ಪ್ರೇಮಾ ಹೂಗಾರ ಅವರ ಗಜಲ್ ಬಂಧ ಕೃತಿ ಬಿಡುಗಡೆ ನಾಳೆ

0
144
ಕಲಬುರಗಿ: ಹೈ.ಕ.ಭಾಗದಲ್ಲಿ ಗಜಲ್ ಬರವಣಿಗೆಯಲ್ಲಿ ಹೆಚ್ಚು ಅಧ್ಯಯನಶೀಲರಾದ ಶ್ರೀಮತಿ ಪ್ರೇಮಾ ಹೂಗಾರ ಅವರ ಎರಡು ಕೃತಿಗಳ ಬಿಡುಗಡೆ ಸಮಾರಂಭ.
ಇದೇ ಭಾನುವಾರ 5 ರಂದು ಬೆಳಿಗ್ಗೆ 10.30 ಕ್ಕೆ ಕಲಬುರಗಿ ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ.
ಗಜಲ್ ಸಂಕಲನ ‘ಪ್ರಣೀತೆ’ ಗೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ದತ್ತಿ ಪ್ರಶಸ್ತಿ ಹಾಗೂ ಸೇಡಂನ ಅಮ್ಮ ಪ್ರಶಸ್ತಿ ಲಭಿಸಿದೆ.
ಈ ಪ್ರಣೀತೆ ಸಂಕಲನ ಗಜಲ್ ಲೋಕದಲ್ಲಿ ಖ್ಯಾತಿ ಪಡೆದಿದೆ. ಅಂತಹ ಲೇಖಕಿ ಪ್ರೇಮಾ  ಹೂಗಾರ ಅವರ ‘ಗಜಲ್ ಬಂಧ’ ಕೃತಿ ಬಿಡುಗಡೆಯಾಗಲಿದೆ. ಇನ್ನೊಂದು ಕೃತಿಯೆಂದರೆ, ಜಪಾನಿ ಭಾಷೆಯ ಹೈಕು. ಕನ್ನಡದಲ್ಲಿ ಇದೂವರೆಗೂ ಅಪರೂಪ ಎನ್ನಬಹುದಾದ ಹೈಕು ಬರೆದಿದ್ದಾರೆ. ಬಹುಶಃ ಹೈ.ಕ. ನೆಲದ ಮೊದಲ ಹೈಕು ಬರಹಗಾರ್ತಿ ಎನ್ನಬಹುದು.
ಹೀಗಾಗಿ ಬೀದರಿನ ಪ್ರೇಮಾ ಹೂಗಾರ ಅವರ ಈ ಎರಡೂ ಕೃತಿಗಳ ಬಿಡುಗಡೆಗೆ ನೀವು ಸಾಕ್ಷಿಯಾಗಬೇಕೆಂಬುದು ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿ ಎಚ್ ನಿರಗುಡಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here