ಮಾನವೀಯ ಮೌಲ್ಯಗಳನ್ನು ಬೆಳೆಸಲು ಕುವೆಂಪು ಸಾಹಿತ್ಯ ಅವಶ್ಯಕ: ಬಡಿಗೇರ

0
93

ಚಿತ್ತಾಪುರ: ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಕುವೆಂಪು ಅವರ ಸಾಹಿತ್ಯ ಪೂರಕವಾಗಿದೆ. ಕುವೆಂಪು ಅವರಂತಹ ಶ್ರೇಷ್ಠಕವಿ, ದಾರ್ಶನಿಕ ಚಿಂತನೆಗಳನ್ನು ಅರಿತುಕೊಂಡು ನಮ್ಮ  ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ ಎಂದು ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸುರೇಶ್ ಬಡಿಗೇರ್ ಹೇಳಿದರು.

ವಿಶ್ವ ಜನ ಸೇವಾ ಸಂಸ್ಥೆ ಮತ್ತು ನಾಗಾವಿ ನಾಡು ಸಂಗೀತ ಕಲಾ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ಅವರ 115ನೇ ಜನ್ಮದಿನೋತ್ಸವದ ನಿಮಿತ್ಯವಾಗಿ “ರಾಮಾಯಣ ದರ್ಶನಂ” ಮಹಾಕಾವ್ಯದ ಒಂದು ಅವಲೋಕನ ಎಂಬ ಕಾರ್ಯಕ್ರಮವನ್ನು ಪಟ್ಟಣದ ಹೊರವಲಯದ ಗಂಗಾಪರಮೇಶ್ವರಿ ಬಿ.ಇಡಿ ಕಾಲೇಜಿನಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ

Contact Your\'s Advertisement; 9902492681

ಕುವೆಂಪು ಅವರು ವಿಶ್ವಮಾನವ ತತ್ವವನ್ನು ಸಾರುವ ಮೂಲಕ ಎಲ್ಲರ ಹೃದಯದಲ್ಲಿ ವಿರಾಜಮಾನರಾಗಿ ಉಳಿದಿದ್ದಾರೆ. ಅವರ ಸಾಹಿತ್ಯವನ್ನು ಅಧ್ಯಯನ ಮಾಡುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯ ಇದೆ ಎಂದರು.

ಕನ್ನಡದ ಅಗ್ರಮಾನ್ಯ ಕವಿ. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ ಯುಗದ ಕವಿ, ಜಗದ ಕವಿ, ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ,ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ, ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು.

ರಾಮಾಯಣ ದರ್ಶನಂ  ಅರ್ಥ ಅಯಣ ಅಂದರೆ ರಾಮನ ಚಲನೆಯಲ್ಲ ಮಾನಸಿಕ ಚಲನೆ. ದರ್ಶನಂ ಎಂದರೆ ನಮ್ಮನ್ನು ನಾವು ಅರ್ಥೈಸಿಕೊಳ್ಳುವುದು. ಕುವೆಂಪು ಅವರು ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ, ಜೀವನ ಚರಿತ್ರೆಗಳನ್ನು ಓದಿಕೊಂಡ ನಮ್ಮ ನಾಡಿಗೆ ಕೊಡುಗೆಯನ್ನು ನೀಡಿದವರು ಎಂದು ಹೇಳುತ್ತಾ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಎಂಬ ಮಹಾಕಾವ್ಯದ ಕುರಿತು ವಿದ್ಯಾರ್ಥಿಗಳಿಗೆ ಸಹ ವಿಸ್ತಾರವಾಗಿ ಉಪನ್ಯಾಸವನ್ನು ಡಾ. ಮಲ್ಲಿನಾಥ ತಳವಾರ ನೀಡಿದರು.

ಈ ಕಾರ್ಯಕ್ರಮದಲ್ಲಿ ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಶ್ರೀಮತಿ ಅಮರೇಶ್ವರಿ ಬಾಬುರಾವ್ ಚಿಂಚನಸೂರ, ವಿಶ್ವ ಜನ ಸೇವಾ ಸಂಸ್ಥೆ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ, ಮುಖ್ಯ ಅತಿಥಿಗಳಾದ ವಿಜಯಕುಮಾರ ಬಿರಾದಾರ್, ನಟರಾಜ್ ಶಿಲ್ಪಿ, ಶ್ರೀನಿವಾಸ ಜಗಲಿಮನಿ, ವಿರೂಪಾಕ್ಷರುದ್ರ ಬೇಣಿ, ಶ್ರೀಮತಿ ಪಂಕಜಾ ಬಿರಾದಾರ್, ರೇವಣಸಿದ್ದಯ್ಯ ಹಿರೇಮಠ, ಮಹೇಬೂಬ್ ನಾಯಕ್, ದಾನೇಶ್ ಕುಲಕರ್ಣಿ, ರಾಘವೇಂದ್ರ ರಾವೂರ, ಶಿವಶರಣಪ್ಪ ಪಾಟೀಲ್, ಕನಿಜಾ ಫಾತಿಮಾ,ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here