ಆನ್‌ಲೈನ್ ಪರೀಕ್ಷೆಯನ್ನು ಮೊದಲ ಬಾರಿಗೆ ಆಯೋಜಿಸಿದ ಶರಣಬಸವ ವಿಶ್ವವಿದ್ಯಾಲಯ

0
52

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್‌ಗಳ ಪದವಿಪೂರ್ವ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪರೀಕ್ಷೆಯನ್ನು ಮೊದಲ ಬಾರಿಗೆ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸುವುದರ ಮೂಲಕ ವಿವಿಯು ಮತ್ತೊಂದು ಗರಿಮೆಗೆ ಪಾತ್ರವಾಗಿದೆ.

ಶರಣಬಸವ ವಿಶ್ವವಿದ್ಯಾಲಯವು ಈ ಭಾಗದಲ್ಲಿ ಡೀಮ್ಡ್ ಅಥವಾ ಖಾಸಗಿ ವಿಶ್ವವಿದ್ಯಾಲಯ ಸೇರಿದಂತೆ ಆನ್‌ಲೈನ್ ಪರೀಕ್ಷೆಗಳನ್ನು ನಡೆಸಿರುವ ಮೊದಲ ವಿಶ್ವವಿದ್ಯಾಲಯವಾಗಿದೆ.

Contact Your\'s Advertisement; 9902492681

ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಶರಣಬಸವಪ್ಪ ಅಪ್ಪಾಜಿ ಅವರು ಕಾಗದರಹಿತ ಪರೀಕ್ಷೆ ನಡೆಸಲು ಮುಂದಾಳತ್ವ ತೆಗೆದುಕೊಂಡಿದ್ದಾರೆ, ಇದು ಪಾರದರ್ಶಕದಿಂದ ಕೂಡಿದ್ದು, ಹಣ ಉಳಿತಾಯ ಮತ್ತು ಮೌಲ್ಯಮಾಪನದ ಸಮಯ ಉಳಿತಾಯ ಆನ್‌ಲೈನ್ ಪರೀಕ್ಷೆ ಮೂಲಕ ಸಾಧ್ಯವಾಗುತ್ತದೆ ಎಂದು ಸಾಧನೆಯಲ್ಲಿ ಭಾಗಿಯಾದ ಎಲ್ಲಾ ಸಿಬ್ಬಂದಿ ವರ್ಗಕ್ಕೂ ಅಭಿನಂದಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪೂಜ್ಯ ಮಾತೋಶ್ರೀ ದಾಕ್ಷಾಯಿಣಿ ಅವ್ವಾಜೀ ಅವರು ಈ ಯಶಸ್ಸಿನಿಂದ ವಿಶ್ವವಿದ್ಯಾಲಯದ ಗುಣಮಟ್ಟ ಸುಧಾರಿಸುವುದರಲ್ಲಿ ಬಹುದೂರ ಸಾಗಿ ಪರೀಕ್ಷೆ ಹಾಗೂ ಮೌಲ್ಯಮಾಪನ, ಫಲಿತಾಂಶ ಘೋಷಣೆ ಮಾಡುವುದರಲ್ಲಿ ಸಮಯ ಉಳಿಸಲು ಸಹಾಯಕವಾಗಲಿದೆ ಎಂದು ಹೇಳಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ್ ನಿಷ್ಠಿ ಸಹ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿದರು.

ಎಂಜಿನಿಯರಿಂಗ್ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಪರಿಸರ ಅಧ್ಯಯನದ ಆನ್‌ಲೈನ್ ಪರೀಕ್ಷೆಯನ್ನು ೫ ಬೇರೆ ಬೇರೆ ವಿಭಾಗದಲ್ಲಿ ನಡೆಸಲಾಯಿತು ಇದರಲ್ಲಿ ಸುಮಾರು ೬೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿದ್ದರು. ಹಾಗೂ ಶನಿವಾರ ನಡೆಸಲಾಗುವ ವೃತ್ತಿಪರ ಸಂವಹನದ ಪರೀಕ್ಷೆಯಲ್ಲಿ ಬ್ಯಾಚುಲರ್ ಆಫ್ ಕಂಪ್ಯೂಟರ್ ಸೈನ್ಸ್‌ನ ೨೦೦ ವಿದ್ಯಾರ್ಥಿಗಳು ಭಾಗವಹಿಸುವರು ಎಂದು ವಿವಿಯ ಕುಲಸಚಿವ ಡಾ.ಅನಿಲ್‌ಕುಮಾರ ಬಿಡವೆ ಹಾಗೂ ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಎಲ್ಲಾ ವಿಷಯಗಳ ಪರೀಕ್ಷೆ ಮತ್ತು ಮೌಲ್ಯಮಾಪನವನ್ನು ಆನ್‌ಲೈನ್ ಮುಖಾಂತರವೇ ಹಂತ ಹಂತವಾಗಿ ನಡೆಸಲಾಗುವುದು, ಈ ವಿಧಾನದಿಂದ ಮಾನವ ದೋಷ ಮತ್ತು ತ್ವರಿತಗತಿಯಲ್ಲಿ ಫಲಿತಾಂಶ ನೀಡುವಲ್ಲಿ ಉಪಯುಕ್ತ ಆಗುತ್ತದೆ ಎಂದು ಹೇಳಿದರು. ಇದೇ ವೇಳೆ ಉಪಕುಲಪತಿ ಡಾ.ವ್ಹಿ.ಡಿ. ಮೈತ್ರಿ ಮತ್ತು ಎನ್.ಎಸ್. ದೇವರ‍್ಕಲ್ ಅವರು ಕೂಡ ವಿವಿಯ ಸಿಬ್ಬಂದಿಗೆ ಅಭಿನಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here