್ಯ ಸಮಿತಿಯ ಆದೇಶ ಹೊರಡಿಸಿದೆ.

ತಮ್ಮ ಕಾರ್ಯ ವ್ಯಾಪ್ತಿಗೆ ಬರುವಂತಹ ಗ್ರಾಮಗಳಿಗೆ ಬೇಟಿಕೊಟ್ಟು ಎಲ್ಲಾ ಸಮಾಜದ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡು ಸಮಾಜದ ಜೊತೆ ಉತ್ತಮವಾದ ಬಾಂಧವ್ಯ  ಕಾಪಾಡಿಕೊಂಡು ಜನರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ  ಮಾಡುತ್ತಿರೆಂದು ಪರಿಗಣಿಸಿ ದೇವೇಂದ್ರ ಅವರಿಗೆ ಆಯ್ಕೆ ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.

Contact Your\'s Advertisement; 9902492681

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ನಿವೇದಿತಾ ಕುಕ್ರೆಜಾ ಹಾಗೂ ರಾಜ್ಯ ಸಂಯೋಜಕರಾದ ಧರ್ಮಣ್ಣ ತೊಂಟಾಪುರ ಅವರು ನೀಡುವ ಕಾರ್ಯಕ್ರಮಗಳನ್ನು ನಿಗದಿತ ಸಮಯದೊಳಗೆ ಪಕ್ಷದ ಶಿಸ್ತು ತತ್ವ ಸಿದ್ಧಾಂತಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸಬೇಕೆಂದು ಆದೇಶಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here