ಮಕ್ಕಳ ಕಲಿಕೆಯಲ್ಲಿ ಅಂಗನವಾಡಿ ಕೇಂದ್ರದ ಪಾತ್ರ ಮಹತ್ತರ: ಸುಫಿಯಾ ಸುಲ್ತಾನ

0
180

ಸುರಪುರ: ಇಂದಿನ ಮಕ್ಕಳೆ ನಾಳೆಯ ಪ್ರಜೆಗಳು ಮಕ್ಕಳ ವಿದ್ಯಾವಂತರಾಗಿ ಉತ್ತಮ ಸಮಾಜ ನಿರ್ಮಾಣದಲ್ಲಿ ಭಾಗಿಯಾಗಲು ಹಾಗೂ ಮಕ್ಕಳ ಉನ್ನತ ಮಟ್ಟದ ವಿದ್ಯಾಬ್ಯಾಸಕ್ಕೆ ಅಂಗನವಾಡಿ ಕೇಂದ್ರದಲ್ಲಿ ಕಲಿಸುವ ಪಾಠಗಳೆ ಸಹಾಯಕವಾಗುತ್ತವೆ ಹೀಗಾಗಿ ಮಕ್ಕಳ ಕಲಿಕೆಯಲ್ಲಿ ಅಂಗವಾಡಿಯ ಪಾತ್ರ ಮಹತ್ತರವಾಗಿವೆ ಎಂದು ಗ್ರೇಡಗ ೨ ತಹಶಿಲ್ದಾರ ಸುಫಿಯಾ ಸುಲ್ತಾನ ಹೇಳಿದರು.

ನಗರದ ತಹಶಿಲ್ದಾರ ಕಚೇರಿ ಹತ್ತಿರವಿರುವ ಸ್ತ್ರೀ ಶಕ್ತಿ ಕೇಂದ್ರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಾದಗಿರ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುರಪುರ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಶಾಲಾ ಪೂರ್ವ ಶಿಕ್ಷಣ ತರಬೇತಿ ಕಾರ್ಯಕ್ರದ ಸಮಾರೋಪ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ಪ್ರಾಥಮಿಕ ಶಾಲೆಗೆ ಸಜ್ಜುಗೊಳಿಸುವ ಈ ಕಾರ್ಯಕ್ರಮವನ್ನು ತಮ್ಮ ಅಂಗನವಾಡಿ ಕೇಂದ್ರದಲ್ಲಿ ಸಮಗ್ರವಾಗಿ ಅಳವಡಿಸಿಕೊಳ್ಳಿ ಎಂದು ತಿಳಿಸಿದರು.

Contact Your\'s Advertisement; 9902492681

ಕಲಿಕಾ ಟ್ರಸ್ಟ್ ಸಂಯೋಜಕಿ ಹಾಗೂ ಸಂಪನ್ಮೂಲ ವ್ಯಕ್ತಿ ಮಲ್ಲಮ್ಮ ಬಿರಾದರ್ ಮಾತನಾಡಿ ಶಾಲಾ ಪೂರ್ವ ಶಿಕ್ಷಣ ಎನ್ನುವ ಕಾರ್ಯಕ್ರಮದಿಂದ ಮಕ್ಕಳಲ್ಲಿ ಆಯಾ ಕಾಲಕ್ಕೆ ತಕ್ಕಂತೆ ಹೇಗೆ ತಮ್ಮನ್ನು ತಾವುಗಳು ಸಿದ್ದರಾಗಬೇಕು ಮತ್ತು ಒಂದನೆ ತರಗತಿಯಲ್ಲಿ ಕಲಿಸುವ ಪಾಠ ಮತ್ತು ಪದ್ಯಗಳನ್ನು ಕಲಿಸುವ ಯೋಜನೆಯಾಗಿದೆ ಎಂದು ಕಾರ್ಯಕ್ರಮದಲ್ಲಿ ಸಮಗ್ರವಾಗಿ ತರಬೇತಿ ನೀಡಿದರು.

ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಮೀನಾಕ್ಷಿ ಪಾಟೀಲ,ಶಶಿಕಲಾ, ಪದ್ಮಾವತಿ ವೇದಿಕೆಯಲ್ಲಿದ್ದರು ಕಲ್ಲದೇವನಹಳ್ಳಿ ವಲಯದ ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here