ಎಂ. ಎಸ್. ಆಯ್. ಪದವಿ ಕಾಲೇಜಿನಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ

0
50

ಕಲಬುರಗಿ: ಮೂಡನಂಬಿಕೆ, ಕಂದಾಚಾರದಿಂದ ವ್ಯಾಪಿಸಿದ ಸಮಾಜದಲ್ಲಿ ಮಹಿಳೆಯರಿಗೆ ವಿದ್ಯೆ ನೀಡುವ ಕಾಯಕವನ್ನು ಆಯ್ಕೆಮಾಡಿಕೊಂಡು ಅನೇಕ ಮಹಿಳೆಯರ ಜೀವನದ ಧಾರಿ ದೀಪವಾದ ಮಹಾನ ಚೇತನ ಶ್ರೀಮತಿ ಸಾವಿತ್ರಿಬಾಯಿ ಫುಲೆ ಎಂದು ಪ್ರೋ. ಶಿವಲೀಲಾ ಧೋತ್ರೆ ಹೇಳಿದರು.

ಎಂ. ಎಸ್. ಆಯ್. ಪದವಿ ಕಾಲೇಜಿನ ಆಯ್.ಕ್ಯೂ.ಎ. ಸಿ. ಮತ್ತು ಮಹಿಳಾ ಕೋಶಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶ್ರೀಮತಿ ಫುಲೆಯವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಪ್ರೋ. ಧೋತ್ರೆ ಯವರು ಶ್ರೀಮತಿ ಫುಲೆಯವರ ಜನ್ಮ, ವಿದ್ಯೆ, ಜೀವನ, ಸಂಸಾರ ಮತ್ತು ನೋಂದ ಜನರ ಪ್ರತಿ ತಮ್ಮನ್ನು ತಾವು ತೊಡಗಿಸಿಕೊಂಡಿದರು ಎಂದು ಹೇಳಿದರು.

Contact Your\'s Advertisement; 9902492681

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್. ಎ. ಪಾಟೀಲ ವಹಿಸಿದರು. ಕಾರ್ಯಕ್ರಮದ ಸ್ವಾಗತವನ್ನು ಪ್ರೋ. ಜಗದೇವಿ ಹಿರೇಮಠ ಮಾಡಿದರು. ವಂದನೆಯನ್ನು ಕು. ಐಶ್ವರ್ಯ ಮಠಪತಿ ಮಾಡಿದರು. ವೇದಿಕೆಯಲ್ಲಿ ಕಾಲೇಜಿನ ಆಯ್.ಕ್ಯೂ.ಎ. ಸಿ. ಸಂಯೋಜಕರಾದ ಡಾ. ಪ್ರೇಮಚಂದ ಚವ್ಹಾಣ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ಶ್ರೀಮತಿ ಗೀತಾ ಪಾಟೀಲ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here