ಕಲಬುರಗಿ: ಐವತ್ತು ವರ್ಷಗಳ ಹಿಂದೆ ಪ್ರಕಟಣೆ ಪ್ರಾರಂಭಿಸಿದ ಸತ್ಯಕಾಮ ಪ್ರಾದೇಶಿಕ ದಿನ ಪತ್ರಿಕೆ ಇದೆ 5 ರಂದು ಸಾಯಂಕಾಲ 4:30 ಘಂಟೆಗೆ ಅನ್ನಪೂರ್ಣ ಕ್ರಾಸ್ ಸಮೀಪದ ಕಲಾಮಂಡಳದಲ್ಲಿ ಉದ್ಘಾಟನೆಯನ್ನು ನೆರವೆಲಿದೆ.
ಈ ಕಾರ್ಯಕ್ರಮದ ಘನ ನೇತೃತ್ವವನ್ನು ಪೂಜ್ಯ ಶ್ರೀ.ಡಾ.ಜಗದ್ಗುರು ಸಾರಂಗಧರ ದೇಶಿ ಕೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು ಸಾನಿಧ್ಯವನ್ನು ಸೊನ್ನ ಸುಕ್ಷೇತ್ರದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ.ಕಾರ್ಯಕ್ರಮದ ಉದ್ಘಾಟನೆಯನ್ನು ಸೇಡಂ ಮತಕ್ಷೇತ್ರದ ಶಾಸಕರಾದ ಶ್ರೀ. ರಾಜಕುಮಾರ ಪಾಟೀಲ್ ತೇಲ್ಕೂರ ಇವರು ನೆರವೇರಿಸಲಿದ್ದಾರೆ.
ಅಧ್ಯಕ್ಷತೆಯನ್ನು ಕಲಾಮಂಡಳ ಟ್ರಸ್ಟ್ನ ಅಧ್ಯಕ್ಷರಾದ ಪೂಜ್ಯ ಶ್ರೀ. ಲಿಂಗರಾಜಪ್ಪ ಅಪ್ಪ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ದೈನಿಕದ ಸ್ಥಾನಿಕ ಸಂಪಾದಕರಾದ ಶ್ರೀ ದೇವಯ್ಯ ಗುತ್ತೇದಾರ ಆಗಮಿಸುತ್ತಿದ್ದು ಸದಾಶಯ ನುಡಿಗಳನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಸುಜಾತ ಜಂಗಮಶೆಟ್ಟಿಯವರು ಆಡಲಿದ್ದಾರೆ.
ಸತ್ಯಕಾಮ ಪತ್ರಿಕೆಯ ಸಂಪಾದಕರಾದ ಶ್ರೀ. ಪಿ.ಎಂ.ಮಣ್ಣೂರರವರು ಉಪಸ್ಥಿತರಿವರು ಎಂದು ಸಂಚಾಲಕರಾದ ಡಾ.ಎಸ್.ಎಸ್.ಗುಬ್ಬಿ,ಶಂಕರ ಕೋಡ್ಲಾ ಹಾಗೂ ಸಂಯೋಜಕ ರಾದ ಬಿ.ಎಚ್.ನಿರಗುಡಿ, ಚಾಮರಾಜ ದೊಡಮನಿ ,ಸತ್ಯಕಾಮ ಅಭಿಮಾನಿಗಳಲ್ಲಿ ವಿನಂತಿಸಿ ಸಭೆಗೆ ಆಗಮಿಸಲು ಕೋರಿದ್ದಾರೆ.